122

ಶಂಕರ ಜಯಂತಿ ಕುರಿತ ರಸಪ್ರಶ್ನೆ

ಇಂದು, ಏಪ್ರಿಲ್ ೨೧,೨೦೩೬, ಆದಿ ಶಂಕರಾಚಾರ್ಯರ ಜಯಂತಿ. ಅವರು ನಮಗೆ ಹಲವಾರು ಭಾಷ್ಯ, ಸ್ತೋತ್ರ, ತತ್ವಶಾಸ್ತ್ರಗಳ ಗ್ರಂಥಭಂಡಾರವನ್ನೇ ಬಿಟ್ಟು ಹೋಗಿದ್ದಾರೆ.ಇವರ ಕೃತಿಗಳು ಭಾರತೀಯ ಪುರಾತನ ಗ್ರಂಥಗಳ ಬೃಹತ್ ಗ್ರಂಥಾಲಯದ ಒಳಗಿರುವ ಮತ್ತೊಂದು ಗ್ರಂಥಾಲಯದಷ್ಟಿವೆ.
ಸ್ವಾಮಿ ಚಿನ್ಮಯಾನಂದರು ಒಮ್ಮೆ ‘ಪ್ರತಿ ಧರ್ಮದಲ್ಲಿ ಒಂದು ಪವಿತ್ರ ಗ್ರಂಥವಿರುತ್ತದೆ, ಆದರೆ ಹಿಂದೂ ಧರ್ಮದಲ್ಲಿ ಹೇಳುವುದಾದರೆ ಇದೋ ಬನ್ನಿ ನನ್ನ ಗ್ರಂಥಾಲಯಕ್ಕೆ ಸ್ವಾಗತ’ ಎಂದು ಹೇಳಿದ್ದರು. ಆದ್ದರಿಂದ ನಿಮಗೆ ಈ ಗ್ರಂಥಗಳ ಪರಿಚಯನೀಡಲು ನಾವು ಈ ರಸಪ್ರಶ್ನೆಯಲ್ಲಿ ೧೨ ಮುಖ್ಯ ಗ್ರಂಥಗಳ ಬಗ್ಗೆ ಕಿರು ಮಾಹಿತಿ ನೀಡಿದ್ದೇವೆ. ಇದು ಹಿಂದೂ ಜ್ಞಾನ ಭಂಡಾರದ ಬೃಹತ್ ಸಾಗರದಲ್ಲಿ ಒಂದು ಹನಿ ಮಾತ್ರ.
ರಸಪ್ರಶ್ನೆಗೆ ಮೂಲ ಆಧಾರ ಎರಡು ಸುಂದರ ಪುಸ್ತಕಗಳು ಶತಾವಧಾನಿ ಆರ್. ಗಣೇಶ್ ಅವರ “ದಿ ಎಸೆನ್ಷಿಯಲ್ ಸನಾತನ ಧರ್ಮ”, ಹರಿ ರವಿಕುಮಾರ್ ಅವರ ಅನುವಾದ ಮತ್ತು ಏಮಿ ಗಣಾತ್ರ ಅವರ “ವೈ ಆರ್ ವೀ ಲೈಕ್ ದಿಸ್ ಓನ್ಲಿ”, “ಎ ಗೈಡ್ ಟು ಹಿಂದೂ ಶಾಸ್ಟ್ರಾಸ್” .

೧. ವಿಶ್ವದ ಅತ್ಯಂತ ಹಳೆಯ ಧಾರ್ಮಿಕ ಗ್ರಂಥಗಳಾದ ವೇದಗಳನ್ನು ಸಂಕಲಿಸಿದವರು ಯಾರು?

೨. ಸಂಸ್ಕೃತ ವ್ಯಾಕರಣವು ೨೫೦೦ ವರ್ಷಗಳ ಹಿಂದೆಯೇ ರೂಪುಗೊಂಡಿತ್ತು. ಈ ಗ್ರಂಥದ ಹೆಸರೇನು?

