65

ರಕ್ಷಾಬಂಧನ ರಸಪ್ರಶ್ನೆ

ಭಾಸ್ಕರಾಚಾರ್ಯರು ತಮ್ಮ ಪ್ರಸಿದ್ಧ ಗಣಿತ ಗ್ರಂಥಕ್ಕೆ ‘ಲೀಲಾವತಿ’ ಎಂದು ಹೆಸರಿಟ್ಟಿದ್ದರು. ಆದರೆ ಲೀಲಾವತಿ ಯಾರು ಎಂಬುದಕ್ಕೆ ಖಚಿತವಾದ ಐತಿಹಾಸಿಕ ದಾಖಲೆಗಳಿಲ್ಲ . ಜನಪ್ರಿಯ ಕಥೆಗಳ ಪ್ರಕಾರ ಆಕೆ ಅವರ ಮಗಳು. ಆದರೆ ಭಾಸ್ಕರಾಚಾರ್ಯರು ಲೀಲಾವತಿಯನ್ನು ಸಂಬೋಧಿಸಿರುವ ರೀತಿಯನ್ನು ಗಮನಿಸಿದ ಕೆಲವು ವಿದ್ವಾಂಸರು, ಆಕೆ ಅವರ ಪತ್ನಿಯಾಗಿರಬಹುದೆಂದೂ ಅಭಿಪ್ರಾಯಪಟ್ಟಿದ್ದಾರೆ. ಏನೇ ಆಗಲಿ, ಆ ಗ್ರಂಥವು ಲೀಲಾವತಿಗೆ ಸಲ್ಲಿಸಿದ ಗೌರವದ ಕಾಣಿಕೆಯೇ ಎಂಬುದರಲ್ಲಿ ಸಂದೇಹವಿಲ್ಲ.

ಹಾಗೆಯೇ , ಭಾರತದ STEM ಕ್ಷೇತ್ರದ ಮಹಿಳೆಯರೆಲ್ಲರೂ ಒಂದುರೀತಿ ರೂಪಕವಾಗಿ ಲೀಲಾವತಿಯ ಪರಂಪರೆಯನ್ನುಮುಂದುವರಿಸಿಕೊಂಡು ಬಂದವರು ಎನ್ನಬಹುದು ! ವೇದಕಾಲದ ಚಿಂತಕಿಯರಿಂದ ಹಿಡಿದು ಕ್ಷಿಪಣಿ ವಿಜ್ಞಾನಿಗಳವರೆಗೆ, ಸಂಶೋಧಕಿಯರು, ಹೊಸತನದ ಅನ್ವೇಷಕಿಯರು ಮತ್ತು ವಿಜ್ಞಾನ ಸಾಹಸಿಗರವರೆಗೆ—ನಮ್ಮಲ್ಲಿ ಅಸಾಧಾರಣ ಮಹಿಳೆಯರ ದೀರ್ಘ ಪರಂಪರೆಯಿದೆ.

ಈ ರಕ್ಷಾಬಂಧನದ ಸಂದರ್ಭದಲ್ಲಿ, STEM ಕ್ಷೇತ್ರದ ಈ ಪ್ರಬಲ ಮಹಿಳಾ ಪರಂಪರೆಯನ್ನು ಸಂಭ್ರಮಿಸೋಣ.

National Book Trust ಪ್ರಕಟಿಸಿರುವ Women Scientists of India ಹಾಗೂ Indian Academy of Sciences ಪ್ರಕಟಿಸಿರುವ Leelavathi’s Daughters—ಭಾರತದ ಈ ಮಹಿಳಾ ವಿಜ್ಞಾನ ಪರಂಪರೆಯನ್ನು ದಾಖಲಿಸಿರುವ ಎರಡು ಅತ್ಯುತ್ತಮ ಪುಸ್ತಕಗಳು. ನಮ್ಮ ಈ ರಸಪ್ರಶ್ನೆಯ ಪ್ರಶ್ನೆಗಳು ಈ ಎರಡು ಪುಸ್ತಕಗಳನ್ನು ಆಧರಿಸಿವೆ. ಚಿತ್ರಕೃಪೆ : Wikimedia Commons

1. ವೇದಕಾಲದ ‘ಬ್ರಹ್ಮವಾದಿನಿಯರು’ ಮಹಿಳಾ ಋಷಿಯರು ಮತ್ತು ಜ್ಞಾನಸಾಧಕಿಯರು ಆಗಿದ್ದರು . ಇವರಲ್ಲಿ ಅಗಸ್ತ್ಯ ಮುನಿಯ ಪತ್ನಿ ಯಾರು?

2. ರುಸಾ ಮಧ್ಯಕಾಲೀನ ಭಾರತದ ಒಬ್ಬ ಆಯುರ್ವೇದ ವೈದ್ಯೆಯಾಗಿದ್ದಳು. ಆಕೆಯ ಕೃತಿಗೆ ಪ್ರಸಿದ್ಧ ಹರೂನ್ ಅಲ್-ರಶೀದ್‌ನ ಅರಮನೆಯಲ್ಲಿ ವಿಶೇಷ ಗೌರವವಿತ್ತು. ಆಕೆಯ ಕೃತಿಯನ್ನು ಯಾವ ಭಾಷೆಗೆ ಅನುವಾದಿಸಲಾಯಿತು?

3. ಗಾರ್ಗಿ ಮತ್ತು ಮೈತ್ರೇಯಿ ಪ್ರಾಚೀನ ಭಾರತದ ಇಬ್ಬರು ಪ್ರಸಿದ್ಧ ಮಹಿಳಾ ತತ್ತ್ವಜ್ಞಾನಿಗಳು. ಇವರಿಬ್ಬರ ಹೆಸರಿನ ಕಾಲೇಜುಗಳನ್ನು ನೀವು ಯಾವ ನಗರದಲ್ಲಿ ಕಾಣಬಹುದು?

