466

ಶ್ರೀಕೃಷ್ಣ ಹಾಗೂ ನರಕಾಸುರರ ಕುರಿತ ರಸಪಶ್ನೆ

ವಿಭಿನ್ನ ಶೈಲಿಗಳಲ್ಲಿ ಆಚರಿಸಲ್ಪಡುವ ನಮ್ಮ ಹಬ್ಬ ದೀಪಾವಳಿ. ಶ್ರೀ ರಾಮ, ಶ್ರೀ ಲಕ್ಷ್ಮೀ, ಕಾಳಿಕಾ ದೇವಿ ಹಾಗೂ ಶ್ರೀ ಕೃಷ್ಣರೆಲ್ಲರೂ ಈ ಹಬ್ಬದೊಂದಿಗೆ ಗುರುತಿಸಲ್ಪಡುವವರೇ ! ಈ ದೇವತೆಗಳ ಮಧ್ಯೆ, ಶ್ರೀಕೃಷ್ಣನು ನರಕಾಸುರನ ಮೇಲೆ ಸಾಧಿಸಿದ ವಿಜಯವನ್ನು ನರಕ ಚತುರ್ದಶಿ ಎಂದು ಭಾರತದ ದಕ್ಷಿಣ ಹಾಗೂ ಪಶ್ಚಿಮ ಭಾಗದವರು ಆಚರಿಸುತ್ತಾರೆ. ಕೃಷ್ಣ-ನರಕಾಸುರರ ಕಾಳಗ ನಡೆದದ್ದು ಎಲ್ಲಿ? ನರಕಾಸುರನ ತಂದೆ-ತಾಯಿ ಯಾರು? ಅವನಾಳುತ್ತಿದ್ದ ರಾಜ್ಯವೆಲ್ಲಿರುವುದು? ಅವನನ್ನು ವಧಿಸಿದವಳು ಯಾರು?

ನಮ್ಮ ಪುರಾಣ ಇತಿಹಾಸಗಳು ನರಕಾಸುರನ ಕಥೆಯನ್ನು ನಿರೂಪಿಸುತ್ತವೆ. ಈ ರಸಪ್ರಶ್ನೆಯಲ್ಲಿ ನಾವು ಈ ಕೆಲವು ಕಥೆಗಳನ್ನು ಹಂಚಿಕೊಂಡಿದ್ದೇವೆ. gaatha.com ಜಾಲತಾಣದಿಂದ ಪಡೆದ ಈ ತೊಗಲಿನ ವರ್ಣಚಿತ್ರವು ಕೃಷ್ಣ ಹಾಗೂ ನರಕಾಸುರರ ಕಥಾನಕವನ್ನು ಸೊಗಸಾಗಿ ಬಿಂಬಿಸಿದೆ. ಈ ರಸಪ್ರಶ್ನೆಯಲ್ಲಿ ಭಾಗವಹಿಸುವ ಐದು ಭಾಗ್ಯಶಾಲಿಗಳು ಅಮಿ ಗಣತ್ರ ಅವರ
Ramayana Unravelled ಪುಸ್ತಕವನ್ನು ಬಹುಮಾನವಾಗಿ ಪಡೆಯುವರು. ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!

ನರಕಾಸುರನನ್ನು ಹೆತ್ತ ಈ ಪ್ರಸಿದ್ಧ ತಂದೆತಾಯಿಯರು ಯಾರು?

ನರಕಾಸುರನ ರಾಜ್ಯವು ಪ್ರಾಗ್ಜ್ಯೋತಿಷ್ಪುರ. ಇಂದಿನ ಕಾಲಘಟ್ಟದಲ್ಲಿ ಅದು ಭಾರತದ ಯಾವ ರಾಜ್ಯವಾಗಿರಬಹುದು?

ನರಕಾಸುರನು ತನ್ನ ತಾಯಿಯ ಓಲೆಗಳನ್ನು ಕದ್ದ ಬಳಿಕ ಇಂದ್ರನು ಕೃಷ್ಣನ ಸಹಾಯವನ್ನು ಕೋರಿದನು. ಇಂದ್ರನ ತಾಯಿ ಯಾರು?

ನರಕಾಸುರನೊಂದಿಗಿನ ಸೆಣಸಾಟದಲ್ಲಿ ಗರುಡನ ಪಾತ್ರವೇನು?

ಕೆಲವು ಪ್ರಚಲಿತ ಕಥೆಗಳು ಹೇಳುವಂತೆ, ಓರ್ವ ಸ್ತ್ರೀ ನರಕಾಸುರನನ್ನು ವಧಿಸುತ್ತಾಳೆ. ಅವಳು ಯಾರು?

ಕೃಷ್ಣನ ಹಲವಾರು ಹೆಸರುಗಳಲ್ಲಿ ಈ ಹೆಸರು ನರಕಾಸುರನ ಐದು ತಲೆಯ ಸೇನಾಧಿಪತಿಯನ್ನು ಕೊಂದವನೆಂದು ಸೂಚಿಸುತ್ತದೆ. ಯಾವ ಹೆಸರಿದು?

ನರಕಾಸುರನನ್ನು ಮಣಿಸಿದ ಕೃಷ್ಣನು ಅವನ ಸೆರೆಮನೆಯಿಂದ ಎಷ್ಟು ಸ್ತ್ರೀಯರನ್ನು ಮುಕ್ತಗೊಳಿಸಿದನು ?

ನರಕಾಸುರನ ಕಥೆಯು ರಾಮಾಯಣದಲ್ಲಿಯೂ ಕಾಣಸಿಗುತ್ತದೆ. ಇಲ್ಲಿ ನರಕಾಸುರನನ್ನು ಯಾರು ವಧಿಸುತ್ತಾರೆ?

ಕಾಳಿಕಾ ಪುರಾಣದ ಪ್ರಕಾರ, ವಿಷ್ಣುವು ನರಕಾಸುರನಿಗೆ ಯಾವ ದೇವಿಯನ್ನು ಆರಾಧಿಸುವಂತೆ ಹೇಳಿದನು?

ಮಹಾಭಾರತ ಯುದ್ಧದಲ್ಲಿ ಕೌರವರ ಪಕ್ಷದಲ್ಲಿದ್ದ ಈ ಮಹಾವೀರನು, ನರಕಾಸುರನ ಮಗನು . ಇವನು ಯಾರು?

ದಕ್ಷಿಣ ಭಾರತದ ದೀಪಾವಳಿಯ ಯಾವ ಆಚರಣೆಯು ಸತ್ಯಭಾಮೆ ಮತ್ತು ಕೃಷ್ಣರು ನರಕಾಸುರನನ್ನು ಸಂಹರಿಸಿದ ನಂತರ ವಿಶ್ರಾಂತಿ ಪಡೆದ ರೀತಿಯನ್ನು ಪುನರಾವರ್ತಿಸುತ್ತದೆ?

ಯಾವ ರಾಜ್ಯದಲ್ಲಿ ನರಕಾಸುರನ ಪ್ರತಿಕೃತಿಯನ್ನು ದಹಿಸುವ ವಿಶಿಷ್ಟ ಸಂಪ್ರದಾಯವಿದೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In