ಬ್ರಹ್ಮರ್ಷಿ ಜಮದಗ್ನಿ ಹಾಗೂ ರೇಣುಕೆಯರ ಮಗನಾದ ಪರಶುರಾಮನು ಅಕ್ಷಯ ತೃತೀಯದಂದು ಹುಟ್ಟಿದನು. ಹಾಗಾಗಿ ಪರಶುರಾಮ ಜಯಂತಿಯನ್ನು ಅಂದು ಆಚರಿಸುತ್ತಾರೆ. ತಂದೆಯ ಆಜ್ಞೆಯಂತೆ ಪರಶುರಾಮನು ತನ್ನ ತಾಯಿಯ ಹತ್ಯೆಮಾಡಿದನು. ಸುಪ್ರೀತನಾದ ತಂದೆಯು ವರವನ್ನು ಕೊಡಲು, ದುಃಖತಪ್ತನಾದ ಪರಶುರಾಮನು, ತನ್ನ ತಾಯಿಯನ್ನು ಬದುಕಿಸಬೇಕೆಂದು ಬೇಡಿದನು. ರೇಣುಕಾ ದೇವಿಯು ಜೀವಂತಳಾದಳು. ನಂತರ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನಿಂದ ಜಮದಗ್ನಿಯ ಹತ್ಯೆಯಾಯಿತು. ರೇಣುಕಾದೇವಿಯು ಸತಿ ಸಹಗಮನವನ್ನು ಮಾಡಿದಳು. ಇದರಿಂದಾಗಿ ರೊಚ್ಚಿಗೆದ್ದ ಪರಶುರಾಮನು ೨೧ ಬಾರಿ ಭೂಪ್ರದಕ್ಷಿಣೆಯನ್ನು ಮಾಡಿ ಕ್ಷತ್ರಿಯರ ಸರ್ವನಾಶಕ್ಕೆ ಕಾರಣನಾದನು. ಹಿಮಾಚಲ ಪ್ರದೇಶದಲ್ಲಿ ‘ರೇಣುಕಾ ಜೀ’ ಎಂಬ ಹೆಸರಿನ ಸರೋವರವೊಂದು ಇದೆ. ಸ್ಥಳ ಪುರಾಣದ ಪ್ರಕಾರ ಇದೇ ಪರಶುರಾಮರ ಜನ್ಮಸ್ಥಳವೆಂದೂ, ಜಮದಗ್ನಿ ಋಷಿಯ ಹತ್ಯೆಯ ನಂತರ ರೇಣುಕೆಯು ಇದೇ ಸರೋವರಕ್ಕೆ ಹಾರಿ ಪ್ರಾಣವನ್ನು ಬಿಟ್ಟಳೆಂದೂ ನಂಬಿಕೆ. ಎತ್ತರದಿಂದ ನೋಡಲು, ಈ ಸರೋವರವು ಮುದುಡಿಕೊಂಡ ಹೆಂಗಸಿನ ಆಕಾರದಲ್ಲಿ ಇದ್ದು, ಇದೇ ರೇಣುಕಾ ದೇವಿಯ ರೂಪವೆಂದು ಇಲ್ಲಿನ ಐತಿಹ್ಯ. ಈ ಸರೋವರಕ್ಕೆ ಎದುರಾಗಿರುವ ಸಣ್ಣದೊಂದು ಬೆಟ್ಟದಲ್ಲಿ ಜಮದಗ್ನಿಗಳು ತಪಸ್ಸನ್ನಾಚರಿಸಿದರೆಂದೂ ನಂಬಿಕೆಯಿದೆ. ಈ ಸರೋವರದ ಬಳಿಯೇ ಸಣ್ಣದೊಂದು ಕೊಳವಿದ್ದು, ಅದನ್ನು ಪರಶುರಾಮ ಕೊಳವೆಂದು ಕರೆಯುತ್ತಾರೆ. ಇಲ್ಲಿ ರೇಣುಕಾ ದೇವಿ ಹಾಗೂ ಪರಶುರಾಮರ ದೇವಾಲಯಗಳಿವೆ. ಮಹಾರಾಷ್ಟ್ರದ ಚಿಪ್ಲನ್, ಕೇರಳದ ತಿರುವಲ್ಲಮ್ ಮತ್ತು ಹಿಮಾಚಲ ಪ್ರದೇಶದ ನಿರ್ಮಂದ್ ನಲ್ಲಿಯೂ ಮುಖ್ಯವಾದ ಪರಶುರಾಮ ದೇವಾಲಯಗಳಿವೆ. ಕ್ಷತ್ರಿಯರ ವಿನಾಶದ ಬಳಿಕ ಪರಶುರಾಮನು ತನ್ನ ಕೊಡಲಿಯನ್ನು ಗೋಕರ್ಣದ ಬಳಿ ಸಮುದ್ರಕ್ಕೆ ಎಸೆಯಲು, ಸಮುದ್ರವು ಹಿಂದಕ್ಕೆ ಸರಿದು, ಕರ್ನಾಟಕದ ಗೋಕರ್ಣದಿಂದ ದಕ್ಷಿಣಕ್ಕೆ ಕೇರಳದವರೆಗಿನ ಪ್ರದೇಶವು ತೆರವಾಗಿ, ಪರಶುರಾಮ ಕ್ಷೇತ್ರವಾಯಿತು ಎಂದು ಪ್ರತೀತಿ. ಮೂಲ : ಪಿ. ವಿ. ಕಾಣೆ, History of Dharmashastras, Government of Himachal Pradesh.
Picture – Renukaji lake in Himachal Pradesh