4. ಕಮಲಾ ಸೊಹೋನಿ ಭಾರತದಲ್ಲಿ ವಿಜ್ಞಾನ ವಿಷಯದಲ್ಲಿ PhD ಪಡೆದ ಮೊದಲ ಮಹಿಳೆ. ಒಬ್ಬ ಪ್ರಸಿದ್ಧ ವಿಜ್ಞಾನಿ ಮೊದಲು ಅವರಿಗೆ ಪ್ರವೇಶ ನಿರಾಕರಿಸಿ, ನಂತರ ತಮ್ಮದೇ ಸಂಸ್ಥೆಗೆ ಸೇರಿಸಿಕೊಂಡರು. ಅವರು ಯಾರು?

5. ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಭಾರತೀಯ ಮಹಿಳೆ. 9ನೇ ವಯಸ್ಸಿನಲ್ಲಿ ಮದುವೆ, 14ನೇ ವಯಸ್ಸಿನಲ್ಲಿ ಮಗುವಿನ ಸಾವು, 18ನೇ ವಯಸ್ಸಿನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತ ಬಿಟ್ಟು ವಿದೇಶಕ್ಕೆ ಪ್ರಯಾಣ, 21ನೇ ವಯಸ್ಸಿನಲ್ಲಿ ವೈದ್ಯಕೀಯ ಪದವಿ—ಮತ್ತು ಅದೇ ವಯಸ್ಸಿನಲ್ಲಿ ನಿಧನ. ಅವರು ಯಾರು?

6. ರುಖ್ಮಾಬಾಯಿ ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸಿದ ಆರಂಭಿಕ ಮಹಿಳಾ ವೈದ್ಯೆಯರಲ್ಲಿ ಒಬ್ಬರು. ಆದರೆ ಅದಕ್ಕೂ ಮೊದಲು ಅವರು ಸಾಮಾಜಿಕ ಸುಧಾರಣೆಯ ಹೋರಾಟದಲ್ಲಿ ಜಯ ಗಳಿಸಿದ್ದರು. ಅವರು ಪ್ರಸಿದ್ಧವಾಗಿ ಯಾವುದಕ್ಕಾಗಿ ಹೋರಾಡಿದರು?

7. ‘ಅಗ್ನಿಪುತ್ರಿ’ ಎಂದು ಕರೆಯಲ್ಪಡುವ ಈಕೆ, ವಾಸ್ತವದಲ್ಲಿ ಅಗ್ನಿ–IV ಮತ್ತು ಅಗ್ನಿ–V ಕ್ಷಿಪಣಿಗಳ ‘ತಾಯಿ’! ಭಾರತದ ಕ್ಷಿಪಣಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕಿ ಯಾರು?

8. 56ನೇ ವಯಸ್ಸಿನಲ್ಲಿ, 15 ತಿಂಗಳ ಕಠಿಣ ಯಾತ್ರೆಯಲ್ಲಿ ಒಬ್ಬಳೇ ಮಹಿಳೆಯಾಗಿದ್ದ ಮಂಗಳಾ ಮಣಿ ಎಲ್ಲಿದ್ದರು?

9. ಸರ್ಕಸ್ ಕಲಾವಿದನ ಮಗಳಾಗಿ ಹುಟ್ಟಿದ ಈಕೆ, ಇಂದಿರಾ ಗಾಂಧಿಗೆ ಪಾಠ ಕಲಿಸಲು ಅವರ ವಿರುದ್ಧ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು! ಆದರೆ ಅವರ ನಿಜವಾದ ಖ್ಯಾತಿ 546372891²³ಕ್ಕೆ ಸಂಬಂಧಿಸಿದ್ದು. ಅವರು ಯಾರು?

10. ಅನ್ನಾ ಮಣಿ MSc ಪದವಿ ಇಲ್ಲದ ಕಾರಣ ತಮ್ಮ PhD ಕಳೆದುಕೊಂಡರು. ಉಪಕರಣಗಳ ವಿನ್ಯಾಸದಲ್ಲಿ ಅಗ್ರಗಣ್ಯರಾಗಿದ್ದ ಅವರ ಉಪಕರಣಗಳು ಮುಖ್ಯವಾಗಿ ಯಾವ ಕ್ಷೇತ್ರದಲ್ಲಿ ಬಳಸಲ್ಪಡುತ್ತವೆ?

11. ಬಿಭಾ ಚೌಧುರಿಯವರ ಕಣ ಭೌತವಿಜ್ಞಾನದ ಸಂಶೋಧನೆಯನ್ನು ಇಬ್ಬರು ನೊಬೆಲ್ ಪ್ರಶಸ್ತಿ ವಿಜೇತರು ಬಳಸಿಕೊಂಡರೂ, ಅವರ ಕೊಡುಗೆ ಸರಿಯಾಗಿ ದಾಖಲಾಗಲಿಲ್ಲ. ಇಂದು ಅವರನ್ನು ಹೇಗೆ ಗೌರವಿಸಲಾಗಿದೆ?

12 . ಒಬ್ಬ ರಾಣಿ-ಪ್ರತಿನಿಧಿಯ ಭೂದಾನ ಮತ್ತು ಒಬ್ಬ ಕೈಗಾರಿಕೋದ್ಯಮಿಯ ಸಂಪತ್ತಿನ ಅರ್ಧಭಾಗ—ಇವು ಸೇರಿ ಒಂದು ವಿಶ್ವದರ್ಜೆಯ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು. ಆ ಸಂಸ್ಥೆ ಯಾವುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In