ಪಾರ್ವತಿಯು ಶಿವನನ್ನು ವಿವಾಹವಾಗಿ ಕೈಲಾಸಕ್ಕೆ ತೆರಳಿದಾಗ, ಶಿವಗಣಗಳು ಆಹಾರ, ಶೌಚಗಳ ಬಗೆಗೆ ನಿರಾಸಕ್ತಿ ಹೊಂದಿದ್ದನ್ನು ಗಮನಿಸಿ, ಒಂದು ಪಾಕಶಾಲೆಯನ್ನು ಸ್ಥಾಪಿಸಿದಳು.ಆದರೆ, ಶಿವಾನುಯಾಯಿಗಳು ಸಿದ್ಧಪಡಿಸಿದ ಆಹಾರವನ್ನು ನಿರಾಕರಿಸಿದರು.ಶಿವನು ತನ್ನನುಚರರನ್ನು ಅನುಮೋದಿಸಿ, ಜೀವನಕ್ಕೆ ಶಕ್ತಿಯ(ಪೋಷಣೆ) ಅವಶ್ಯಕತೆ ಇಲ್ಲವೆನ್ನಲು, ಪಾರ್ವತಿಯು ಬೇಸರದಿಂದ ಅಲ್ಲಿಂದ ಕಣ್ಮರೆಯಾದಳು. ಜಗನ್ಮಾತೆಯ ನಿರ್ಗಮನದಿಂದ ಜಗತ್ತೇ ಶಕ್ತಿಹೀನವಾಗಲು, ಸಕಲ ಜೀವರಾಶಿಗಳೂ ಹಸಿವಿನಿಂದ ಬಳಲುತ್ತಿದ್ದವು. ಲೋಕದ ದುಃಸ್ಥಿತಿಯನ್ನು ಕಂಡು ಶಂಕರನು, ಪಾರ್ವತಿಯನ್ನು ಹುಡುಕುತ್ತಾ ಕಾಶಿಗೆ ಬಂದನು. ಅಲ್ಲಿ ದೇವಿಯನ್ನು ಕಾಣಲು, ವಿಶ್ವನಾಥನು ತನ್ನ ತಪ್ಪನ್ನು ಒಪ್ಪಿಕೊಂಡು, ತನಗೂ ತನ್ನ ಭಕ್ತರಿಗೂ ಅನ್ನಭಿಕ್ಷೆಯನ್ನು ಬೇಡಿದನು. ಪಾರ್ವತಿಯು ಪ್ರಸನ್ನ ಅನ್ನಪೂರ್ಣೇಶ್ವರಿಯಾಗಿ ಲೋಕದ ಹಸಿವನ್ನು ನೀಗಿದಳು. ಇದು ಪುರಾಣದ ಕಥೆ. ಅನ್ನಪೂರ್ಣಾಷ್ಟಕದಲ್ಲಿ “ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ'” ಎಂದು ಶಂಕರಾಚಾರ್ಯರು ಹೇಳಿದ್ದಾರೆ.
ಪರಿಪೂರ್ಣತೆಯ ಪ್ರತೀಕವಾದ ಶಂಕರನ ಪ್ರಿಯಸತಿಯಾದ ಅನ್ನಪೂರ್ಣೆಗೆ ನಮಸ್ಕರಿಸುತ್ತೇನೆ ಎಂಬುದೇ ಈ ಶ್ಲೋಕದ ಅರ್ಥ.
ಚಿತ್ರ – ಅನ್ನಪೂರ್ಣಾ ದೇವಾಲಯ, ಕಾರ್ಸೋಗ್, ಹಿಮಾಚಲ ಪ್ರದೇಶ.
ಚಿತ್ರ ಸಹಕಾರ – ಎಸ್.ಆರ್. ರಾಮಾನುಜಂ.