ಭಾರತದಲ್ಲಿ ಸಾಂಪ್ರದಾಯಿಕ ಕಾವಿಳಿಕೆ ಪದ್ಧತಿಯಲ್ಲಿ ಲಾವಂಚ ಹುಲ್ಲಿನ ಚಾಪೆಯನ್ನು ಕಿಟಕಿ ಮತ್ತು ಬಾಗಿಲುಗಳಿಂದ ಇಳಿ ಬಿಡುತ್ತಿದ್ದರು. ಈ ಚಾಪೆಗಳನ್ನು ನೀರು ಚಿಮುಕಿಸಿ ಒದ್ದೆಯಾಗಿಡುತ್ತಿದ್ದರು. ಇಂತಹ ಚಾಪೆಗಳ ಮೂಲಕ ಗಾಳಿಯು ಒಳ ಬರುವಾಗ ಬಾಷ್ಪೀಕರಣದಿಂದ ತಣ್ಣಗಾಗುತ್ತಿತ್ತು. ಈ ಗಾಳಿಯು ನೈಸರ್ಗಿಕ ಸುಗಂಧವನ್ನು ಹೊಂದಿರುತ್ತಿತ್ತು. ಇಲ್ಲಿ ಭಾಷ್ಪೀಕರಣದ ತಂತ್ರಜ್ಞಾನ ಉಪಯೋಗವಾಗುತ್ತಿರುವುದರಿಂದ, ಇದು ಶುಷ್ಕ ವಾತಾವರಣದ ಪ್ರದೇಶದಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗಾಗಿ ಈ ವ್ಯವಸ್ಥೆಯನ್ನು ಉತ್ತರ ಭಾರತದಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿತ್ತು. ಲಾವಂಚ ಹುಲ್ಲಿನ ಬೀಜ ಮತ್ತು ಅದರ ಬೇರಿನ ಕಷಾಯ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತಿದ್ದವು . ದೆಹಲಿಯ ಕೆಂಪುಕೋಟೆಯಲ್ಲಿ ದಿವಾನ್ ಈ ಖಾಸ್ ನಲ್ಲಿದ್ದ ಸಿಂಹಾಸನದ ಸುತ್ತಲೂ ನಾಲ್ಕು ಮೀಟರ್ ಅಂತರದಲ್ಲಿ ಎರಡು ಜೊತೆಯ ಕಿಂಡಿಗಳಿವೆ.
ಈ ಕಿಂಡಿಗಳನ್ನು, ಬೇಸಿಗೆಯಲ್ಲಿ ನೀರು ಚಿಮುಕಿಸಿದ ಲಾವಂಚ ಹುಲ್ಲಿನ ಚಾಪೆಗಳಿಂದ ಮತ್ತು ಚಳಿಗಾಲದಲ್ಲಿ ದಪ್ಪ ಕೌದಿಗಳಿಂದ ಮುಚ್ಚಿರುತ್ತಿದ್ದರು.
ಈ ಚಿತ್ರವು ದೆಹಲಿಯ ಮೊಘಲ ಸಿಂಹಾಸನದ ಒಂದು ಪಕ್ಷಿನೋಟ. ಇಲ್ಲಿ ಕಾವಳಿಕೆಗೆ ನೀರಿನ ಕಾಲುವೆಗಳು ಮತ್ತು ಲಾವಂಚ ಹುಲ್ಲಿನ ಚಾಪೆಗಳನ್ನು ಉಪಯೋಗಿಸಿರುವುದನ್ನು ಕಾಣಬಹುದು.
ಮೂಲ (ಚಿತ್ರ ಮತ್ತು ಬರಹ): ಆಸಿಫ್ ಅಲಿ ಅವರ ‘ಪ್ಯಾಸಿವ್ ಕೂಲಿಂಗ್ ಇನ್ ಮೊಘಲ್ ಬಿಲ್ಡಿಂಗ್ಸ್’