102

ಶಿವಾಜಿ ಜಯಂತಿಯ ಪ್ರಶ್ನಾವಳಿ

ಇಂದು (ಫೆಬ್ರವರಿ 19) ಶಿವಾಜಿ ಜಯಂತಿ. ಶಿವಾಜಿ ಮಹಾರಾಜರು, ಮೊಘಲರನ್ನು ನಾಶ ಮಾಡಿ “ಅಟಕ್ ನಿಂದ ಕಟಕ್” ವರೆಗೆ ಪ್ರಸಿದ್ಧವಾಗಿ ವಿಸ್ತರಿಸಿದ ಸಾಮ್ರಾಜ್ಯಕ್ಕೆ ಅಡಿಪಾಯವನ್ನು ಹಾಕಿದರು.

ಸ್ವಾಮಿ ವಿವೇಕಾನಂದರು ಅವರ ಬಗೆಗೆ ಮಾತನಾಡುತ್ತಾ ” ನಮ್ಮ ಸಮಾಜ ಮತ್ತು ಧರ್ಮವು ಸಂಪೂರ್ಣ ವಿನಾಶದ ಬೆದರಿಕೆಯನ್ನು ಎದುರಿಸಿದಾಗ ಅದರಿಂದ ಮುಕ್ತಿಯನ್ನು ದೊರಕಿಸಿಕೊಟ್ಟ ಶ್ರೇಷ್ಠ ರಾಷ್ಟ್ರ ರಕ್ಷಕರಲ್ಲಿ ಶಿವಾಜಿ ಮಹಾರಜರು ಒಬ್ಬರು.” ಎಂದು ಹೇಳಿದರು

ಅವರ ಜೀವಿತಾವಧಿಯಲ್ಲಿನ ಕ್ಲಿಷ್ಟಕರ ಸಮಯದಲ್ಲಿ ಅವರ ದೂರದೃಷ್ಟಿ , ಶೌರ್ಯ ಮತ್ತು ಕಾರ್ಯನಿರ್ವಹಣೆಗಳು ಅಸಾಮಾನ್ಯವಾಗಿದ್ದವು. ಅವರು ಬಳುವಳಿಯಾಗಿ ಕೊಟ್ಟ ಕೊಡುಗೆಗಳನ್ನು ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ, ಸಂಕೇತಗಳಲ್ಲಿ ಹಾಗೂ ನಮ್ಮ ನಿತ್ಯದ ಸ್ವಚ್ಛಂದದ ಮುಕ್ತ ಬದುಕಿನಲ್ಲಿ ಕಾಣಬಹುದು.

ಈ ಪ್ರಶ್ನಾವಳಿಯು ನಮಗೆ ಶಿವಾಜಿ ಮಹಾರಾಜರ ಧೀರೋದಾತ್ತ ಪರಂಪರೆಯನ್ನು ಪರಿಚಯಿಸುತ್ತಾ ಅವರು ಬಳುವಳಿಯಾಗಿ ಕೊಟ್ಟ ಕೊಡುಗೆಗಳನ್ನು ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ, ಸಂಕೇತಗಳಲ್ಲಿ ಹಾಗೂ ನಮ್ಮ ನಿತ್ಯದ ಸ್ವಚ್ಛಂದದ ಮುಕ್ತ ಬದುಕಿನಲ್ಲಿ ತೋರಿಸುತ್ತದೆ.

ಈ ರಸಪ್ರಶ್ನೆಯಲ್ಲಿ ಭಾಗವಹಿಸುವ ಐದು ಅದೃಷ್ಟಶಾಲಿಗಳು ಡಾ. ಉದಯ್ ಕುಲಕರ್ಣಿ ಅವರ “ಮರಾಠಾ ಶತಮಾನ” (The Maratha Century ) ಪುಸ್ತಕವನ್ನು ಉಡುಗೊರೆಯಾಗಿ ಪಡೆಯುವರು.

1. ಮಹಾರಾಷ್ಟ್ರದ ಹೊರಗಿರುವ, 21 ನೇ ಶತಮಾನದಲ್ಲಿ ವಲಸಿಗರಿಗೆ ಅತ್ಯಾಕರ್ಷಕವಾಗಿರುವ ನಗರವೊಂದರಲ್ಲಿ ಶಿವಾಜಿ ತಮ್ಮ ಬಾಲ್ಯವನ್ನು ಕಳೆದರು. ಯಾವುದು ಈ ನಗರ?

2. ಭಾರತ ಸರ್ಕಾರದ ಯಾವ ಸಂಸ್ಥೆಯ ಲಾಂಛನದಲ್ಲಿ ಶಿವಾಜಿ ಮಹಾರಾಜರ ರಾಜ ಮುದ್ರೆಯಲ್ಲಿನ ಅಂಶಗಳು ಒಳಗೊಳ್ಳುವಂತೆ ಮಾರ್ಪಡಿಸಲಾಯಿತು?

