158

ವಿವೇಕಾನಂದ ಸಂಕ್ರಾಂತಿ ರಸಪ್ರಶ್ನೆ

ಜನವರಿ 12, 1863 , ಸಂಕ್ರಾಂತಿಯ ಮುಂಜಾನೆಯಂದು ಸ್ವಾಮಿ ವಿವೇಕಾನಂದರ ಜನನವಾಯಿತು. ಮಕರ ಸಂಕ್ರಾಂತಿಯು ಸೂರ್ಯನ ಊರ್ಧ್ವಮುಖ /ಉತ್ತರ ದಿಕ್ಕಿನಡೆ ನಡೆಯುವ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ಈ ಪ್ರಯಾಣ ಬೆಳಕು ಹಾಗೂ ಆಸೆಯ ಚಿಗುರಿನ ಪ್ರತೀಕ. ಇದಕ್ಕನುಗುಣವಾಗಿ, ವಿವೇಕಾನಂದರು ಭಾರತಕ್ಕೆ ಆಧ್ಯಾತ್ಮದ ಕಡೆಗೆ ಒಂದು ಹೊಸ ಯಾತ್ರೆಯನ್ನು ಪ್ರಸ್ತುತ ಪಡಿಸಿ ದೇಶದ ಸುಪ್ತ ಚೇತನವನ್ನು ಎಚ್ಚರಿಸಿದರು. ಸಾರ್ವಜನಿಕರ ಗಮನದಲ್ಲಿ 10ವರ್ಷಗಳಷ್ಟೇ ಕಾಲ ಕಳೆದರೂ, ಅವರು ಜಗತ್ತನ್ನು ಸದಾ ಕಾಲಕ್ಕೆ ಬದಲಾಯಿಸಿಬಿಟ್ಟರು.
1953 ಸ್ವಾಮಿ ನಿಖಿಲಾನಂದ ಅವರು ಬರೆದ ಜೀವನಚರಿತ್ರೆಯನ್ನು ಮುಖ್ಯ ಆಧಾರವಾಗಿಟ್ಟುಕೊಂಡು ಕಲಿಯೋಣ.

ಹುಟ್ಟಿದಾಗ ಹೆತ್ತವರು ಸ್ವಾಮಿ ವಿವೇಕಾನಂದರಿಗೆ ಇಟ್ಟ ಹೆಸರೇನು ?

2. ವಿವೇಕಾನಂದರ ಗುರು ಶ್ರೀರಾಮಕೃಷ್ಣ ರು ಯಾವ ಕಾಳಿಮಾತೆಯ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು?

3. ಅವರು ಧ್ಯಾನ ಮಾಡಿ ತಮ್ಮ ಬೋಧನೆಗಳನ್ನು ಜಗತ್ತಿಗೆ ಕೊಂಡೊಯ್ಯಲು ಸಂಕಲ್ಪ ಮಾಡಿದ ‘ವಿವೇಕಾನಂದ ಶಿಲೆ’ ನಮಗೆ ಎಲ್ಲಿ ಕಾಣಲು ಸಿಗುತ್ತದೆ?

4. ರಾಜಸ್ಥಾನದಲ್ಲಿರುವ ಸಣ್ಣ ರಾಜಪ್ರಭುತ್ವದ ಖೇತ್ರಿಯ ರಾಜನು ವಿವೇಕಾನಂದರ ಜೀವನಚರಿತ್ರೆಗೆ ನೀಡಿದ ಪ್ರಮುಖ ಕೊಡುಗೆ ಏನು?

5. ವಿವೇಕಾನಂದರನ್ನು ಪ್ರಸಿದ್ಧರಾಗಿಸಿದ ಅವರ ಧರ್ಮ ಸಂಸತ್ತಿನ ಭಾಷಣ ಅಮೇರಿಕಾದ ಯಾವ ನಗರದಲ್ಲಿ ನಡೆಯಿತು?

6.ಚಿಕಾಗೋ ನಗರದಲ್ಲಿ 1893ರ ಸರ್ವಧರ್ಮಗಳ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರೊಂದಿಗೆ ಭಾಗವಹಿಸಿದ ಈ ಮಹಾನ್ ರಾಷ್ಟ್ರವಾದಿ ಮಹಿಳೆ ಯಾರು?

7. ನ್ಯೂಯಾರ್ಕ್ ನಗರದ ಥೌಸಂಡ್ ಐಲ್ಯಾಂಡ್ ಪಾರ್ಕ್ ಧ್ಯಾನ ಕೇಂದ್ರದಲ್ಲಿ, ಸ್ವಾಮಿ ವಿವೇಕಾನಂದರು ಎಷ್ಟು ಮಂದಿ ಅಮೆರಿಕನ್ ಶಿಷ್ಯರಿಗೆ ಸಂನ್ಯಾಸ ದೀಕ್ಷೆ ಕೊಟ್ಟರು?

8. ಶ್ರೀ ರಾಮಕೃಷ್ಣ ಮಠದ ಪ್ರಧಾನ ಕಛೇರಿ ಎಲ್ಲಿದೆ?

9. ವಿವೇಕಾನಂದರ ಜೀವನದಲ್ಲಿನ ಯಾವ ದುಃಖಕರ ಘಟನೆಯು ಅವರನ್ನು ಸಮಾಜದಲ್ಲಿನ ಅನ್ಯಾಯಗಳ ಬಗ್ಗೆ ಗಮನ ಹರಿಸುವಂತೆ ಮಾಡಿತು?

10. ಭಾರತಕ್ಕೆ ಹಡಗಿನಲ್ಲಿ ಮರಳುತ್ತಿದ್ದ ವಿವೇಕಾನಂದರನ್ನು ಕಂಡ ಇಬ್ಬರು ಕ್ರೈಸ್ತಮತ ಪ್ರಚಾರಕರು, ಹಿಂದೂ ಧರ್ಮವನ್ನು ಅತಿ ಕಟುವಾಗಿ ಟೀಕಿಸಿದರು. ಆಗ ವಿವೇಕಾನಂದರು ಏನೆಂದು ಉತ್ತರಿಸಿದರು?

11. “ರಾಷ್ಟ್ರಚೈತನ್ಯದ ಚಳುವಳಿಯ ಆಧ್ಯಾತ್ಮಿಕ ಜನಕ” ಎಂದು ವಿವೇಕಾನಂದರನ್ನು ಯಾರು ಕರೆದರು?

12. ಸ್ವಾಮಿ ವಿವೇಕಾನಂದರ ಮುಖ್ಯವಾದ ಆಧ್ಯಾತ್ಮಿಕ ಸಂದೇಶವೇನಾಗಿತ್ತು ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In