121

ಭಾರತದಲ್ಲಿ ಪೊರ್ಚುಗೀಸರು

ಇಂದು ಡಿಸೆಂಬರ್ ೧೯, ೧೯೬೧ರಲ್ಲಿ ಗೋವಾ ಪೋರ್ಚುಗೀಸರ ಆಡಳಿತದಿಂದ ವಿಮೋಚನೆಗೊಂಡಿತು. ಐರೋಪ್ಯ ವಸಾಹತುಶಾಹಿಗಳ ಪೈಕಿ ಪೋರ್ಚುಗೀಸರೇ ಭಾರತಕ್ಕೆ ಮೊದಲು ಬಂದಿದ್ದು. ಇವರು ೧೪೯೮ರಲ್ಲಿ ಬಂದು ೧೯೬೧ರ ತನಕ ಇದ್ದರು.
ಮೊದಲಿಗೆ ಕಡಲ ತಡಿಯ ವ್ಯಾಪಾರದ ಸ್ವಾಮ್ಯವನ್ನು ‌ಸಾಧಿಸಿದ ‍ಪೋರ್ಚುಗೀಸರು ಕಾಲ ಕ್ರಮೇಣ ಇದನ್ನು ಡಚ್ಚರಿಗೆ ಮತ್ತು ಬ್ರಿಟೀಷರಿಗೆ ಬಿಡಬೇಕಾಯಿತು.
ಭಾರತದಲ್ಲಿ ಹಲವಾರು ಕಡೆ ಪೋರ್ಚುಗೀಸರ ಪ್ರಭಾವ ಕಡಿಮೆಯಾಗುತ್ತಿದ್ದರೂ ಗೋವೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ಚೆನ್ನಾಗಿ ಹಿಡಿದಿದ್ದರು.
ಈ ರಸಪ್ರಶ್ನೆ ಭಾರತದಲ್ಲಿ ಪೊರ್ಚುಗೀಸರ ಹಲವಾರು ಪ್ರಮುಖ ಘಟನಾವಳಿಗಳು,ವಿಚಾರಗಳು ಮತ್ತು ವ್ಯಕ್ತಿಗಳನ್ನು ಪರಿಚಯಿಸುತ್ತದೆ.ರಸಪ್ರಶ್ನೆಗೆ ಮೂಲ ಆಕರಗಳು ಎಂ.ಎನ್. ಪಿಯರ್ಸನ್ ಅವರ “ ಪೋರ್ಚುಗೀಸ್ ಇನ್ ಇಂಡಿಯಾ”” ಮತ್ತು ಎ.ಕೆ. ಪ್ರಿಯೋಲ್ಕರ್ ಅವರ “ ದಿ ಗೋವಾ ಇಂಕ್ವಿಸಿಷಣ್ “” ಎಂಬ ಹೊತ್ತಿಗೆಗಳು.

ಓರ್ವ ಪ್ರಸಿದ್ಧ ಪೋರ್ಚುಗೀಸರ ನಾವಿಕ ಭಾರತವನ್ನು ೧೪೯೮ರಲ್ಲಿ ಕಡಲ ಮಾರ್ಗವಾಗಿ ತಲುಪಿದ. ಅವನ ಹೆಸರೇನು?

ಗೋವೆಯನ್ನು ೧೫೧೦ರಲ್ಲಿ ಪೋರ್ಚುಗೀಸರು ವಶಪಡಿಸಿಕೊಳ್ಳುವ ಮೊದಲು, ಅದು ಯಾರ ಅಧೀನದಲ್ಲಿ ಇದ್ದಿತು?

ಯಾವ ಮಧ್ಯಯುಗದ ಕ್ಯಾಥೋಲಿಕ್ ಇಗರ್ಜಿ ಸಂಸ್ಥಾನವು ಗೋವಾದಲ್ಲಿ ಕ್ರೈಸ್ತರಲ್ಲದ ಅನ್ಯ ಮತದವರನ್ನು ಬಹಳಷ್ಟು ಹಿಂಸಿಸಿತು?

ಯಾವ ಜೆಸುಇಟ್ ಸಂತನನ್ನು “ ಗೋಇಂಚೋ ಸಾಹೇಬ್” ( ಗೋವೆಯ ರಕ್ಷಕ) ಎಂದು ಕರೆಯುತ್ತಾರೆ?

ಯಾವ ಪ್ರಾಚೀನ ಧಾರ್ಮಿಕ ಪಂಗಡದವರನ್ನು ಪೋರ್ಚುಗೀಸರು ಕೇರಳದಲ್ಲಿ ಹಿಂಸಿಸಿದರು?

ಭಗವತಿ ದೇವಿಯು ಪ್ರತಿ ವರ್ಷವೂ ಹೊಸ ಗೋವಾದ ಮಾರ್ಸೆಲ್‌ನಲ್ಲಿರುವ ಗುಡಿಯಿಂದ ಹಳೆ ಗೋವಾದ ತಿಸವಾಡಿಯಲ್ಲಿರುವ ಗುಡಿಗೆ ಒಂದು ಯಾತ್ರೆಯನ್ನು ಕೈಗೊಳ್ಳುತ್ತಾರೆ. ಈ ಯಾತ್ರೆಯು ಯಾವ ಘಟನೆಯನ್ನು ಸ್ಮರಿಸುತ್ತದೆ?

ಯಾವ ಮರಾಠ ನಾಯಕನು ೧೬೮೩ರಲ್ಲಿ ಗೋವೆಯನ್ನು ಬಹುಪಾಲು ವಿಮುಕ್ತಿಗೊಳಿಸಿದನು?

ಭಾರತದ ಯಾವ ನಗರವನ್ನು ಪೋರ್ಚುಗೀಸರು ಬ್ರಿಟೀಷರಿಗೆ ಡೌರಿ ( ವರದಕ್ಷಿಣೆ) ರೂಪದಲ್ಲಿ ಕೊಟ್ಟರು?

ಪೋರ್ಚುಗೀಸರು ಭಾರತದಿಂದ ಸಂಬಾರ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದರು.ಭಾರತಕ್ಕೆ ಏನನ್ನು ಮುಖ್ಯವಾಗಿ ಆಮದು ಮಾಡಿಕೊಳ್ಳುತ್ತಿದ್ದರು?

ಇಂದಿನ ಭಾರತದ ಒಂದು ನೆಚ್ಚಿನ ತರಕಾರಿಯನ್ನು ಮೊದಲ ಬಾರಿಗೆ ಪೋರ್ಚುಗೀಸರು ನಮಗೆ ಪರಿಚಯಿಸಿದರು. ಅದು ಯಾವುದು?

ಪೋರ್ಚುಗೀಸರು ಒಂದು ಅದ್ಭುತ ಐರೋಪ್ಯ ಆವಿಷ್ಕಾರವನ್ನು ಗೋವೆಯ ಒಂದು ಕಟ್ಟಡದಲ್ಲಿ ಇರಿಸಿದ್ದರು. ಅ ಆವಿಷ್ಕಾರ ಯಾವುದು?

ಭಾರತದ ಯಾವ ಹಳೆಯ ಸಾಮಾಜಿಕ ವ್ಯವಸ್ಥೆಯನ್ನು ಇಂದು ಪೋರ್ಚುಗೀಸ್ ಶಬ್ದದಿಂದ ಈಗ ವಿವರಿಸಲಾಗುತ್ತದೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In