ಖ್ಯಾತ ಮರಾಠಾ ಲೈಟ್ ಇನ್ಫ್ಯಾಂಟ್ರಿ ತುಕಡಿಯನ್ನು ಶಿವಾಜಿಯ ಸೈನ್ಯದ ಯಾವ ಬಲವನ್ನು ಮನಗಂಡು ರೂಪಿಸಲಾಗಿದೆ ?

4. ಮುಂಬೈನ ಪ್ರಸಿದ್ಧ ವಿಕ್ಟೋರಿಯಾ ಜುಬಿಲಿ ತಾಂತ್ರಿಕ ಸಂಸ್ಥೆಯನ್ನು ಮರುನಾಮಕರಣ ಮಾಡಲಾಯಿತು. ಇದು ಜಾಣತನದಿಂದ VJTI ಎಂಬ ಸಂಕ್ಷೇಪಣವನ್ನು ಉಳಿಸಿಕೊಂಡಿದೆ. V ಮತ್ತು J ಅಕ್ಷರಗಳು ಈಗ ಏನನ್ನು ಸೂಚಿಸುತ್ತವೆ?

5. ಶಿವಾಜಿಗೆ ಗೌರವ ಸೂಚಕವಾಗಿ ಮಹಾರಾಷ್ಟ್ರದ ಐಷಾರಾಮಿ ಪರ್ಯಟನ ಸೇವೆಯನ್ನು ‘ಶಿವನೇರಿ’ ಎಂದು ಹೆಸರಿಸಲಾಗಿದೆ. ಶಿವನೇರಿ ದುರ್ಗದಲ್ಲಿ ನಡೆದ ಘಟನೆ ಯಾವುದು?

6. ಬಿಜಾಪುರದ ಸೇನಾಧಿಪತಿ ಅಫ್ಜಲ್ ಖಾನ್ ನನ್ನು ಕೊಲ್ಲಲು ಶಿವಾಜಿ ಮಹಾರಾಜರು ಯಾವ ವಿಶಿಷ್ಟ ಆಯುಧವನ್ನು ಬಳಸಿದರು?

7. ಈ “ವಜ್ರ ನಗರಿ”ಯು ಮೊಘಲ್ ಸಂಪತ್ತಿನ ಮಕುಟರತ್ನವಾಗಿದ್ದಿತು. ಬ್ರಿಟಿಷರು ಮುಂಬೈಗೆ ಸ್ಥಳಾಂತರಗೊಳ್ಳುವ ಮುನ್ನ ಅವರ ಬಂದರೂ ಆಗಿತ್ತು. ಇಂದಿನ ಮಹಾರಾಷ್ಟ್ರದ ಸೀಮೆಯಿಂದ ಹೊರಗಿರುವ ಈ ನಗರದ ಮೇಲೆ ಶಿವಾಜಿಯ ಮೊದಲ ದಾಳಿ ನಡೆಯಿತು. ಯಾವ ನಗರವಿದು?

8. 1665ರಲ್ಲಿ ಶಿವಾಜಿ ಮಹಾರಾಜರು ಮೊಘಲರ ಯಾವ ಪ್ರಸಿದ್ಧ ರಜಪೂತ ಸೇನಾನಾಯಕನಿಂದ ದೊಡ್ಡ ಹಿನ್ನಡೆಯನ್ನು ಅನುಭವಿಸಿದರು?

9. ಶಿವಾಜಿ ಮಹಾರಾಜರು ತಮ್ಮ ಸಾವಿಗೆ ಸ್ವಲ್ಪ ಮುನ್ನ ದಕ್ಷಿಣ ದಿಗ್ವಿಜಯದಲ್ಲಿ, ದಕ್ಷಿಣದ ಯಾವ ಪಟ್ಟಣವನ್ನು ಮುಟ್ಟಿದರು?

10. “ರಾಜ್ಯ ವ್ಯವಹಾರ ಕೋಶ” ವೆಂಬುದು ಶಿವಾಜಿ ಮಹಾರಾಜರು ರಚಿಸಲು ಆದೇಶಿಸಿದ ಪದಕೋಶ. ಆಡಳಿತದಲ್ಲಿ ಯಾವ ಭಾಷೆಯನ್ನು ಬದಲಾಯಿಸಲು ಅದು ಪ್ರಯತ್ನಿಸಿತು?

11. ಭೂಕಂದಾಯ ಮತ್ತು ಸೈನ್ಯದ ವಿಚಾರವಾಗಿ ಶಿವಾಜಿ ಮಹಾರಾಜರ ಯಾವ ನಿರ್ಧಾರವು ಅವರ ಯಶಸ್ಸಿನ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ?

12. ಸ್ವತಂತ್ರ ಚಳುವಳಿಯ ಯಾವ ಜನಪ್ರಿಯ ಘೋಷಣೆಯು ಶಿವಾಜಿ ಮಹಾರಾಜರ ದೂರದೃಷ್ಟಿಯಿಂದ ಪ್ರೇರೇಪಿತವಾಗಿದೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In