174

ಭಾರತೀಯ ಹೊಸವರ್ಷದ ಪ್ರಶ್ನಾವಳಿ

ಇಂದು ಭಾರತೀಯ ನವವರ್ಷ. ಚಂದ್ರಸೌರ ಪದ್ಧತಿಗನುಗುಣವಾಗಿ ಈ ಹಬ್ಬಕ್ಕೆ ಯುಗಾದಿ, ಗುಡಿಪಡ್ವಾ ಇತ್ಯಾದಿ ವೈವಿಧ್ಯಮಯವಾದ ಆಚರಣೆಗಳಿವೆ. ಸೌರಮಾನ ನವವರ್ಷಾಚರಣೆಯಾಗಿ ಬೈಸಾಖಿ ಹಾಗೂ ಅದರ ರೂಪಾಂತರಗಳನ್ನು ಕಾಣಬಹುದು.ಇವು ವಸಂತಾಗಮನದ ಕಾಲವಷ್ಟೇ ಅಲ್ಲದೆ ಖಗೋಲ ಘಟನಾವಳಿಗಳು ಸಂಭವಿಸುವ ಕಾಲವೂ ಹೌದು. ನಮ್ಮ ಪುರಾಣಗಳಲ್ಲಿ ಕಥಾನಕಗಳ ರೂಪದಲ್ಲಿ ಖಗೋಳಶಾಸ್ತ್ರಕ್ಕೆ ಸಂಬಂಧಿತವಾದ ಅಪಾರ ಜ್ಞಾನ ಸಂಪತ್ತಿದೆ. ಈ ಪ್ರಶ್ನಾವಳಿಯಲ್ಲಿ ನಾವು ಅಂತಹ 12 ಕಥೆಗಳ ಬಗ್ಗೆ ತಿಳಿದುಕೊಳ್ಳೋಣ. ಈ ಪ್ರಶ್ನಾವಳಿಗೆ ಶ್ರೀ ರಾಜ್ ವೇದಮ್ ಅವರ ಉಪನ್ಯಾಸಗಳನ್ನು ಮೂಲ ಸ್ರೋತವಾಗಿ ಬಳಸಲಾಗಿದೆ.

1. ರಾತ್ರಿಯ ಆಗಸದಲ್ಲಿನ 27 ಭಾಗಗಳು ಚಂದ್ರಮನ ಪತ್ನಿಯರನ್ನು ಸಂಕೇತಿಸುತ್ತವೆ. ಆ ಭಾಗಗಳನ್ನು ಏನೆಂದು ಕರೆಯುತ್ತಾರೆ?

2. ಚಂದ್ರನಿಗಿದ್ದ 27 ಪತ್ನಿಯರ ಪೈಕಿ ರೋಹಿಣಿಯು ಅವನ ಅಚ್ಚುಮೆಚ್ಚಿನವಳು. ಇದು ಯಾವ ಖಗೋಳೀಯ ವಿದ್ಯಮಾನವನ್ನು ಸೂಚಿಸುತ್ತದೆ?

3.ದಕ್ಷನು ಚಂದ್ರನಿಗೆ ಮರಣವಾಗಲೆಂದು ಶಪಿಸಿದನು. ಶಿವನು ಚಂದ್ರನಿಗೆ ಒದಗಿದ ಶಾಪವನ್ನು ತಡೆಯಲಾಗದಿದ್ದರೂ ತಾಪವನ್ನು ಕ್ಷೀಣಿಸಿದನು. ಈ ವೃತ್ತಾಂತವು ಚಂದ್ರನ ಯಾವ ಲಕ್ಷಣವನ್ನು ವಿವರಿಸುತ್ತದೆ?

4. ಸಪ್ತರ್ಷಿಗಳ(ಉರ್ಸಾ ಮೇಜರ್) ಪತ್ನಿಯರಲ್ಲಿ ಆರು ಜನರು ತಂತಮ್ಮ ಪತಿಗಳನ್ನು ತ್ಯಜಿಸಿ ಬೇರೆ ನಕ್ಷತ್ರಮಂಡಲವನ್ನು ರೂಪಿಸಿದರು. ಯಾವುದೀ ನಕ್ಷತ್ರಮಂಡಲ?

5. ಹಿಂದೂ ವಿವಾಹಗಳಲ್ಲಿ ದಾಂಪತ್ಯ ಸೌಖ್ಯದ ಸಂಕೇತವಾಗಿ ಯಾವ ನಕ್ಷತ್ರವನ್ನು ವಧೂವರರಿಗೆ ತೋರಿಸಲಾಗುತ್ತದೆ?

6. ದೃಢವಾದದ್ದು ಅಥವಾ ಸ್ಥಿರವಾದದ್ದು ಎಂದು ಈ ನಕ್ಷತ್ರದ ಹೆಸರಿನ ಅರ್ಥ. ಯಾವ ನಕ್ಷತ್ರವಿದು?

7.ಹಿಮಾಲಯಕ್ಕೆ ಸ್ಪರ್ಧೆಯೊಡ್ಡಿ ಬೆಳೆಯುತ್ತಿದ್ದ ವಿಂಧ್ಯ ಪರ್ವತದ ಬೆಳವಣಿಗೆಯನ್ನು ತಡೆದ ಮಹರ್ಷಿ ಯಾರು?

8. ನವಗ್ರಹಗಳ ಪೈಕಿ ಇಬ್ಬರು ಕಣ್ಣಿಗೆ ಗೋಚರಿಸರು.ಸೂರ್ಯ ಚಂದ್ರ ಗ್ರಹಣಗಳಿಗೂ ಕಾರಣರು. ಅವರಿಬ್ಬರು ಯಾರು?

9. ಶನಿ ಪದದ ಒಂದು ಅರ್ಥ ‘ಅತ್ಯಂತ ನಿಧಾನಗತಿಯಲ್ಲಿ ಚಲಿಸುವವನು’ ಎಂದು. ಈ ಅರ್ಥ ಏಕೆ ಅನ್ವಯವಾಗುತ್ತದೆ?

10. ಸೂರ್ಯನ ಸುತ್ತ ಯಾವ ಗ್ರಹದ ಚಲನೆಯನ್ನು ಅನುಸರಿಸಿ 12 ವರ್ಷಗಳಿಗೊಮ್ಮೆ ಕುಂಭ ಮೇಳವು ನಡೆಯುತ್ತದೆ?

11. ಅಸುರರ ಗುರು ಶುಕ್ರಾಚಾರ್ಯರು ಯಾವ ಗುಣದಿಂದಾಗಿ ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿದ್ದಾರೆ?

12. ಭಗವದ್ಗೀತೆಯಲ್ಲಿ ಕೃಷ್ಣನ ಮಾತುಗಳ ಪ್ರಕಾರ, ಅವನು ಯಾವ ತಿಂಗಳು / ಮಾಸದಲ್ಲಿ ಸಾಕಾರಗೊಂಡಿದ್ದಾನೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In