ಮಹಾಭಾರತದಲ್ಲಿ ಎರಡು ಕಥೆಗಳಲ್ಲಿ ಹನುಮನು ಕಾಣಿಸಿಕೊಳ್ಳುತ್ತಾನೆ. ಒಂದು ಕಥೆಯಲ್ಲಿ ಅರ್ಜುನ ಹಾಗೂ ಹನುಮರ ಸಮಾಗಮವಾಗುತ್ತದೆ. ಅಸೀಮಶೂರನಾದ ರಾಮನಿಗೆ ಸೇತುವೆಯನ್ನು ಕಟ್ಟಲು ವಾನರರ ಸಹಾಯವೇಕೆ ಬೇಕಿತ್ತು, ಬಾಣಗಳಿಂದಲೇ ಆಗುತ್ತಿರಲಿಲ್ಲವೇ ಎಂಬ ಅರ್ಜುನನ ಸಂದೇಹಕ್ಕೆ, ಸಾಮಾನ್ಯ ಕಪಿರೂಪದಲ್ಲಿ ಇದ್ದ ಹನುಮನು, ಬಾಣಗಳ ಸೇತುವೆಯು ಒಬ್ಬ ವಾನರನ ತೋಳಿನ ತೂಕವನ್ನೂ ತಡೆಯುತ್ತಿರಲಿಲ್ಲ ಎಂದು ವಾದಿಸಿದನು. ಅರ್ಜುನನು, ತಾನು ಅಂತಹ ಒಂದು ಸೇತುವನ್ನು ಕಟ್ಟುವೆನು ಎಂದು ಜಂಭಪಡಲು, ಅರ್ಜುನನ ಬಾಣಗಳ ಆ ಸೇತುವೆಯನ್ನು ಹನುಮನು ತತ್ ಕ್ಷಣವೇ ಧ್ವಂಸಮಾಡಿದ. ಕೃಷ್ಣನು ಬಂದು ಸಮಸ್ಯೆಯನ್ನು ಬಗೆಹರಿಸಲಾಗಿ, ಹನುಮನು ಅರ್ಜುನನ ರಥದ ಪತಾಕೆಯಲ್ಲಿ ನೆಲೆಸುವೆನೆಂದು ಹೇಳಿದನು. ಮತ್ತೊಂದು ಹನುಮನನ್ನು ಒಳಗೊಂಡ ಕಥೆ ಸೌಗಂಧಿಕಾ ಪುಷ್ಪಹರಣದ ಪ್ರಸಂಗದಲ್ಲಿ ಕಾಣುತ್ತದೆ. ಕಷ್ಟಕರ ವನವಾಸವನ್ನು ಪಾಂಡವರು ಸವೆಸುತ್ತಿರಲು, ಒಂದು ದಿನ ಅಪರಿಮಿತ ಪರಿಮಳ ಹೊಂದಿದ ಸೌಗಂಧಿಕಾ ಪುಷ್ಪವು ದ್ರೌಪದಿಗೆ ಸಿಕ್ಕಿ ಅವಳ ಮನವನ್ನು ಸೆಳೆಯಿತು. ಭೀಮಸೇನನು ಅವಳ ಇಚ್ಛೆಯನ್ನು ಈಡೇರಿಸಲು ಅದರ ಸುಳಿವನ್ನು ಹಿಡಿದು ಹೊರಟನು. ಅವನ ದಾರಿಗೆ ಅಡ್ಡಲಾಗಿ ಕಪಿಯೊಂದು ಮಲಗಿದ್ದಿತು. ಕಪಿಯನ್ನು ದಾಟುವುದು ಉಚಿತವಲ್ಲವೆಂದು, ಅದರ ಬಾಲವನ್ನು ಸರಿಸಿ ಮುಂದುವರಿಯಲು ನಿರ್ಧರಿಸಿದ ಭೀಮನಿಗೆ ಕಪಿಯ ಬಾಲವನ್ನು ಅಲ್ಲಾಡಿಸಲೂ ಆಗಲಿಲ್ಲ. ಅಲ್ಲಿಯವರೆಗೆ ಕಪಿಯ ರೂಪದಲ್ಲಿ ಅಡಗಿದ್ದ ಹನುಮನನ್ನು ಭೀಮ ಮನಗಂಡು ಅವನ ಪಾದಗಳಿಗೆರಗಿದ. ಹನುಮನ ಕೃಪೆಗೆ ಪಾತ್ರನಾದ. ಹನುಮನು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಪತಾಕೆಯಲ್ಲಿ ತಾನು ನೆಲೆಸುವೆನೆಂದು ಮಾತುಕೊಟ್ಟ. ಹೀಗಾಗಿ, ಹಿಂದೂಗಳಿಗೆ ಕೇಸರಿ ಪತಾಕೆಯಲ್ಲಿನ ಹನುಮನ ಲಾಂಛನವು ಶುಭಸೂಚಕವಾಗಿದೆ. ವಾಯುದೇವನ ಅಂಶದಿಂದ ಹುಟ್ಟಿದ ಕುಂತೀ ಪುತ್ರ ಬಲಭೀಮನು ಹನುಮನ ಸಹೋದರನು.
Hanumanji’s flags on sale in Ayodhya