ಕೌಟಿಲ್ಯನು ರಚಿಸಿದನೆನ್ನಲಾದ ಅರ್ಥಶಾಸ್ತ್ರವೇ ಆಡಳಿತ ನೀತಿ ಹಾಗೂ ಸಂಪತ್ತಿನ ಸೃಷ್ಟಿಗೆ ಆಧಾರ ಗ್ರಂಥವಾಗಿದೆ. ಮೌಲ್ಯಯುತವಾದ ಸುಭದ್ರ ಬದುಕಿಗೆ ಸಂಪತ್ತು ಅತ್ಯವಶ್ಯವೆಂದು ಅರ್ಥಶಾಸ್ತ್ರವು ಪರಿಗಣಿಸುತ್ತದೆ. ವ್ಯವಸಾಯ, ವ್ಯಾಪಾರ, ಗಣಿಗಾರಿಕೆ, ಉದ್ಯಮ ಹಾಗೂ ನ್ಯಾಯೋಚಿತ ರಾಜ್ಯಭಾರದಿಂದ ಸಂಗ್ರಹಿಸಿದ ತೆರಿಗೆಯಿಂದ ಸಂಪತ್ತನ್ನು ಸೃಷ್ಟಿಸಬೇಕೆಂದು ಅರ್ಥಶಾಸ್ತ್ರವು ವಿವರಿಸುತ್ತದೆ. ವ್ಯವಸ್ಥಿತ ಮಾರುಕಟ್ಟೆಗಳು, ಶ್ರೇಣಿಗಳ ಬೆಂಬಲದಿಂದ ವಸ್ತುಗಳ ಉತ್ಪಾದನೆ, ಮೂಲಭೂತ ಸೌಕರ್ಯಗಳಾದ ರಸ್ತೆಗಳು, ನೀರಾವರಿ ಹಾಗೂ ಬಂದರು ನಿರ್ಮಾಣದಲ್ಲಿ ಬಂಡವಾಳ ಹೂಡಿಕೆಯನ್ನು ಇದು ಸಮರ್ಥಿಸುತ್ತದೆ. ಇದರೊಂದಿಗೆ ಅರ್ಥಶಾಸ್ತ್ರವು, ಭ್ರಷ್ಟಾಚಾರ, ವಂಚನೆ, ಅಕ್ರಮ ಸಂಗ್ರಹ ಹಾಗೂ ಶೋಷಣೆಗಳನ್ನು ತೀವ್ರವಾಗಿ ಖಂಡಿಸುತ್ತದೆ. ರಾಜರು ಅಥವಾ ಭೂ ಪಾಲಕರು ರೈತರ, ಕಲಾವಿದರ, ವರ್ತಕರ ಹಾಗೂ ಗ್ರಾಹಕರ ರಕ್ಷಕರೆಂದೂ, ಸಾಮಾಜಿಕ ನ್ಯಾಯವನ್ನು ಸ್ಥಿರೀಕರಿಸಿ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಯುವ ಕಟ್ಟಾಳುಗಳೆಂದೂ ಬಣ್ಣಿಸುತ್ತದೆ.