ಮಹರ್ಷಿ ವಿದ್ಯಾರಣ್ಯರ ಪ್ರಭಾವದಿಂದ, ವಿಜಯನಗರದ ಸಂಸ್ಥಾಪಕರಾದ ಹಕ್ಕ-ಬುಕ್ಕರೇ ಈ ಸಾಮ್ರಾಜ್ಯದ ಆರಂಭಿಕ ದೊರೆಗಳು. ವಿದ್ಯಾರಣ್ಯರು ಶೃಂಗೇರಿಯ ದಕ್ಷಿಣಾಮ್ನಾಯ ಪೀಠದ ಅಧಿಪತಿಗಳಾಗಿದ್ದರು. ಹಕ್ಕ-ಬುಕ್ಕರೊಮ್ಮೆ ಬೇಟೆಗೆ ಹೋಗಿದ್ದಾಗ, ಮೊಲವೊಂದು ಬೇಟೆ ನಾಯಿಗಳ ಮೇಲೆ ತಿರುಗಿ ಬಿದ್ದು ಹೋರಾಡಲು ಅಣಿಯಾದದ್ದನ್ನು ಕಂಡು ಚಕಿತರಾಗಿ, ಆ ವಿಷಯವನ್ನು ಗುರುಗಳಾದ ವಿದ್ಯಾರಣ್ಯರಿಗೆ ತಿಳಿಸಿದರು. ವಿದ್ಯಾರಣ್ಯ ಯತಿಗಳು ಆ ಸ್ಥಳದಲ್ಲಿಯೇ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಸಲಹೆಯನ್ನು ಇತ್ತರೆಂಬ ಲೋಕೋಕ್ತಿ ಬಹಳ ಪ್ರಚಲಿತವಾದುದು. ಇದಿಷ್ಟೇ ಅಲ್ಲದೇ ಹಕ್ಕ-ಬುಕ್ಕರ ಬಗೆಗಿನ ಇತರ ಜನಪ್ರಿಯ ಕಥೆಗಳೆಂದರೆ, ಕನ್ನಡ ಮೂಲದರವರಾದ ಇವರು, ಹೊಯ್ಸಳರ ಸಾಮಂತರಾಗಿದ್ದು, ಅವರ ಪತನಾನಂತರ, ವಿಶ್ವಸ್ಥರಾಗಿದ್ದ ಇವರಿಗೆ ಅಧಿಕಾರವು ಹಸ್ತಾಂತರವಾಗಿ, ವಿಜಯನಗರವನ್ನು ಸ್ಥಾಪಿಸಿದರು ಎಂಬುದು. ಮತ್ತೊಂದು ಕಥೆಯ ಪ್ರಕಾರ, ತೆಲುಗಿನ ಮೂಲದವರಾದ ಇವರು, ಕಾಕತೀಯರ ಖಜಾನೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಅವರ ಪತನವಾಗಲು ಪಲಾಯನಗೈದರು. ಇವರನ್ನು ಸೆರೆಹಿಡಿದ ದೆಹಲಿಯ ಸುಲ್ತಾನನ ಕಡೆಯವರು ಇವರನ್ನು ಕರೆದೊಯ್ದು ಮತಾಂತರಿಸಿದರು. ಹಕ್ಕ-ಬುಕ್ಕರು ಹೇಗೋ ತಪ್ಪಿಸಿಕೊಂಡು, ಸ್ವಧರ್ಮಕ್ಕೆ ಮರಳಿ, ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು ಎಂದು.
ಚಿತ್ರ ಸಹಕಾರ: ವಿಕಿಮೀಡಿಯಾ; ಹಕ್ಕ-ಬುಕ್ಕರು ವಿದ್ರಾರಣ್ಯ ಮಹರ್ಷಿಗಳನ್ನು ಭೇಟಿಯಾಗುತ್ತಿರುವ ಸಂದರ್ಭ.