‘‘ಮೇಘದೂತ’ ಅಥವಾ “ಮೇಘ ಸಂದೇಶ” —’ದೂತನಾದ ಮೇಘ’ -ಈ ಕೃತಿಯನ್ನು ಕಿಂಕೇಡ್ ಅವರು “ಯಾವುದೇ ಭಾಷೆಯಲ್ಲೂ ಅತ್ಯದ್ಭುತ ಪ್ರೇಮಕಾವ್ಯ” ಎಂದು ವರ್ಣಿಸಿದ್ದಾರೆ. ಈ ಖಂಡಕಾವ್ಯದಲ್ಲಿ ಧನದೇವತೆ ಕುಬೇರನ ಸೇವೆಯಲ್ಲಿದ್ದ ಯಕ್ಷನೊಬ್ಬನನ್ನು, ಅಲಕಾ ನಗರದಿಂದ ಮಧ್ಯಭಾರತದ ಒಂದು ಪರ್ವತಕ್ಕೆ ಗಡೀಪಾರು ಮಾಡಲಾಗುತ್ತದೆ. ಒಂಟಿತನದಿಂದ ಕುಗ್ಗಿದ ಯಕ್ಷ ತನ್ನ ಹೃದಯದ ಭಾವನೆಗಳನ್ನು ಒಂದು ಮೋಡಕ್ಕೆ ತೆರೆದಿಡುತ್ತಾ, ಅಲಕಾದಲ್ಲಿರುವ ತನ್ನ ಪ್ರಿಯತಮೆಗೆ ತನ್ನ ಭಾವನೆಗಳನ್ನು ತಲುಪಿಸುವಂತೆ ಕೇಳಿಕೊಳ್ಳುತ್ತಾನೆ. ಕಾಳಿದಾಸನಿಗೆ ಈ ಕಾವ್ಯ ರಚನೆಗೆ ಪ್ರೇರಣೆ – ವಾಲ್ಮೀಕಿ ಹಾಗೂ ರಾಮ ಸೀತೆಯನ್ನು ಹುಡುಕುವ ವಿಚಾರದಲ್ಲಿ ತೋರಿದ ತವಕ.
ಅವನು ಮೋಡವನ್ನು ನಿಧಾನವಾಗಿ ಹೋಗಲು, ಮಳೆಯನ್ನು ಸುರಿಸಲು, ಕಾಡ್ಗಿಚ್ಚನ್ನು ಆರಿಸಲು ಮತ್ತು ಎಲ್ಲರಿಗೂ ಕೃಪೆ ತೋರಲು ಕೇಳಿಕೊಳ್ಳುತ್ತಾನೆ. ಕಾಳಿದಾಸನು ಮೋಡದ ಉತ್ತರ ಭಾರತದಲ್ಲಿನ ಪ್ರಯಾಣದ ಮಾರ್ಗವನ್ನು ಅದ್ಭುತವಾಗಿ ವರ್ಣಿಸಿದ್ದಾನೆ. ಯಕ್ಷ ತಾನು ಈಗ ಗಡೀಪಾರಾಗಿ ನೆಲೆಸಿರುವ ಈ ಪರ್ವತವೇ ಹಿಂದೊಮ್ಮೆ ಸೀತಾ-ರಾಮರು ವಾಸಿಸಿದ್ದ ಸ್ಥಳ ಎಂದು ನೆನಪಿಸಿಕೊಳ್ಳುತ್ತಾ, ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. ವಿರಹದ ನೋವಿಂದ ಬೇಯುತ್ತಿರುವ ಯಕ್ಷ ಈಗ ಸಹ್ರದಯಿಯಾಗಿ ಮೋಡವನ್ನು ನಿಧಾನವಾಗಿ, ಮಳೆ ಸುರಿಸುತ್ತಾ, ಕಾಡ್ಗಿಚ್ಚುಗಳನ್ನು ಆರಿಸುತ್ತಾ, ಬೇಯುತ್ತಿರುವ ಎಲ್ಲರಿಗೂ ಕೃಪೆ ತೋರಲು ಕೇಳಿಕೊಳ್ಳುತ್ತಾನೆ. ಈ ಮಧ್ಯ ಕಾಳಿದಾಸ ಮೋಡದ ಉತ್ತರ ಭಾರತದ ಪ್ರಯಾಣ ಮಾರ್ಗವನ್ನು ಬಹು ರಮ್ಯವಾಗಿ ಚಿತ್ರೀಕರಿಸಿದ್ದಾನೆ. ಈ ಕಾವ್ಯದಲ್ಲಿ ಕಾಳಿದಾಸನು ಕಾವ್ಯ, ಭೂಗೋಳ, ದೈವಿಕ ಪ್ರೀತಿ ಮತ್ತು ಭಕ್ತಿಯನ್ನು ಅರೆದೈವಿಕ ಮನುಷ್ಯ (ಯಕ್ಷ )ಮತ್ತು ಪ್ರಕೃತಿಯ ಅಂಶದ (ಮೋಡ) ನಡುವಿನ ಕಾಲ್ಪನಿಕ ಸಂಭಾಷಣೆಯಲ್ಲಿ ಸುಂದರವಾಗಿ ಸಂಯೋಜಿಸಿದ್ದಾನೆ. ಮೇಘದೂತ ಸಂಪೂರ್ಣವಾಗಿ ಮಂದಗತಿಯ ಮಂದಾಕ್ರಾಂತಾ ಛಂದಸ್ಸಿನಲ್ಲಿ ರಚಿತವಾಗಿದ್ದು — ಇದು ಮೋಡದ ನಿಧಾನಗತಿಯನ್ನೂ, ಯಕ್ಷನ ವಿಷಾದದ ಆಳವನ್ನೂ ಪ್ರತಿನಿಧಿಸುತ್ತದೆ.
ಚಿತ್ರಕೃಪೆ : ಅಬನೀಂದ್ರನಾಥ ಟಾಗೋರ್ ಅವರಿಂದ ರಚಿತವಾದ ‘ದಿ ಬ್ಯಾನಿಷ್ಡ್ ಯಕ್ಷ’ ಎಂಬ ಶೀರ್ಷಿಕೆಯಿರುವ ಮೇಘದೂತವನ್ನು ಆಧರಿಸಿದ ವರ್ಣಚಿತ್ರ – ವಿಕಿಮೀಡಿಯಾ.
ಮೂಲ: ಕೆ.ಎಸ್. ರಾಮಸ್ವಾಮಿ ಶಾಸ್ತ್ರಿ, “ಕಾಳಿದಾಸ: ಹಿಸ್ ಪೀರಿಯಡ್, ಪರ್ಸನಾಲಿಟಿ ಅಂಡ್ ಪೊಯಟ್ರಿ” (ಕಾಳಿದಾಸ: ಅವನ ಕಾಲ, ವ್ಯಕ್ತಿತ್ವ ಮತ್ತು ಕಾವ್ಯ)