ರಕ್ಷಾಬಂಧನ ರಸಪ್ರಶ್ನೆ
ಭಾಸ್ಕರಾಚಾರ್ಯರು ತಮ್ಮ ಪ್ರಸಿದ್ಧ ಗಣಿತ ಗ್ರಂಥಕ್ಕೆ ‘ಲೀಲಾವತಿ’ ಎಂದು ಹೆಸರಿಟ್ಟಿದ್ದರು. ಆದರೆ ಲೀಲಾವತಿ ಯಾರು ಎಂಬುದಕ್ಕೆ ಖಚಿತವಾದ ಐತಿಹಾಸಿಕ ದಾಖಲೆಗಳಿಲ್ಲ . ಜನಪ್ರಿಯ ಕಥೆಗಳ ಪ್ರಕಾರ ಆಕೆ ಅವರ ಮಗಳು. ಆದರೆ ಭಾಸ್ಕರಾಚಾರ್ಯರು ಲೀಲಾವತಿಯನ್ನು ಸಂಬೋಧಿಸಿರುವ ರೀತಿಯನ್ನು ಗಮನಿಸಿದ ಕೆಲವು ವಿದ್ವಾಂಸರು, ಆಕೆ ಅವರ ಪತ್ನಿಯಾಗಿರಬಹುದೆಂದೂ ಅಭಿಪ್ರಾಯಪಟ್ಟಿದ್ದಾರೆ. ಏನೇ ಆಗಲಿ, ಆ ಗ್ರಂಥವು ಲೀಲಾವತಿಗೆ ಸಲ್ಲಿಸಿದ ಗೌರವದ ಕಾಣಿಕೆಯೇ ಎಂಬುದರಲ್ಲಿ ಸಂದೇಹವಿಲ್ಲ.
ಹಾಗೆಯೇ , ಭಾರತದ STEM ಕ್ಷೇತ್ರದ ಮಹಿಳೆಯರೆಲ್ಲರೂ ಒಂದುರೀತಿ ರೂಪಕವಾಗಿ ಲೀಲಾವತಿಯ ಪರಂಪರೆಯನ್ನುಮುಂದುವರಿಸಿಕೊಂಡು ಬಂದವರು ಎನ್ನಬಹುದು ! ವೇದಕಾಲದ ಚಿಂತಕಿಯರಿಂದ ಹಿಡಿದು ಕ್ಷಿಪಣಿ ವಿಜ್ಞಾನಿಗಳವರೆಗೆ, ಸಂಶೋಧಕಿಯರು, ಹೊಸತನದ ಅನ್ವೇಷಕಿಯರು ಮತ್ತು ವಿಜ್ಞಾನ ಸಾಹಸಿಗರವರೆಗೆ—ನಮ್ಮಲ್ಲಿ ಅಸಾಧಾರಣ ಮಹಿಳೆಯರ ದೀರ್ಘ ಪರಂಪರೆಯಿದೆ.
ಈ ರಕ್ಷಾಬಂಧನದ ಸಂದರ್ಭದಲ್ಲಿ, STEM ಕ್ಷೇತ್ರದ ಈ ಪ್ರಬಲ ಮಹಿಳಾ ಪರಂಪರೆಯನ್ನು ಸಂಭ್ರಮಿಸೋಣ.
National Book Trust ಪ್ರಕಟಿಸಿರುವ Women Scientists of India ಹಾಗೂ Indian Academy of Sciences ಪ್ರಕಟಿಸಿರುವ Leelavathi’s Daughters—ಭಾರತದ ಈ ಮಹಿಳಾ ವಿಜ್ಞಾನ ಪರಂಪರೆಯನ್ನು ದಾಖಲಿಸಿರುವ ಎರಡು ಅತ್ಯುತ್ತಮ ಪುಸ್ತಕಗಳು. ನಮ್ಮ ಈ ರಸಪ್ರಶ್ನೆಯ ಪ್ರಶ್ನೆಗಳು ಈ ಎರಡು ಪುಸ್ತಕಗಳನ್ನು ಆಧರಿಸಿವೆ. ಚಿತ್ರಕೃಪೆ : Wikimedia Commons