166

ಅಂತರಾಷ್ಟ್ರೀಯ ಯೋಗ ದಿನದ ರಸಪ್ರಶ್ನೆ

ಯೋಗ ಎಂದರೆ ಬರೀ ಆಸನಗಳಲ್ಲ. ಅದೊಂದು ಸಿದ್ಧಾಂತ. ನಮ್ಮ ಭಾರತೀಯ ಸಾಂಪ್ರದಾಯಿಕ ಆರು ದರ್ಶನಗಳಲ್ಲಿ ಯೋಗಶಾಸ್ತ್ರವೂ ಒಂದು. ಆದರೂ ಈಗಿನ ಕಾಲದಲ್ಲಿ ಯೋಗವನ್ನು ಕೇವಲ ‘ಆಸನಗಳು’ ಅಥವ ದೈಹಿಕ ಭಂಗಿಗಳು ಎಂದು ನೋಡಲಾಗುತ್ತಿದೆ. ವ್ಯಾಯಾಮ ಯೋಗದ ಪ್ರಮುಖ ಭಾಗವಾದರೂ ಆದರ ಏಕೈಕ ಭಾಗವಲ್ಲ. ಈ ಮಹತ್ತ್ವದ ಯೋಗ ದಿನದಂದು, ಯೋಗ ಮತ್ತು ಆಸನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ

1. ‘ಧ್ಯಾನ ಮಾಡಲು ಸಹಕಾರಿಯಾಗುವ ಆಸನ’ ಎಂದು ಆಸನದ (ಕುಳಿತಿಕೊಳ್ಳುವ ಶೈಲಿ) ಬಗ್ಗೆ ಮೊದಲ ಬಾರಿಗೆ ನೇರ ಉಲ್ಲೇಖವನ್ನು ನಾವು ಎಲ್ಲಿ ಕಾಣಬಹುದು?

2. ತಮ್ಮ ಕೃತಿಯಾದ ಎಂಟು ಆಯಾಮಗಳ ‘ಅಷ್ಟಾಂಗ’ ಯೋಗದಲ್ಲಿ ‘ಆಸನ’ವನ್ನು ವಿವರಿಸಿದ ‘ಯೋಗ ಪಿತಾಮಹ’ ಯಾರು?

3. ದೇಹದ ಮೇಲಿನ ಪ್ರಭುತ್ವ ಸಾಧಿಸುವುದರ ಮೇಲೆ ಗಮನ ಹರಿಸುವ, ಮತ್ತು ಇಂದು ನಾವು ತಿಳಿದಿರುವ ಬಹುಪಾಲು ಆಸನಗಳ ಮೂಲವಾಗಿರುವ ಪ್ರಾಚೀನ ಯೋಗದ ಪ್ರಕಾರ ಯಾವುದು?

4 ಯೋಗ ಗ್ರಂಥಗಳ ಪ್ರಕಾರ, ಒಟ್ಟು ಎಷ್ಟು ಆಸನಗಳು ಅಸ್ತಿತ್ವದಲ್ಲಿವೆ?

5 ಕುಳಿತಿರುವ ಭಂಗಿಯಲ್ಲಿರುವ ಬಹುಪಾಲು ಬುದ್ಧನ ವಿಗ್ರಹಗಳು ಆತನನ್ನು ಯಾವ ಆಸನದಲ್ಲಿ ತೋರಿಸುತ್ತವೆ?

6 ‘ಸಿದ್ಧಾಸನ’ ಎಂದರೆ ಏನು?

7. ಆಂಧ್ರಪ್ರದೇಶದ ಬುಗ್ಗ ರಾಮಲಿಂಗೇಶ್ವರ ದೇವಾಲಯದಲ್ಲಿ ನರಸಿಂಹ ಅವತಾರವನ್ನು ಉಗ್ರ ಸಿಂಹಾಸನ ಭಂಗಿಯಲ್ಲಿ ಚಿತ್ರಿಸಲಾಗಿದೆ. ಈ ದೇವಾಲಯವನ್ನು ನಿರ್ಮಿಸಿದ ಸಾಮ್ರಾಜ್ಯ ಯಾವುದು?

8. ಪಶುಪತಿ ಮುದ್ರೆಯು (Pashupati seal) ಭದ್ರಾಸನವನ್ನು ಹೋಲುವ ಮೂಲಬಂಧಾಸನದಲ್ಲಿರುವ ಆಕೃತಿಯನ್ನು ಚಿತ್ರಿಸುತ್ತದೆ. ಈ ಮುದ್ರೆಯು ಯಾವ ಕಾಲಕ್ಕೆ ಸೇರಿದ್ದಾಗಿದೆ?

9. ಆಸನಗಳ ರಾಜ ಎಂದು ಯಾವುದನ್ನು ಕರೆಯಲಾಗುತ್ತದೆ?

10. ಹಠಯೋಗ ಪ್ರದೀಪಿಕಾದ ಯಾವ ತಂತ್ರವು ಪ್ರತಿ ಮೂಗಿನ ಹೊಳ್ಳೆಯಿಂದ ಒಂದಾದ ನಂತರ ಮತ್ತೊಂದರಂತೆ ಉಸಿರಾಡುವುದನ್ನು ಒಳಗೊಂಡಿದೆ?

11. ಕಪಾಲಭಾತಿ (ವೇಗದ ಉಸಿರಾಟ) ಮತ್ತು ನೇತಿ ಕ್ರಿಯೆ (ಮೂಗನ್ನು ನೀರಿನಿಂದ ತೊಳೆಯುವುದು ) ಇವುಗಳನ್ನು ‘ಷಟ್ಕರ್ಮಗಳು’ ಎಂದು ವರ್ಗೀಕರಿಸಲಾಗಿದೆ. ಅವು ಏನನ್ನು ಸಾಧಿಸುತ್ತವೆ?

12. ಸೂರ್ಯ ನಮಸ್ಕಾರದಲ್ಲಿ ಎಷ್ಟು ಹೆಜ್ಜೆ/ ಹಂತಗಳಿವೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In