ಕೃಷ್ಣನು ತನ್ನ ಸೋದರಮಾವನಾದ ಕಂಸನ ಸೆರೆಮನೆಯಲ್ಲಿ ಹುಟ್ಟಿದನು. ತನ್ನ ತಂಗಿಯಾದ ದೇವಕಿಯ ಅಷ್ಟಮ ಗಭ೯ದಲ್ಲಿ ಜನಿಸುವ ಶಿಶುವೇ ತನ್ನ ಸಾವಿಗೆ ಕಾರಣೆವಾಗುವುದೆಂದು ಅಶರೀರವಾಣಿಯಿಂದ ಎಚ್ಚರಿಸಲ್ಪಟ್ಟಿದ್ದ ಕಂಸನು ಆ ಮಗುವು ಜನಿಸುತ್ತಲೇ ಕೊಲ್ಲಲು ಕಾಯುತ್ತಿದ್ದನು. ಇತ್ತ ವಸುದೇವನಿಗೆ ಕೃಷ್ಣನನ್ನು ನಂದ ಮತ್ತು ಯಶೋದೆಯವರ ಬಳಿ ಬಿಟ್ಟುಬರುವಂತೆ ದೈವ ಪ್ರೇರಣೆಯಾಯಿತು. ಕಾರಾಗೃಹದ ಬಾಗಿಲುಗಳು ಸ್ವಯಂ ತೆರೆದವು, ಕಾವಲುಗಾರರು ಗಾಢ ನಿದ್ರೆಗೆ ಜಾರಿದರು ಮತ್ತು ವಸುದೇವನು ಯಮುನೆಯ ಬಳಿ ಸಾರಲು, ಉಕ್ಕಿ ಹರಿಯುತ್ತಿದ್ದ ಅವಳೂ ದಾರಿಯನ್ನು ಬಿಟ್ಟುಕೊಟ್ಟಳು. ಬಿರುಗಾಳಿ, ಮಳೆಯ ನಡುವೆ ವಸುದೇವನು ಕೃಷ್ಣನನ್ನು ಹೊತ್ತು ಸಾಗುತ್ತಿದ್ದಾಗ, ಆದಿಶೇಷನು ತನ್ನ ಹೆಡೆಯನ್ನು ಬಿಚ್ಚಿ, ಚಾಚಿ ಕೃಷ್ಣನಿಗೆ ರಕ್ಷಣೆ ನೀಡಿದನು. ಗೋಕುಲ ತಲುಪಿದ ಬಳಿಕ, ನಂದ ಮತ್ತು ಯಶೋದೆಗೆ ಆಗಷ್ಟೇ ಜನಿಸಿದ್ದ ಹೆಣ್ಣುಮಗುವಿನೊಂದಿಗೆ ಕೃಷ್ಣನನ್ನು ಬದಲಾಯಿಸಲಾಯಿತು. ಗೋಕುಲವೇ ಮುಂದೆ ಕೃಷ್ಣನ ಬಾಲ್ಯದ ಮನೆಯಾಯಿತು.