208

ಜನ್ಮಾಷ್ಟಮಿ’ – ರಸಪ್ರಶ್ನೆ

2025ರಲ್ಲಿ ಸ್ವಾತಂತ್ರ್ಯ ದಿನ ಮತ್ತು ಜನ್ಮಾಷ್ಟಮಿ ಒಂದರ
ಹಿಂದೊಂದರಂತೆ ಬರುತ್ತವೆ. ಇದು ಬಹಳ ಅರ್ಥಪೂರ್ಣವಾಗಿದೆ, ಏಕೆಂದರೆ ಈ ಎರಡೂ ಪರ್ವಕಾಲಗಳ
ಸಮ್ಮಿಲನವು ನಾಗರೀಕತೆ ಮತ್ತು ಧರ್ಮದ ಪುನರುತ್ಥಾನವನ್ನು ಸಂಕೇತಿಸುತ್ತದೆ. ಕೃಷ್ಣ ಮತ್ತು
ಕೃಷ್ಣವಾಣಿಯಾದ ಭಗವದ್ಗೀತೆಯ ಸಂದೇಶವು ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿಯಾಯಿತು.
ಕೃಷ್ಣನ ಜೀವನ ಮತ್ತು ಉಪದೇಶಗಳಿಂದ ಪ್ರೇರಿತರಾದ ಅನೇಕ ನಾಯಕರು ಗೀತೆಗೆ ತಮ್ಮ
ವ್ಯಾಖ್ಯಾನಗಳನ್ನು ರಚಿಸಿದರು.ಭಗವಾನ್ ಕೃಷ್ಣನ ಸಂದೇಶವು ನಮ್ಮ ಸ್ವಾತಂತ್ರ್ಯ ಹೋರಾಟದ
ಮಹಾಪುರುಷರನ್ನು ಹೇಗೆ ಪ್ರಚೋದಿಸಿತು ಎಂಬುದನ್ನು ಒಮ್ಮೆ ಗಮನಿಸೋಣ. ಸ್ವಾತಂತ್ರ್ಯ ದಿನಾಚರಣೆಯ
ಶುಭಾಶಯಗಳು! ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು!

ಅವರು ನಮ್ಮ ರಾಷ್ಟ್ರೀಯ ಗೀತೆಯನ್ನು ರಚಿಸಿದರು. ಅವರು ಒಬ್ಬ ಮಹಾನ್ ಕಾದಂಬರಿಕಾರರಾಗಿದ್ದರು. ಅವರು ‘ಕೃಷ್ಣ ಚರಿತ್ರ’ ಎಂಬ ಕೃತಿಯನ್ನು ರಚಿಸಿದ್ದಾರೆ. ಅವರು ಯಾರು?

ಸೆರೆಮನೆಯಲ್ಲಿ ಕೃಷ್ಣನ ದೈವಿಕ ದರ್ಶನದ ಅನುಭವವನ್ನು ಪಡೆದು, ಕ್ರಾಂತಿಕಾರಿಯ ಮಾರ್ಗದಿಂದ ಭಾರತದ ಮಹಾನ್ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿ ಪರಿವರ್ತನೆಗೊಂಡವರು ಯಾರು?

ಕೃಷ್ಣನು ಯುದ್ಧಭೂಮಿಯಲ್ಲಿ ಭಗವದ್ಗೀತೆಯನ್ನು ಉಪದೇಶಿಸಿದನು. ಗಾಂಧೀಜಿಯವರು ತಮ್ಮ ಅಹಿಂಸೆಯ ತತ್ವದೊಂದಿಗೆ ಮಹಾಭಾರತದ ಯುದ್ಧವನ್ನು ಹೇಗೆ ಸಮನ್ವಯಗೊಳಿಸಿದರು?

ಭಾರತದ ಕೊನೆಯ ಗವರ್ನರ್-ಜನರಲ್ ಆಗಿದ್ದವರು ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಸರಳ ಮತ್ತು ಜನಪ್ರಿಯ ಪುಸ್ತಕಗಳನ್ನು ಬರೆದರು. ಅವರು ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆಯ ಕುರಿತು ಒಂದು ಪುಸ್ತಕವನ್ನೂ ರಚಿಸಿದರು. ಅವರು ಯಾರು?

