೪. ಯಾವಾಗ ಇಬ್ಬರು ವ್ಯಕ್ತಿಗಳು ಸೇರಿ ಮಸಲತ್ತು ಮಾಡಲು ಹೊಂಚುಹಾಕಿ, ತಮ್ಮಿಬರಿಗೇ ತಿಳಿದಿದೆ ಎಂದು ಭಾವಿಸುತ್ತಾರೋ, ವರುಣ ರಾಯನು ಮೂರನೇಯವನಾಗಿ ಅವರ ಎಲ್ಲ ಕರ್ಮಗಳನ್ನು ವೀಕ್ಷಿಸಿದ್ದಾನೆ ಎಂದು ತಿಳಿಯಬೇಕು. ಈ ಉಕ್ತಿಯು ಯಾವ ವೇದದಲ್ಲಿ ಕಾಣಸಿಗುತ್ತದೆ?
ಋಗ್ವೇದದ ವರುಣ ಸೂಕ್ತಗಳು ಕೊಲ್ಲುವುದು, ಮೋಸ ಮಾಡುವುದರ ಬಗ್ಗೆ ಕಠಿಣ ನಿರ್ಬಂಧಗಳನ್ನು ಹಾಕಿವೆ.ಇಂದ್ರನ ಬದಲು ವರುಣನೇ ಸುರಪತಿಯಾಗಿ ಕಾಣಿಸಿಕೊಂಡಿದ್ದಾನೆ.ಕರುಣಾಮಯನು ಸತ್ಯ ಪ್ರಿಯನು ಆದ ಈತನು ಸಾಮ್ರಾಜನೆಂದೇ ಕರೆಸಿಕೊಂಡಿದ್ದಾನೆ.
ಬ್ರಾಹ್ಮಣಗಳಲ್ಲಿ ವರುಣಪ್ರಘಾಸ ಎಂಬ ಯಜ್ಞದ ವಿವರವಿದೆ. ಇದು
ಯವಧಾನ್ಯವನ್ನು ಆಹುತಿನೀಡಿ, ತಮ್ಮ ಪಾಪಗಳನ್ನು ಕಳೆದುಕೊಂಡು ವರುಣ ಪಾಶದಿಂದ ಪಾರಾಗುವ ವಿಧಾನವಾಗಿತ್ತು.ಯವಧಾನ್ಯವು ಭಾರತದಲ್ಲಿ ಬೆಳೆದ ಅತ್ಯಂತ ಪ್ರಾಚೀನ ಧಾನ್ಯ; ಹೀಗಾಗಿ ವರುಣನ ಆರಾಧನೆಯು ಅಷ್ಟೇ ಅರ್ವಾಚೀನವಾದುದು ಎಂದು ತಿಳಿಯುತ್ತದೆ.ಯಜುರ್ವೇದದಲ್ಲಿ ವರುಣನು ಧರ್ಮದ ಅಧಿಪನಾಗಿ ಜನರನ್ನು ತಪ್ಪು ದಾರಿಯನ್ನು ಹಿಡಿಯದಂತೆ ಕಾಪಾಡುವನು ಎಂಬ ಉಲ್ಲೇಖವಿದೆ. ಯಮನಂತೆ ಈತನು ಹಗ್ಗವನ್ನು ಹಿಡಿದಿರುತ್ತಾನೆ.
ತಾರಕಾಸುರ – ದೇವತೆಗಳ ಸಂಗ್ರಾಮದಲ್ಲಿ ವರುಣನು ತನ್ನ ಪಾಶದಿಂದ ಸಾವಿರಾರು ಅಸುರರನ್ನು ನಾಶ ಮಾಡಿರುವುದನ್ನು, ವರುಣನೇ ಪಾರ್ಥನಿಗೆ ಹೇಳಿದ್ದನ್ನು ಮಹಾಭಾರತ ತಿಳಿಸುತ್ತದೆ.
ಚಿತ್ರ — ಪಾಶಧರನಾಗಿ ಹಂಸರೂಢನಾದ ವರುಣ, ವಿಕಿಮೀಡಿಯ.