174

ಭಾರತೀಯ ತಂತ್ರಜ್ಞಾನ ರಸಪ್ರಶ್ನೆ

ಇಂದು ವಿಶ್ವಕರ್ಮ ದಿನಾಚರಣೆ. ವಿಶ್ವಕರ್ಮನ ಆರಾಧನೆ ಋಗ್ವೇದದಷ್ಟು ಪ್ರಾಚೀನವಾದುದು. ವಿಶ್ವಕರ್ಮನೇ ಮುಂದೆ ಸಕಲ ತಂತ್ರಗಾರಿಕೆಯ ಅಧಿದೇವತೆಯಾಗುತ್ತಾನೆ.ಪ್ರಸ್ತುತ ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ ಉನ್ನತೋನ್ನತ ಕೆಲಸಗಳಿಂದ ತಂತ್ರಗಾರಿಕೆಯ—ತಂತ್ರಜ್ಞರ ಹಿರಿಮೆಯನ್ನು ಪುನರ್ಜೀವನಗೊಳಿಸಿದರು. ಅವರ ಜ್ಞಾಪಕಾರ್ಥವಾಗಿ ಅವರು ಹುಟ್ಟಿದ ದಿನವಾದ ಸೆಪ್ಟೆಂಬರ್ ೧೫ರಂದು ಅಭಿಯಂತರರ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ಭಾರತೀಯ ಇತಿಹಾಸದಲ್ಲಿ ಲೋಹಶಾಸ್ತ್ರ, ನೀರಾವರಿ ಮತ್ತು ರಸ್ತೆ ಕಾಮಗಾರಿಯಲ್ಲಿ ಕೆಲವು ವಿಶೇಷ ಸಾಧನೆಗಳನ್ನು ಸ್ಮರಿಸಿ ಸಂಭ್ರಮಿಸೋಣ. ಈ ರಸಪ್ರಶ್ನೆ ನಮ್ಮ ಮುಂಚಿನ “ ಭಾರತದಲ್ಲಿ ತಂತ್ರಜ್ಞಾನ ( Technologies in Bharat)” ಎಂಬ ರಸಪ್ರಶ್ನೆಯ ಮುಂದುವರಿದ ಭಾಗ ಎಂದು ತಿಳಿದುಕೊಳ್ಳಬಹುದು. ಈ ರಸಪ್ರಶ್ನೆಯು indiyatra.in ನಲ್ಲಿ ಲಭ್ಯವಿದೆ. ೫ ಅದೃಷ್ಟಶಾಲಿ ವಿಜೇತರು ಬಿಬೇಕ್ ದೇಬ್ರಾಯ್ ಅವರ ಭಗವದ್ಗೀತೆ ಹೊತ್ತಿಗೆಯನ್ನು ಪ್ರಶಸ್ತಿಯಾಗಿ ಪಡೆಯಬಹುದು.

ಅಭಿಯಂತರರ ದಿನಾಚರಣೆಯನ್ನು ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜ್ಞಾಪಕಾರ್ಥವಾಗಿ ಆಚರಿಸಲಾಗುತ್ತದೆ. ಅವರು ಒಂದು ಅಣೆಕಟ್ಟನ್ನು ಕಟ್ಟಿ, ಇಂದಿಗೂ ಕರ್ನಾಟಕ ಮತ್ತು ತಮಿಳುನಾಡಿಗೆ ನೀರು ಒದುಗುವಂತೆ ಮಾಡಿದ್ದಾರೆ. ಈ ಅಣೆಕಟ್ಟಿನ ಹೆಸರೇನು?

ಸಿವಾಗಲೈ ಮತ್ತು ಇನ್ನಿತರ ಜಾಗಗಳಲ್ಲಿ ಸುಮಾರು ೫೦೦೦ ವರ್ಷಗಳ ಹಿಂದೆಯೇ ಕಬ್ಬಿಣವನ್ನು ಪುಟಮಾಡಿ ಪರಿಷ್ಕರಿಸಿರುವ ಕುರುಹು ಸಿಕ್ಕಿದೆ. ಸಿವಾಗಲೈ ಎಲ್ಲಿದೆ?

ತಮಿಳುನಾಡಿನ ಕಲ್ಲಣೈ ಅಣೆಕಟ್ಟನ್ನು ಸಾಮಾನ್ಯ ಶಕೆ ಒಂದನೇ ಶತಮಾನದಿಂದ ಉಪಯೋಗಿಸುತ್ತಿದ್ದಾರೆ. ಇದು ಭಾರತದಲ್ಲಿ ಇಂದಿಗೂ ಉಪಯೋಗವಾಗುತ್ತಿರುವ ಅತ್ಯಂತ ಪ್ರಾಚೀನ ಅಣಿಕಟ್ಟು. ಇದನ್ನು ಯಾವ ರಾಜವಂಶ ನಿರ್ಮಿಸಿತು?