ಈ ಜನನಾಯಕರು, ಮಹಾನ್ ಸಂಸ್ಕೃತ ವಿದ್ವಾಂಸರು ಮತ್ತು ಗಣಪತಿಯ ಭಕ್ತರು, ತಮ್ಮ ಮಾತೃಭಾಷೆಯಾದ ಮರಾಠಿಯಲ್ಲಿ ಗೀತೆಗೆ ಘನವಾದ ಭಾಷ್ಯವನ್ನು ಬರೆದರು. ಇವರು ಯಾರು?

ಲಾಲಾ ಲಜಪತ್‌ರಾಯ್ ಅವರು ಗೀತೆಯ ಕುರಿತು ಹಿಂದೂಯೇತರರ ತಪ್ಪು ಕಲ್ಪನೆಗಳನ್ನು ನಿವಾರಿಸಲು ಯಾವ ಭಾಷೆಯಲ್ಲಿ ತಮ್ಮ ವ್ಯಾಖ್ಯಾನವನ್ನು ಬರೆದರು?

ಹಸ್ರತ್ ಮೊಹಾನಿ ಅವರು ‘ಕೃಷ್ಣನನ್ನು ಪ್ರೀತಿಸಿದ ಮೌಲಾನಾ’ ಎಂದು ಜನಪ್ರಿಯರಾಗಿದ್ದರು. ಅವರ ಹೆಸರಿನಲ್ಲಿ ಪ್ರಸಿದ್ಧಿಯಾಗಿರುವ ಯಾವ ಘೋಷವಾಕ್ಯವಿದೆ?

ಅವರು ಸ್ವತಂತ್ರ ಭಾರತದಲ್ಲಿ ಸಮಾಜವಾದದ ಮುಖವಾಗಿದ್ದರು. ಅವರು ನಾಸ್ತಿಕರಾಗಿದ್ದರೂ ಸಹ, “ರಾಮ, ಕೃಷ್ಣ ಮತ್ತು ಶಿವ ಭಾರತದ ಮೂರು ಮಹಾನ್ ಕನಸುಗಳು” ಎಂದು ಹೇಳಿದರು. ಅವರು ಯಾರು?

ಸ್ವಾಮಿ ವಿವೇಕಾನಂದರು ‘ಗೀತಾ’ ಎಂಬ ಪದವನ್ನು ಹಿಂದುಮುಂದಾಗಿ ಜಪಿಸಿದರೆ, (ತಾ-ಗೀ) ಅದು ಮಾನವ ಜೀವನದ ಮೂಲಭೂತ ಅರ್ಥಕ್ಕೆ ಕರೆದೊಯ್ಯುತ್ತದೆ ಎಂದು ಗಮನಿಸಿದರು. ಅವರು ಯಾವ ಅರ್ಥವನ್ನು ಉಲ್ಲೇಖಿಸಿದರು?

ಗೀತೆಯ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ನೇಣುಗಂಬವನೇರಿದ 18 ವರ್ಷದ ಕ್ರಾಂತಿಕಾರಿಯಾಗಿದ್ದವನು ಯಾರು?

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸ್ಪಾಲ್ಡಿಂಗ್ ಪ್ರಾಧ್ಯಾಪಕರಾಗಿದ್ದ ಇವರು, ಗೀತೆಯ ಬಗ್ಗೆ ಶೈಕ್ಷಣಿಕವಾಗಿ ಅತ್ಯಂತ ವರ್ಚಸ್ವಿಯಾದ ವ್ಯಾಖ್ಯಾನಗಳಲ್ಲೊಂದನ್ನು ಬರೆದಿದ್ದಾರೆ. ಅವರು ಯಾರು?

ಸ್ವರಾಜ್ಯ ಭಾರತದ ಪ್ರತಿಪಾದಕರಾದ ಈ ಬ್ರಿಟಿಷ್ ಮೂಲದ ವ್ಯಕ್ತಿ, ಗೀತೆಯಲ್ಲಿರುವ ರಹಸ್ಯ ಸಂದೇಶವನ್ನು ದೇಶದಲ್ಲಿ ಪ್ರಚುರಪಡಿಸಬೇಕೆಂದು ಬಯಸಿದರು. ಅವರು ಯಾರು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In