ಋಗ್ವೇದದ ಆರಂಭಿಕ ಕಾಲದಲ್ಲಿನ ಪಠ್ಯಗಳಲ್ಲಿ, ಸ್ವರ್ಭಾನು ಎಂಬ ಅಸುರನು ಗ್ರಹಣಗಳಿಗೆ ಕಾರಣನಾಗಿದ್ದನೆಂದು ವಿವರಗಳಿವೆ. ನಂತರ ಬಂದ ಪುರಾಣಗಳಲ್ಲಿನ ಸಮುದ್ರಮಂಥನದ ಕಥೆಯಲ್ಲಿ ಸ್ವರ್ಭಾನುವು ದೇವತೆಗಳ ರೂಪವನ್ನು ತಾಳಿ ಅಮೃತವನ್ನು ಸೇವಿಸಿದನು. ಈ ವಂಚನೆಯನ್ನು ಗ್ರಹಿಸಿದ ಸೂರ್ಯಚಂದ್ರರು ವಿಷ್ಣುವಿಗೆ ತಿಳಿಸಲು, ಅವನು ಚಕ್ರದಿಂದ ಅಸುರನ ತಲೆಯನ್ನು ತರಿದನು. ಅದಾಗಲೇ ಅಮೃತವನ್ನು ಸ್ವರ್ಭಾನುವು ಸೇವಿಸಿದ್ದರಿಂದ, ರುಂಡವು ‘ರಾಹು’ ಎಂದೂ, ಮುಂಡವು ‘ಕೇತು’ವೆಂದೂ ಅಮರರಾದರು. ಪ್ರತೀಕಾರದಿಂದ ರಾಹು ಮತ್ತು ಕೇತುಗಳು ಕಾಲಕಾಲಕ್ಕೆ ಸೂರ್ಯ ಮತ್ತು ಚಂದ್ರರನ್ನು ನುಂಗಲು ಪ್ರಯತ್ನಿಸುತ್ತಾರೆಂದೂ, ಇದರಿಂದಾಗಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಉಂಟಾಗುತ್ತವೆ ಎಂದು ಕಥೆಯು ಹೇಳುತ್ತದೆ.
ಪ್ರಾಚೀನ ಭಾರತೀಯ ಖಗೋಳಶಾಸ್ತ್ರವು ಮುಖ್ಯವಾಗಿ ರಾತ್ರಿಯ ಆಕಾಶ ಮತ್ತು ನಕ್ಷತ್ರಗಳ ಮೇಲೆ ಕೇಂದ್ರೀಕೃತವಾಗಿತ್ತು. ನಂತರದ ಅವಧಿಯಲ್ಲಿ ನವಗ್ರಹಗಳ ಕಲ್ಪನೆ ರೂಪುಗೊಂಡಿತು. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳೇ ನವಗ್ರಹಗಳು. ಇವುಗಳಲ್ಲಿ ಭೂಮಿಯು ಇಲ್ಲ. ಕ್ಷುದ್ರಗ್ರಹಗಳಾದ ರಾಹು ಮತ್ತು ಕೇತುಗಳನ್ನು ‘ತಮೋ ಗ್ರಹ’ ಅಥವಾ ‘ಛಾಯಾ ಗ್ರಹ’ ಎಂದೂ ಕರೆಯುತ್ತಾರೆ. ಕಾಣದ ಗ್ರಹಗಳು ಗ್ರಹಣಗಳಿಗೆ ಕಾರಣವಾಗುತ್ತವೆ ಎಂಬ ಕಲ್ಪನೆಯೂ ಭಾರತೀಯ ಪರಂಪರೆಯ ಕೊಡುಗೆಯಾಗಿದೆ. ಪ್ರಾಚೀನ ಗ್ರಂಥಗಳಲ್ಲಿ ಕೇತು ಎಂಬ ಪದವನ್ನು ಧೂಮಕೇತುಗಳು ಅಥವಾ ಉಲ್ಕೆಗಳು ಎಂದೂ ಬಳಸಲ್ಪಟ್ಟಿದೆ. ಇದಲ್ಲದೆ, ಅಪಶಕುನದ ಸಂಕೇತಗಳೆಂದೂ ಭಾವಿಸಲಾಗುತ್ತಿತ್ತು. ಖಗೋಲಶಾಸ್ತ್ರಾನುಸಾರ ಸೂರ್ಯ, ಚಂದ್ರ ಹಾಗೂ ಭೂಮಿಯ ಚಲನಗಳು ಒಂದೇ ರೇಖೆಯಲ್ಲಿ ಸಂಧಿಸಿದಾಗ ಗ್ರಹಣಗಳು ಸಂಭವಿಸುತ್ತದೆ.
ಮೂಲ:https://www.britannica.com/topic/navagraha
ಚಿತ್ರ ಸಹಕಾರ: ಭಾಗವತಮ್ ಕಥಾ