ಸಂಸ್ಕ್ರತದ ರಂಗ – ವಲ್ಲಿ (ಬಣ್ಣದ ಎಳೆ) ಪದದಿಂದ ರಂಗೋಲಿ ಪದ ಬಂದಿದೆ. ಇದೊಂದು ನೆಲದ ಮೇಲೆ ಹಿಟ್ಟು, ಪುಡಿಗಳು, ಸೀಮೆ ಸುಣ್ಣ ಮತ್ತು ಹೂವಿನಿಂದ ರಚಿಸುವ ಚಿತ್ತಾರದ ಕಲೆ. ಇದನ್ನು ಹಬ್ಬದ ದಿನದಂದು ಮನೆಯ ಹೊಸ್ತಿಲ ಮುಂದೆ, ಅಂಗಳದಲ್ಲಿ ರಚಿಸುತ್ತಾರೆ. ಕೆಲವರು ರಂಗೋಲಿಯನ್ನು ಪ್ರತಿದಿನ ಮನೆಯ ಮುಂದೆ ಹಕ್ಕಿಗಳಿಗೆ ಆಹಾರ ನೀಡುವ ಸಲುವಾಗಿ ಹಿಟ್ಟಿನಿಂದ, ಬಿಡಿಸುತ್ತಾರೆ. ದೀಪಾವಳಿಯ ದಿನದಂದು ಲಕ್ಷ್ಮಿಯ ಪಾದಗಳ ಚಿತ್ತಾರ ಬಿಡಿಸಿ ಅವಳನ್ನು ಮನೆಗೆ ಸ್ವಾಗತಿಸುತ್ತಾರೆ. ೨ -೩ ನೆ ಶತಮಾನದ ಕಾಮಸೂತ್ರದಲ್ಲಿ ರಂಗೋಲಿ ಚಿತ್ತಾರದ ಉಲ್ಲೇಖವಿದೆ. ನಂತರದ ಉಲ್ಲೇಖ ೬ ನೆ ಶತಮಾನದ ನಾರದ ಶಿಲ್ಪ ಶಾಸ್ತ್ರದಲ್ಲಿ ಕಾಣಬರುತ್ತದೆ. ನಂತರದ ಕೃತಿಗಳು ಇದನ್ನು ಬೇರೆ ಬೇರೆ ಹೆಸರಿನಿಂದ ಕರೆದಿವೆ: ರಂಗವಲ್ಲಿ, ಧೂಳಿಚಿತ್ರ, ಬೌಮ ಚಿತ್ರ, ರಂಗೋಲಿ ಹೆಸರು ಮಹಾರಾಷ್ಞ್ರದಲ್ಲಿ ಜನಪ್ರಿಯವಾಗಿದ್ದು ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿವವೆ : ಕೋಲಂ( ತಮಿಳುನಾಡು), ಅಲ್ಪನಾ (ಬಂಗಾಳ) ಮುಗ್ಗು (ಆಂದ್ರ ಪ್ರದೇಶ) ಮಂದನ (ರಾಜಾಸ್ಥಾನ) ಅರಿಪನ (ಬಿಹಾರ) ಸಾತಿಯ (ಗುಜರಾತ್) ಮತ್ತು ಚೌಕ್ ಪೂರಣ (ಉತ್ತರ ಭಾರತ)
ಮೂಲ ಅಂತರ್ಜಾಲತಂತು: https://www.britannica.com/art/rangoli