೩. ಗಾಯತ್ರಿ ಮಂತ್ರವು ಸೂರ್ಯನನ್ನು ಉಪಾಸನೆ ಮಾಡುತ್ತದೆ. ಮಂತ್ರದಲ್ಲಿ ಗಾಯತ್ರಿ ಪದವು ಏನನ್ನು ಸೂಚಿಸುತ್ತದೆ?

೪. ಜ್ಯೋತಿಷ್ಯವನ್ನು ಇಂದು ಭವಿಷ್ಯ ಅರಿಯಲು ಇರುವ ಸಾಧನ ಎಂದು ಸಾಮಾನ್ಯವಾಗಿ ತಿಳಿದಿರುತ್ತಾರೆ. ಆದರೆ, ಜ್ಯೋತಿಷ್ಯದ ನಿಜವಾದ ಅರ್ಥವೇನು?

೫. ಚಾಣಕ್ಯನ ಅರ್ಥಶಾಸ್ತ್ರ ಭಾರತೀಯ ತತ್ವಶಾಸ್ತ್ರದ ವ್ಯವಸ್ಥೆಯ ಯಾವ ಅಂಶದ ಬಗೆಗಿನ ವಿಸ್ತಾರವಾದ ಕೃತಿ

೬. ಚರಕ ಸಂಹಿತಾ, ಇಂದು ಜಾಗತಿಕವಾಗಿ ಜನಪ್ರಿಯವಾಗಿರುವ ಕ್ಷೇತ್ರದಲ್ಲಿನ ಒಂದು ಪ್ರಾಚೀನ ಭಾರತೀಯ ಪಠ್ಯ. ಇದು ಯಾವುದರ ಕುರಿತು ಬರೆಯಲಾಗಿದೆ ?

೭.ನಾಟ್ಯ, ಸಂಗೀತ ಮತ್ತು ಪ್ರದರ್ಶನ ಕಲೆಗಳ ಕೈಪಿಡಿಯಾದ ನಾಟ್ಯಶಾಸ್ತ್ರವು ನಾಟ್ಯ ವೇದದಿಂದ ರೂಪುಗೊಂಡಿದೆ. ನಾಟ್ಯವೇದವು ಯಾವ ದೇವರಿಂದ ಆರಂಭವಾಯಿತು ಎನ್ನಲಾಗಿದೆ?

೮.ರಾಮಾಯಣ ಮತ್ತು ಮಹಾಭಾರತಗಳು ನಮ್ಮ ಇತಿಹಾಸವೆಂದು ಕರೆಯಲ್ಪಡುತ್ತವೆ. ಇತಿಹಾಸ ಎಂದರೇನು?

೯.ದೇವತೆಗಳು, ಅರಸರು, ಅವರ ವಂಶಾವಳಿಗಳು ಮತ್ತು ಹಲವಾರು ಸ್ಥಳಗಳ ಬಗ್ಗೆ ಮಾಹಿತಿ ಕೊಡುವ ಮತ್ತೊಂದು ಕೃತಿ ಗುಚ್ಛವನ್ನು ವೇದ ವ್ಯಾಸರು ರಚಿಸಿದ್ದಾರೆ. ಇದು ಯಾವದು?

೧೦.ಯಾವ ಶಾಸ್ತ್ರವು ದೇವಾಲಯ ನಿರ್ಮಾಣ ಮತ್ತು ಪೂಜಾ ಪದ್ಧತಿಗಳ ಬಗ್ಗೆ ತಿಳಿಸುತ್ತದೆ?

೧೧. ಆಂಗ್ಲ ಭಾಷೆಯಲ್ಲಿ ‘ ಫಿಲಾಸಫಿ’ ಎಂದು ಕರೆಯುವುದನ್ನು ಸಂಸ್ಕೃತದಲ್ಲಿ ದರ್ಶನ ಎಂದು ಕರೆಯುತ್ತಾರೆ. ದರ್ಶನ ಪದದ ಅರ್ಥವೇನು?

೧೨. ಉಪನಿಷತ್ತುಗಳು ವೇದಾಂತದ ಅಡಿಪಾಯವೆನಿಸಿವೆ. ವೇದಾಂತ ಎಂದರೆ ಏನು?

