ದ್ರೌಪದಿಗೆ ಪ್ರತಿ ಪಾಂಡವನಿಂದಲೂ ಒಬ್ಬ ಮಗ ಹುಟ್ಟಿದ್ದನು.ಅವರ ಹೆಸರುಗಳು ಇಂತಿವೆ – ಪ್ರತಿವಿಂಧ್ಯ, ಸುತಸೋಮ, ಶೃತಕರ್ಣ, ಶತನೀಕ ಮತ್ತು ಸುತಸೇನ.ಈ ಐವರನ್ನು ಉಪಪಾಂಡವರೆಂದು ಕರೆಯುತ್ತಾರೆ. ಇವರುಗಳು ತಂದೆಯರಂತೆ ಮಹಾ ಶೂರರಾಗಿದ್ದರು.ದುರ್ಯೋಧನನ ಮರಣದ ನಂತರ , ಕೌರವರ ಕಡೆ ಉಳಿದುಕೊಂಡಿದ್ದ ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮ, ಕೃಪಾಚಾರ್ಯ ಮತ್ತು ಕೃತವರ್ಮ, ಪಾಂಡವರ ಬಿಡಾರವನ್ನು ರಾತ್ರಿ ಪ್ರವೇಶಿಸುತ್ತಾರೆ. ಅಶ್ವತ್ಥಾಮ ಉಪಪಾಂಡವರನ್ನು ರಾತ್ರಿ ಅವರು ಮಲಗಿರುವ ಹೊತ್ತಿನಲ್ಲಿ ಬಂದು ಸಂಹರಿಸುತ್ತಾನೆ.
ಈ ಸಂದರ್ಭದಲ್ಲಿ ಪಾಂಡವರು, ದ್ರೌಪದಿ ಮತ್ತು ಕೃಷ್ಣನು ಆ ಯುದ್ಧ ಬಿಡಾರದಲ್ಲಿ ಇರುವುದಿಲ್ಲ. ಮಕ್ಕಳ ದುರ್ಮರಣದ ವಿಚಾರ ತಿಳಿದಾಗ ದ್ರೌಪದಿ ಬಹಳಷ್ಟು ರೋಸಿ ಗೋಳಿಡುತ್ತಾಳೆ.ಇದು ಅವಳ ಜೀವನದಲ್ಲೇ ಅತ್ಯಂತ ಶೋಚನೀಯ ಪ್ರಸಂಗ.
ಜಾನಪದ ಕಥೆಗಳ ಪ್ರಕಾರ, ದ್ರೌಪದಿ ಮತ್ತು ಧರ್ಮರಾಯನಿಗೆ ಸೂಥನು ಎಂಬ ಮಗಳು ಕೂಡ ಇದ್ದಳು. ಈಕೆ ಕೃಷ್ಣ ಮತ್ತು ಸತ್ಯಭಾಮೆಯರ ಮಗನಾದ ಸ್ವರ್ಭಾನುವನ್ನು ಮದುವೆಯಾಗಿದ್ದಳು.
ಮೇಲಿನ ದ್ರೌಪದಿ ಮತ್ತು ಪಂಚ ಪಾಂಡವರ ವರ್ಣಚಿತ್ರವನ್ನು ರಾಜ ರವಿವರ್ಮನು ರಚಿಸಿದ್ದಾನೆ. ಇದನ್ನು ವಿಕಿಮೀಡಿಯ ಇಂದ ತೆಗೆದುಕೊಳ್ಳಲಾಗಿದೆ.