ಈ ರಾಜವಂಶದ ಶಿಲ್ಪಗಳು ಉನ್ನತ ಮಟ್ಟದ ಹೊಳಪನ್ನು ತೋರುತ್ತದೆ. ಇದಕ್ಕೆ ಉತ್ತಮ ಮಾದರಿ ಪಾಟ್ನಾ ವಸ್ತುಸಂಗ್ರಹಾಲಯದ ದಿದಾರ್ಗಂಜ್ ಯಕ್ಷಿ ಎಂಬ ಶಿಲ್ಪ. ಈ ರಾಜವಂಶದ ಹೆಸರೇನು?

ಮೆಟ್ಟಿಲು ಬಾವಿಗಳು, ಭಾರತೀಯ ಅಲಂಕಾರ ರಸಿಕತೆ ಮತ್ತು ಜನೋಪಕಾರಿ ಉದ್ದೇಶ ಎರಡನ್ನೂ ಒಟ್ಟಿಗೆ ಪ್ರದರ್ಶಿಸುತ್ತವೆ. ರಾಣಿ ಕಿ ವಾವ್ ಅಥವಾ ರಾಣಿಯ ಮೆಟ್ಟಿಲುಬಾವಿ ಯಾವ ರಾಜ್ಯದಲ್ಲಿ ಇದೆ?

ಈ ರಾಜವಂಶವು ಅಷ್ಟು ಪ್ರಚಲಿತದಲ್ಲಿಲ್ಲವಾದುರೂ ಹಲವಾರು ವಿಶೇಷವಾದ ನಕ್ಷತ್ರಾಕಾರದ ಗುಡಿಗಳನ್ನು ಬಳಪದ ಕಲ್ಲಿನಿಂದ ನಿರ್ಮಿಸಿದೆ. ಈ ಗುಡಿಗಳು ಅತ್ಯಂತ ನಾಜೂಕಾದ ಕೆತ್ತನೆಗಳನ್ನು ಒಳಗೊಂಡಿದೆ.ದೇವಾಲಯದಲ್ಲಿ ಲೇಥ್ ಯಂತ್ರದಲ್ಲಿ ಹೊರಹೊಮ್ಮುವಂತಹ ನುಣುಪಾದ ಮತ್ತು ಬೆಳಕಿಗೆ ಹೊಳೆಯುವಂತಹ ಕಂಬಗಳಿವೆ. ಈ ಅರಸ ವಂಶ ಯಾವುದು?

ಹಂಪಿಯ ವಿಠ್ಠಲ ದೇವಾಲಯ ಮತ್ತು ಇತರ ಅನೇಕ ದೇವಾಲಯಗಳಲ್ಲಿ ವಿಶೇಷ ಧ್ವನಿ ವೈಶಿಷ್ಟ್ಯವಿದೆ. ಅದು ಯಾವುದು?

ಗಾ-ಯಮುನಾ ದೋಆಬ್ ಪ್ರದೇಶದಲ್ಲಿ ವ್ಯಾಪಕವಾದ ಕಾಲುವೆ ನೀರಾವರಿ ವ್ಯವಸ್ಥೆಯನ್ನು ನಿರ್ಮಿಸಿದ ಮಧ್ಯಯುಗದ ಸುಲ್ತಾನ್ ಯಾರು?

ಶೇರ್ ಶಾಹ್ ಸುರಿ ಸದಾ “ಗ್ರ್ಯಾಂಡ್ ಟ್ರಂಕ್ ರಸ್ತೆ” ಯೊಂದಿಗೆ ಸಂಭಂದಿತನಾಗಿದ್ದಾನೆ. ಇದು ಯಾವ ಎರಡು ಸ್ಥಳಗಳನ್ನು ಸಂಪರ್ಕಿಸುತ್ತದೆ?

ನಮ್ದಾಂಗ್ ಶಿಲಾ ಸಕು ಒಂದು ಕಲ್ಲನ್ನು ಕತ್ತರಿಸಿ ಮಾಡಿದ ರಸ್ತೆ ಸೇತುವೆ. ಇದು ಎಲ್ಲಿದೆ?

ಈ ಯುನೆಸ್ಕೋ ಪರಂಪರೆ ತಾಣವು ವೆಂಟುರಿ ಪರಿಣಾಮದಿಂದ ತಂಪು ಒದಗಿಸುತ್ತದೆ ಮತ್ತು ಇದರ ಪ್ರಸಿದ್ಧ ನೋಟ ಹಿಂಭಾಗದಿಂದ ಬರುತ್ತದೆ. ಅದು ಯಾವುದು?

ಕೇರಳದ ಆರಣ್ಮುಳ ಸ್ಥಳವು ಗಾಜಿಲ್ಲದೆ ಕನ್ನಡಿ ತಯಾರಿಸುವ ಜಿಐ ತಂತ್ರಕ್ಕಾಗಿ ಪ್ರಸಿದ್ಧ. ಇದರಲ್ಲಿ ಏನು ಬಳಸುತ್ತಾರೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In