ಗಣೇಶನ ವಾಹನವಾದ ಮೂಷಕರಾಜನ ಹುಟ್ಟಿನ ಬಗ್ಗೆ ಹಲವು ಕಥೆಗಳಿವೆ. ಗಣೇಶನ ಜನಪ್ರಿಯತೆ ಎಷ್ಟೋ, ಅವನ ವಾಹನದ ಕುರಿತ ಕಥೆಗಳೂ ಅಷ್ಟೇ ವೈವಿಧ್ಯಮಯವಾಗಿವೆ ! ಜನಪ್ರಿಯವಾದ ಒಂದು ಕಥೆಯಲ್ಲಿ, ಕ್ರೌಂಚ ಎಂಬ ಗಂಧರ್ವನು ಶಾಪದಿಂದ ದೈತ್ಯಾಕಾರದ ಇಲಿಯಾಗಿ ಮಾರ್ಪಟ್ಟನು. ಅವನು ರೈತರ ಹೊಲಗಳನ್ನು ಹಾಳುಮಾಡುತ್ತಿದ್ದಾಗ ಗಣೇಶನು ಅವನನ್ನು ವಶಪಡಿಸಿಕೊಂಡು ತನ್ನ ವಾಹನವಾಗಿಸಿಕೊಂಡನು. ಆದರೆ ಮುದ್ಗಲ ಪುರಾಣದಲ್ಲಿ ಬೇರೆ ಕಥೆ ಇದೆ.
ಅಲ್ಲಿ ಶಿವನಿಂದ ಪಡೆದ ವರದಿಂದ ಗಜಮುಖಾಸುರನು ಬಹುತೇಕ ಅಜೇಯನಾಗಿದ್ದನು. ಸಾಮಾನ್ಯ ಆಯುಧಗಳಿಂದ ಅವನನ್ನು ಸೋಲಿಸಲು ಸಾಧ್ಯವಿರಲಿಲ್ಲ.ಆಗ ಗಣೇಶನು ತನ್ನದೇ ಮುರಿದ ದಂತವನ್ನು ಆಯುಧವನ್ನಾಗಿ ಮಾಡಿಕೊಂಡು, (ಮಹಾಭಾರತವನ್ನು ಬರೆದದ್ದು ಇದೇ ದಂತದಿಂದಲೇ !! )ಅದನ್ನೇ ಭರ್ಜಿಯಂತೆ ಬಳಸಿ ಗಜಮುಖಾಸುರನೊಂದಿಗೆ ಯುದ್ಧ ಮಾಡಿದನು. ಕೊನೆಗೆ ಸೋಲನ್ನು ಅರಿತ ಗಜಮುಖಾಸುರನು ಸಣ್ಣ ಮೂಷಕನ ರೂಪಕ್ಕೆ ಬದಲಾಗಿ ಓಡಿಹೋಗಲು ಪ್ರಯತ್ನಿಸಿದನು. ಗಣೇಶನು ಅವನನ್ನು ಹಿಡಿದನು. ಅವನನ್ನು ಕೊಲ್ಲಲಿಲ್ಲ. ಕರುಣೆ ತೋರಿಸಿ, ಅವನನ್ನು ತನ್ನ ವಾಹನವಾಗಿಸಿಕೊಂಡನು! ಹೀಗೆ ಒಬ್ಬ ಅಹಂಕಾರಿ ಅಸುರನೇ ಮುಂದೆ ಗಣೇಶನ ಅತ್ಯಂತ ಭಕ್ತಿಯುತ ಸೇವಕನಾದನು. ಈ ಕಥೆ ಗಣೇಶನ ಅವತಾರಗಳ ಸಾರವನ್ನೇ ಹೇಳುತ್ತದೆ: ದುರ್ಗುಣವನ್ನು ಸದ್ಗುಣವನ್ನಾಗಿ ಪರಿವರ್ತಿಸುವುದೇ ಗಣೇಶನ ಮಾರ್ಗ. ಅಹಂಕಾರವಾಗಿರಲಿ, ಮಮಕಾರವಾಗಿರಲಿ, ಕೋಪವಾಗಿರಲಿ, ಮೋಹವಾಗಿರಲಿ, ಮತ್ಸರವಾಗಿರಲಿ —ನಮ್ಮೊಳಗಿನ ದುರ್ಗುಣಗಳನ್ನು ಗುರುತಿಸಿ, ಅವುಗಳನ್ನು ಜಯಿಸಿ, ಕೊನೆಗೆ ಅವನ್ನೇ ನಮ್ಮ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವುದು ಗಣೇಶನ ಸಂದೇಶ.
ಗಣಪತಿ ಬಪ್ಪಾ ಮೋರೆಯಾ! 🙏