ದಕ್ಷ ಬ್ರಹ್ಮನು ಶಿವನನ್ನು’ನಿರ್ಗತಿಕ’ನೆಂದು ಅವಮಾನಿಸಿ, ಸತಿಯು ಯಜ್ಞಕುಂಡಕ್ಕೆ ಹಾರಿ ಜೀವ ಕಳೆದುಕೊಂಡಾಗ, ಬಹಳ ನೊಂದ ಶಿವನು ಉತ್ಕಟವಾದ ಬ್ರಹ್ಮಚರ್ಯೆಯಲ್ಲಿ ತೊಡಗಿಕೊಂಡನು. ಪಾರ್ವತಿಯಾಗಿ ಮರುಹುಟ್ಟಿದ ಸತಿಯೆಡೆಗೆ ಶಿವನ ಗಮನವನ್ನು ಸೆಳೆಯುವ ಕಾರ್ಯವನ್ನು ಇಂದ್ರನು ಪ್ರೇಮ-ಕಾಮಗಳ ಅಧಿದೇವತೆಯಾದ ಮನ್ಮಥನಿಗೆ ವಹಿಸಿದನು. ಈ ಕಾರ್ಯದಲ್ಲಿ ನಿರತನಾದ ಕಾಮದೇವನು(ಮನ್ಮಥ), ಶಿವನ ನೇತ್ರಾಗ್ನಿಗೆ ಸಿಲುಕಿ ಭಸ್ಮವಾದನು. ಪತಿ ವಿಯೋಗದಿಂದ ಬಳಲುತ್ತಿದ್ದ ರತಿಯ ದುಃಖವನ್ನು ನೋಡಲಾಗದೇ ಶಿವನು ಕಾಮನನ್ನು ಅನಂಗನಾಗಿ ಪುನರುಜ್ಜೀವಿಸುವಂತೆ ವರವನ್ನಿತ್ತನು. ಹೋಲಿ ಹಬ್ಬವು ಕಾಮನ ಪುನರ್ಜನ್ಮದ ಆಚರಣೆಯ ಸಂಕೇತ. ಹಬ್ಬದ ಮುನ್ನಾದಿನ, ಕಟ್ಟಿಗೆಗಳು, ಟೊಂಗೆ ಇತ್ಯಾದಿಗಳನ್ನು ಬಳಸಿ ‘ಕಾಮನ’ನ್ನು ನಿರ್ಮಿಸಿ, ಪೂಜಾ ಕಾರ್ಯಗಳನ್ನು ಕೈಗೊಂಡು, ಕಾಮನ ಆಕೃತಿಯನ್ನು ಸುಟ್ಟು ,ಕಾಮದಹನವನ್ನು ಆಚರಿಸುತ್ತಾರೆ. ಪುರಾತನ ಪಠ್ಯಗಳಲ್ಲಿ ಈ ವಸಂತದ ಹಬ್ಬಕ್ಕೆ ಕಾಮೋತ್ಸವ, ಮದನೋತ್ಸವ ಎಂಬ ಹೆಸರುಗಳನ್ನು ಕಾಣಬಹುದು. ಈ ಆಚರಣೆಯು ಮಧ್ಯ ಹಾಗೂ ದಕ್ಷಿಣ ಭಾರತಗಳಲ್ಲಿ ಪ್ರಚಲಿತವಾಗಿದ್ದವು. ಉತ್ತರ ಹಾಗೂ ಪೂರ್ವ ಭಾರತಗಳಲ್ಲಿ ಹೋಲಿಕಾ ದಹನದ ಆಚರಣೆಗಳು ರೂಢಿಯಲ್ಲಿದ್ದವು. ಕಾಮದಹನದ ಹಬ್ಬವು ಕಾಲಾಂತರದಲ್ಲಿ ಬಹಳ ಕಡೆಗಳಲ್ಲಿ ಮರೆತುಹೋಗಿದ್ದರೂ, ದಕ್ಷಿಣದ ಕೆಲ ಭಾಗಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ. ಮಹಾರಾಷ್ಟ್ರದ ಕೆಲವು ಹಳ್ಳಿಗಳಲ್ಲಿ ‘ಧೂಳಿವಂದನ’ ಹಬ್ಬದ ಆಚರಣೆಯು ಇಂದಿಗೂ ಇದೆ. ಕಾಮದಹನದ ಬೂದಿಯನ್ನು(ಧೂಳಿ) ದೇಹಕ್ಕೆ ಬಳಿದುಕೊಂಡು ಕಾಮನು ಪುನರುಜ್ಜೀವಿಸಿದ್ದನ್ನು ಸಂಭ್ರಮಿಸುತ್ತಾರೆ.
ಮೂಲ: ನಾಗರಾಜ ಪತುರಿ, https://indiafacts.org/holi-kaamotsava-age-old-hindu-festival-love/
The 1890 painting is Shiva burning Kamadeva.