ವಿಜಯನಗರ ಸಾಮ್ರಾಜ್ಯವು ಬಲಿಷ್ಠ ಅಶ್ವದಳವನ್ನು ಹೊಂದಿತ್ತು. ಪಶ್ಚಿಮ ಕರಾವಳಿಯ ಭಟ್ಕಳ ಮತ್ತು ಹೊನ್ನಾವರ ಬಂದರುಗಳು ಪರ್ಷಿಯನ್ ಕುದುರೆಗಳು ಮತ್ತು ಮುತ್ತುಗಳ ಆಮದು ಕೇಂದ್ರಗಳಾಗಿದ್ದವು.
ಆರಂಭದಲ್ಲಿ ಅರಬ್ಬರು ಈ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದರು. ನಂತರ ಪೋರ್ಚುಗೀಸರು ವ್ಯಾಪಾರದ ನಿಯಂತ್ರಣ ಪಡೆದು ಗೋವಾಕ್ಕೆ ಸ್ಥಳಾಂತರಿಸಿದರು. ಶ್ರೀಕೃಷ್ಣದೇವರಾಯನು ಕುದುರೆಗಳ ಆಮದು ವ್ಯಾಪಾರದ ಏಕಸ್ವಾಮ್ಯಕ್ಕಾಗಿ ಪೋರ್ಚುಗೀಸರಿಗೆ ವಾರ್ಷಿಕ ಹಣ ನೀಡಲು ಒಪ್ಪಿಕೊಂಡಿದ್ದನು.
ಉತ್ತಮ ತಳಿಯ ಕುದುರೆಗಳ ಆಮದು ಸ್ಥಗಿತಗೊಂಡಿದ್ದು, ರಕ್ಕಸ-ತಂಗಡಿ ಯುದ್ಧದಲ್ಲಿ ರಾಮರಾಯನ ಸೋಲಿಗೆ ಒಂದು ಕಾರಣವೆಂದು ಪರಿಗಣಿಸಲಾಗಿದೆ.
ಆಕರ: A Forgotten Empire – ರಾಬರ್ಟ್ ಸ್ವೆಲ್