ಅದಿತಿ ಎಂದರೆ ಅವ್ಯಾಪ್ತವಾದುದು.ಅಸೀಮವಾದುದು.ಋಗ್ವೇದದಲ್ಲಿ ಈಕೆ ಅವ್ಯಾಹತ ಸೃಷ್ಟಿಕಾರ್ಯದ ಸಂಕೇತವಾಗಿ ರಾರಾಜಿಸಿದ್ದಾಳೆ.ವೇದಮಂತ್ರಗಳಲ್ಲಿ ಜನರು ಈಕೆಯನ್ನು ಪಾಪನಾಶಿನಿಯೆಂದು ಮತ್ತು ಆರೋಗ್ಯದಾಯಿನಿಯೆಂದೂ ಪ್ರಾರ್ಥಿಸಿರುತ್ತಾರೆ. ಪುರಾಣಗಳಲ್ಲಿ ಈಕೆಯನ್ನು ಮಾತೃದೇವತೆಯಾಗಿ ವರ್ಣಿಸಲಾಗಿದೆ.
ಅದಿತಿ ದೇವಿಯು ದಕ್ಷ ಪ್ರಜಾಪತಿಯ ಮಗಳು ಮತ್ತು ಕಶ್ಯಪ ಮಹರ್ಷಿಯ ಹೆಂಡತಿ.ಈಕೆಯೇ ೩೩ ವೈದಿಕ ದೇವತೆಗಳಿಗೆ ಜನ್ಮವಿತ್ತವಳು ( ೩೩ ಕೋಟಿ ದೇವತೆಗಳು ಎಂಬ ಜನೋಕ್ತಿ ತಪ್ಪು) ಈ ೩೩ ದೇವತೆಗಳೇ- ದ್ವಾದಶ ಆದಿತ್ಯರು, ಏಕಾದಶ ರುದ್ರರು, ಅಷ್ಟ ವಸುಗಳು, ಅಗ್ನಿ ಮತ್ತು ಇಂದ್ರ. ಅದಲ್ಲದೆ ಅದಿತಿ ದೇವಿಯು ವಿಷ್ಣು ಸ್ವರೂಪನಾದ ವಾಮನನಿಗೂ ತಾಯಿ. ಅದಿತಿಯ ಸೋದರಿಯಾದ ದಿತಿಯು ಶಕ್ತಿವಂತ ಮಕ್ಕಳಿಗಾಗಿ ಪ್ರಾರ್ಥಿಸಿ ಗರ್ಭವತಿಯಾಗುತ್ತಾಳೆ. ಇದರಿಂದ ಅದಿತಿಗೆ ಸ್ವಲ್ಪ ಹೊಟ್ಟೆ ಕಿಚ್ಚು ಉಂಟಾಗುತ್ತದೆ. ದೇವೇಂದ್ರನು ಆ ಭ್ರೂಣವನ್ನು ಯಾರಿಗೂ ತಿಳಿಯದಂತೆ ೪೯ ಭಾಗಗಳಾಗಿ ಕತ್ತರಿಸುತ್ತಾನೆ. ಈ ಭಾಗಗಳೇ ಮುಂದೆ ಮರುತದೇವತೆಗಳಾಗುತ್ತವೆ. ಮರುತರು ಗುಡುಗು, ಮಳೆ, ಗಾಳಿ ಈ ರೀತಿಯ ಪ್ರಾಕೃತಿಕ ನಡೆವಳಿಕೆಗಳಿಗೆ ಅಧಿ ದೇವತೆಗಳು.
ಇದರಿಂದ ಬೇಸರಗೊಂಡ ದಿತಿಯು, ಅದಿತಿಯು ಮಕ್ಕಳಿಗಾಗಿ ಪರಿತಪಿಸುವ ತಾಯಿಯಾಗಿ ಹುಟ್ಟುವಂತೆ ಶಪಿಸುತ್ತಾಳೆ. ಈ ಶಾಪದ ಪ್ರಭಾವದಿಂದ ಕೃಷ್ಣನ ತಾಯಿಯಾದ ದೇವಕಿಯಾಗಿ ಅದಿತಿ ಹುಟ್ಟುತ್ತಾಳೆ.ತನ್ನ ಮೊದಲ ಏಳು ಮಕ್ಕಳನ್ನು ಅವಳ ಸೋದರನಾದ ಕಂಸನು ಕ್ರೂರವಾಗಿ ಕೊಂದದನ್ನು ನೋಡಿ ತುಂಬಾ ಬಳಲುತ್ತಾಳೆ.