5

ನರಸಿಂಹ ಜಯಂತಿ ಪ್ರಶ್ನಾವಳಿ

ಇಂದು ನರಸಿಂಹ ಜಯಂತಿ, ಏಪ್ರಿಲ್ ೩೦ ನೆಯ ದಿನಾಂಕ. ಮಹಾವಿಷ್ಣುವು ನರನೂ ಸಿಂಹನೂ ಆಗಿ ಪ್ರಕಟಗೊಂಡದ್ದೇ ನರಸಿಂಹಾವತಾರ. ದಶಾವತಾರಗಳಲ್ಲಿ ವಿಷ್ಣುವು ಪ್ರಾಣಿಯಾಗಿ ಅವತಾರವೆತ್ತಿದ ನಾಲ್ಕು ಅವತಾರಗಳಲ್ಲಿ ಕಡೆಯದು ಇದು. ನಮ್ಮ ಸಂಪ್ರದಾಯದಲ್ಲಿ ಕೆಲವು ಪ್ರಾಣಿಗಳು ದೈವಗಳಾಗಿ, ದೇವತಾ ವಾಹನಗಳಾಗಿ ಪೂಜ್ಯವೆನಿಸಿವೆ. ನಮ್ಮ ದೇವತೆಗಳಾದ ಹನುಮಂತ ಹಾಗೂ ಗಣೇಶರು ಪ್ರಾಣಿಗಳ ರೂಪದಲ್ಲಿರುವುದು ಇದಕ್ಕೆ ಸಾಕ್ಷಿ. ಈ ಪ್ರಶ್ನೋತ್ತರದಲ್ಲಿ ಹಿಂದೂ ಧರ್ಮದಲ್ಲಿನ ೧೨ ಪೂಜ್ಯ ಪ್ರಾಣಿಗಳು ಒಳಗೊಂಡಿವೆ. ಈ ಪ್ರಶ್ನೋತ್ತರಕ್ಕೆ ಮೂಲ ನಂದಿತಾ ಕೃಷ್ಣ ಅವರ “Sacred Animals of India” ಎಂಬ ಪುಸ್ತಕ.

೧. ಪ್ರಚಲಿತವಿರುವ ‘ನೋವಾ ಹಾಗೂ ಮಹಾ ಪ್ರಳಯ’ದ ಕಥೆಯು ವಿಷ್ಣುವಿನ ಯಾವ ಅವತಾರಕ್ಕೆ ಸಂವಾದಿಯಾಗಿದೆ?

೨. ವಿಷ್ಣುವು ಕೂಮಾ೯ವತಾರವನ್ನು ಧರಿಸಲು ಕಾರಣವಾದ ಘಟನೆ ಯಾವುದು?

೩, ವಿಷ್ಣುವು ವರಾಹ ಹಾಗೂ ನರಸಿಂಹಾವತಾರಗಳಲ್ಲಿ, ಜಯ-ವಿಜಯರ ಅವತಾರಗಳಾಗಿದ್ದ, ದೈತ್ಯ ಸಹೋದರರಾದ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪುವನ್ನು ಸಂಹರಿಸಿದನು. ಜಯ-ವಿಜಯರು ಯಾರು?

೪. ದಾನವರಿಂದ ವೇದಗಳನ್ನು ಕಾಪಾಡಿದ, ಜ್ಞಾನದ ಅಧಿದೈವನಾದ ಹಯಗ್ರೀವನ ದೇಹದ ರುಂಡಭಾಗವು ಮಾನವದೇಹದಂತಿದ್ದರೂ ಮುಂಡವು ಯಾವ ಪ್ರಾಣಿಯಂತಿದೆ?

೫. ಶಿವನಿಂದ ದಕ್ಷಬ್ರಹ್ಮನ ಶಿರಚ್ಛೇದನವಾದ ಬಳಿಕ ಯಾವ ಪ್ರಾಣಿಯ ತಲೆಯನ್ನಿರಿಸಿ ಅವನನ್ನು ಪುನರುಜ್ಜೀವಿಸಲಾಯಿತು?

೬. ಶಿವನ ಅಂಗರಕ್ಷಕ ನಂದಿ. ‘ನಂದಿ’ ಪದದ ಅಥ೯ವೇನು?

೭. ರಾಮಾಯಣದಲ್ಲಿ ಆದಿಶೇಷನ ಅವತಾರವಾಗಿ ಜನಿಸಿದವರು ಯಾರು?

೮. ಸನಾತನ ಧಮ೯ದಲ್ಲಿ ಕಾಗೆಯು ಯಾವುದರ ಸಂಕ್ಲೇತ?

೯. ಸಮುದ್ರ ಮಂಥನದ ಸಮಯದಲ್ಲಿ ಹಲವು ದಿವ್ಯರೂಪಗಳು ಹೊರಹೊಮ್ಮಿದುವು.ಅವುಗಳಲ್ಲಿ ಸವ೯ ಅಭೀಷ್ಟಗಳನ್ನೂ ಪೂರೈಸುವ ಗೋವಿನ ಹೆಸರೇನು?

೧೦.ಶಿವನು ಶಮನಗೊಳಿಸುವ ಮನದ ಚಾಂಚಲ್ಯವನ್ನು ಸಂಕೇತಿಸುವ ಯಾವ ಪ್ರಾಣಿಯನ್ನು ಕೈಯ್ಯಲ್ಲಿ ಹಿಡಿದಿರುವನು?

೧೧. ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಲು ಗರುಡನು, ಇಂದ್ರನೂ ಸೇರಿದಂತೆ ಸವ೯ ದೇವತೆಗಳೊಡನೆ ಹೋರಾಡಿ ಅಮೃತವನ್ನು ವಶಪಡಿಸಿಕೊಳ್ಳುತ್ತಾನೆ. ಅಮೃತದ ಮೂಲ ಯಾವುದು?

೧೨. ಯುಧಿಷ್ಠಿರನನ್ನು ಸ್ವಗಾ೯ರೋಹಣ ಸಮಯದಲ್ಲಿ ಹಿಂಬಾಲಿಸಿದ ಪ್ರಾಣಿ ಯಾವುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In