286

ಮಹಾಭಾರತದ ಮುಂದಿನ ಪೀಳಿಗೆ

ಹಲವಾರು ಪೀಳಿಗೆಗಳು ಮಹಾಭಾರತದ ಯುದ್ಧದಲ್ಲಿ ನಶಿಸಿ ಹೋದವು. ಬಹುಶಃ,ಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ಪ್ರಮುಖರ ಮಕ್ಕಳೂ ತೀರಿಕೊಂಡರು .ಮಹಾ ಧೈರ್ಯಶಾಲಿಗಳೂ ಹಾಗೂ ಶೂರರೂ ಆಗಿದ್ದ ಇವರುಗಳು ಪ್ರಾಯದಲ್ಲಿಯೇ ಪ್ರಾಣ ಕಳೆದುಕೊಂಡದ್ದು ದುರ್ದೈವವೇ ಸರಿ!.ಇವರ ಸಾಹಸ ಸಾಧನೆಗಳು, ಅವರನ್ನು ಹೆತ್ತ ಅಪ್ರತಿಮ ಬಲಶಾಲಿಗಳ ಸಾಹಸಗಳ ಮುಂದೆ ಮಂಕೆನಿಸುತ್ತದೆ. ಹೀಗಾಗಿ ಇವರುಗಳನ್ನು ನತದೃಷ್ಟರು ಎಂದು ಪರಿಗಣಿಸಿದರೂ ತಪ್ಪಾಗಲಾರದು!!

ಮಕ್ಕಳ ದಿನಾಚರಣೆಯಂದು, ಮಹಾಭಾರತದಲ್ಲಿ ಕಾಣಸಿಗುವ ಯುವ ಪೀಳಿಗೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಹಲವಾರು ಮೂಲಗಳಿಂದ ಮಾಹಿತಿಯನ್ನು ಹೆಕ್ಕಿ ತೆಗೆದಿದ್ದಾರೂ, ಮುಖ್ಯವಾಗಿ ಅರ್ಜುನ್ ಭಾರದ್ವಾಜ್ ಮತ್ತು ಹರಿ ರವಿಕುಮಾರ್ ಅವರ “ ದಿ ಎಸನ್ಷಿಯಲ್ ಮಹಾಭಾರತ” ಹೊತ್ತಿಗೆಯಿಂದ ಮಾಹಿತಿಯನ್ನು ಪಡೆಯಲಾಗಿದೆ. ಈ ಹೊತ್ತಿಗೆಯು ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಎ. ಆರ್. ಕೃಷ್ಣಶಾಸ್ತ್ರಿಗಳ ಅಪ್ರತಿಮ ಕೃತಿಯಾದ “ ವಚನ ಭಾರತ”ದ ಆಂಗ್ಲ ಭಾಷಾಂತರ.
ಐದು ಅದೃಷ್ಟಶಾಲಿ ವಿಜೇತರಿಗೆ ” ದಿ ಎಸನ್ಷಿಯಲ್ ಮಹಾಭಾರತ ” ಪುಸ್ತಕವನ್ನು ಬಹುಮಾನವಾಗಿ ಕೊಡಲಾಗುವುದು.

ದ್ರೌಪದಿಗೆ ಎಷ್ಟು ಮಕ್ಕಳಿದ್ದರು?

ಯುಧಿಷ್ಠಿರನ ನಂತರ ಯಾರು ಹಸ್ತಿನಾಪುರವನ್ನು ಆಳಿದರು?

ಮಹಾಭಾರತವನ್ನು ಮೊದಲನೇ ಬಾರಿಗೆ ಸಾರ್ವಜನಿಕವಾಗಿ ರಾಜ ಜನಮೇಜಯನ ಎದುರು ಪಠಿಸಲಾಗುತ್ತದೆ.ಜನಮೇಜಯನ ಪೂರ್ವಜನು ಯಾರು?

ಏಕಲವ್ಯನನ್ನು ಯಾರು ಸಂಹರಿಸಿದರು ಎಂದು ಮಹಾಭಾರತ ತಿಳಿಸುತ್ತದೆ?

ಮಹಾಭಾರತದ ಅನ್ವಯ ಶ್ರೀ ರಾಮನ ವಂಶದ ರಾಜನನ್ನು ಯಾರು ಕೊಂದರು?

ದುರ್ಯೋಧನನ ಮಗನ ಹೆಸರೇನು?

ದುರ್ಯೋಧನನ ಮಗಳನ್ನು ಮದುವೆಯಾದ ಕೃಷ್ಣನ ಮೊಂಡ ಮಗನ ಹೆಸರೇನು?

ಭೀಮನ ಮಗ ಓರ್ವ ರಾಕ್ಷಸನಾಗಿದ್ದು, ಕರ್ಣನ ಶಕ್ತ್ಯಾಯುಧವನ್ನು ತನ್ನ ಮೇಲೆಯೇ ಬಳುಸುವಂತೆ ಮಾಡುತ್ತಾನೆ. ಇವನ ಹೆಸರೇನು?

ಅರ್ಜುನನು ತನ್ನ ಮಗನಿಂದಲೇ ಸತ್ತು, ನಂತರ ಸಂಜೀವಿನಿ ಮಣಿಯಿಂದ ಮರು ಬದುಕುತ್ತಾನೆ. ಅರ್ಜುನನನ್ನೇ ಸಂಹರಿಸಿದ ಮಗನ ಹೆಸರೇನು?

ಕರ್ಣನ ಹಿರಿಯ ಮಗ ವೃಷಸೇನ ಕರ್ಣನೆದುರೇ ೧೭ನೇ ದಿನ ಸಾಯುತ್ತಾನೆ. ವೃಷಸೇನನನ್ನು ಯಾರು ಸಾಯಿಸಿದರು?

ದ್ವಾರಕಾ ನಗರದ ಪತನಾನಂತರ, ಕೃಷ್ಣನ ಮರಿ ಮೊಮ್ಮಗ ಯಾವ ರಾಜ್ಯದಲ್ಲಿ ರಾಜ್ಯಭಾರ ನಡೆಸಿದನು?

ದಂತಕಥೆಯ ಪ್ರಕಾರ ಬರ್ಬರೀಕ ಕೃಷ್ಣನ ಆಶೀರ್ವಾದದಿಂದ ಇಡೀ ಕುರುಕ್ಷೇತ್ರ ಯುದ್ಧವನ್ನು ಅವನ ಕತ್ತರಿಸಿದ ತಲೆಯಿಂದ ನೋಡಿದನು. ಬರ್ಬರೀಕ ಯಾರ ಮಗ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In