ನಾವು ಈಗ ನೋಡಿರುವ ವೇದಗಳು,ಮೂರು ಉಪವೇದಗಳು, ಮೂರು ವೇದಾಂಗಗಳು, ಇತಿಹಾಸ, ಪುರಾಣ, ಆಗಮ, ದರ್ಶನ ಮತ್ತು ವೇದಾಂತದ ಪಕ್ಷಿ ನೋಟವೆಲ್ಲವೂ ಸನಾತನ ಹಿಂದೂ ಧರ್ಮದ ಬೃಹತ್ ಗ್ರಂಥಾಲಯದ ಒಂದು ಕಪಾಟು ಅಷ್ಟೇ.ಆದಿ ಶಂಕರಾಚಾರ್ಯರು ಒಬ್ಬರೇ ೧೮ ಭಾಷ್ಯಗಳನ್ನು, ೨೩ ಅಧ್ಯಾತ್ಮಿಕ ಗ್ರಂಥಗಳನ್ನು ಮತ್ತು ೭೩ ಸ್ತೋತ್ರಗಳನ್ನು ರಚಿಸಿದ್ದಾರೆ. ಇವಿಷ್ಟೂ ಬಂಗಾರವೇ ಹೌದು.ಮಹಾಪುರಾಣಗಳಲ್ಲಿ ೪,೦೦,೦೦೦ ಶ್ಲೋಕಗಳಿದ್ದು, ಮಹಾಭಾರತದಲ್ಲಿ ೮,೯೦,೦೦೦ ಶ್ಲೋಕಗಳಿವೆ.
ಆಚಾರ್ಯ ಪಿ.ವಿ. ಕಾಣೆ ಅವರ ಧರ್ಮಶಾಸ್ತ್ರದ ಇತಿಹಾಸ ಕುರಿತ‌ ಹೊತ್ತಿಗೆ ೬೫೦೦ ಪುಟಗಳಷ್ಟು ಬೃಹತ್ತಾಗಿದೆ . ಇದನ್ನು ಇಂದಿನ ರಸಪ್ರಶ್ನೆಯಲ್ಲಿ ಕೈ ಬಿಡಬೇಕಾಯಿತು.೧೯೩೦ರ ವೇಳೆಗೆ ವೇದಗಳ ಬಗೆಗೆ ಬಂದಿದ್ದ ಸಂಶೋಧನಾ ಪ್ರಬಂಧಗಳು ೬೫೦೦ರಷ್ಟು. ೧೯೩೦-೧೯೪೫ರ ವೇಳೆಗೆ ಇನ್ನೂ ೩೫೦೦ ಪ್ರಬಂಧಗಳು ಸೇರ್ಪಡೆಯಾಗಿದ್ದವು. ಸ್ಥಳೀಯ ಗ್ರಂಥಗಳಾದ ನಾರಾಯಣೀಯಂ, ಕಂಬ ರಾಮಾಯಣ ಮತ್ತು ಕುಮಾರವ್ಯಾಸ ಭಾರತ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದೆ.
ಆಸಕ್ತರಿಗೆ ಹಿಂದೂ ಧರ್ಮದ ಅಪಾರ ಜ್ಞಾನ ರಾಶಿಯ ಬಗ್ಗೆ ತಿಳಿಯಬೇಕಾದರೆ ಎರಡು ಪುಸ್ತಕಗಳನ್ನು ಹೆಸರಿಸಬಹುದು.
೧. ಶ್ರೀ ಹರಿ ರವಿಕುಮಾರ್ ಅವರು ಅನುವಾದಿಸಿರುವ ಶತಾವಧಾನಿ ಡಾ.ಆರ್ ಗಣೇಶರ “ ದಿ ಎಸೆನ್ಷಿಯಲ್ ಸನಾತನ ಧರ್ಮ ‘
೨. ಅಮಿ ಗಣತ್ರ ಅವರ “ ವೈ ಆರ್ ವೀ ಲೈಕ್ ದಿಸ್ ಓನ್ಲಿ – ಎ ಗೈಡ್ ಟು ಹಿಂದೂ ಶಾಸ್ತ್ರ ‘ ಪುಸ್ತಕ.

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In