154

ರಾಮನವಮಿ ರಸಪ್ರಶ್ನೆ

ಆದಿ ಕವಿ ವಾಲ್ಮೀಕಿಗಳ ರಾಮಾಯಣ ಮಹಾಕಾವ್ಯವು ನೃತ್ಯ, ನಾಟಕ, ಶಿಕ್ಷಣ ಇನ್ನಿತರ ಉದ್ದೇಶಗಳಿಗಾಗಿ ಪುನಃ ಪುನಃ ಹೇಳಲ್ಪಟ್ಟಿರುವ ಹಾಗೂ ವಿನೂತನವಾಗಿ ರಚನೆಯಾಗಿರುವ, ಎಲ್ಲರಿಗೂ ಪ್ರೀತಿ ಪಾತ್ರವಾದ ಕಥಾನಕ. ಈ ದಿನ, ರಾಮನವಮಿಯಂದು ಸಂಸ್ಕೃತ ಹಾಗೂ ಪ್ರಾಕೃತ ಕೃತಿಗಳಲ್ಲಿ ರಚಿತವಾದ ರಾಮಕಥಾನಕಗಳ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ನಾವು ಶ್ರೇಷ್ಠ ವಿದ್ವಾಂಸರುಗಳಾದ ಡಾ. ವಿ ರಾಘವನ್ ಮತ್ತು ಡಾ. ಕ್ಯಾಮೆಲ್ ಬಲ್ಕ್ ಅವರ ಕೃತಿಗಳನ್ನು ಆಕರ ಗ್ರಂಥಗಳಾಗಿ ಉಪಯೋಗಿಸಿದ್ದೇವೆ.

The pictures in this quiz are from Janakpur Nepal – Temples and Mithila style wall art.

1. ವಾಲ್ಮೀಕಿ ರಾಮಾಯಣವು ಮೊದಲ ಬಾರಿಗೆ ರಾಮೋಪಾಖ್ಯಾನವೆಂದು ಮತ್ತೆ ಎಲ್ಲಿ ಹೇಳಲ್ಪಟ್ಟಿದೆ?

2.ಕಾಳಿದಾಸನ ಪ್ರಕಾರ ವಾಲ್ಮೀಕಿಗಳ ಮಹಾಕಾವ್ಯದಲ್ಲಿ ಯಾವ ರಸವು ಪ್ರಧಾನವಾಗಿ ಮೆರೆದಿದೆ?

3. ಕಾಳಿದಾಸನಿಗೂ ಮೊದಲು ಈ ಶ್ರೇಷ್ಠ ನಾಟಕಕಾರನು ರಾಮಕಥೆಯನ್ನು ನಾಟಕದ ರೂಪದಲ್ಲಿ ಪ್ರಸ್ತುತಪಡಿಸಿದ್ದನು. ಇವನ ಹೆಸರೇನು?

4. ಸಾ.ಶ. 5ನೆಯ ಶತಮಾನದಲ್ಲಿ ದಕ್ಷಿಣ ಭಾಗದ ರಾಜನಾಗಿದ್ದ ಪ್ರವರಸೇನನು ಯಾವ ಪ್ರಾಕೃತ ಭಾಷೆಯಲ್ಲಿ ರಾಮಕಥೆಯನ್ನು ಬರೆದನು?

5.ಸಾ.ಶ. 5 ನೆಯ ಶತಮಾನ(ಆಸುಪಾಸಿನ ಕಾಲ)ದಲ್ಲಿ ಕುಮಾರದಾಸನು ‘ಜಾನಕೀಹರಣ’ವೆಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದನು. ಇದರ ಶೀರ್ಷಿಕೆಯು ಇವನ ಜನ್ಮಸ್ಥಳದ ಸುಳಿವನ್ನು ನೀಡುತ್ತದೆ. ಆ ಸ್ಥಳದ ಹೆಸರೇನು?

6. ‘ಶಾಸ್ತ್ರಕಾವ್ಯ’ದಲ್ಲಿ ರಾಮಕಥೆಯನ್ನು ಉಪಯೋಗಿಸಿಕೊಂಡು ಯಾವ ವಿಚಾರಗಳನ್ನು ವಿವರಿಸಲಾಗಿದೆ?

7. ಸಾ.ಶ.9ನೆಯ ಶತಮಾನದ ಆಸುಪಾಸಿನಲ್ಲಿ ರಚಿತವಾದ ಅಭಿನಂದನ ಕವಿಯ ‘ರಾಮಚರಿತೆ’ಯಲ್ಲಿ, ಲಕ್ಷ್ಮಣನ ತಾಯಿಯಾದ ಸುಮಿತ್ರೆಯು, ಪಾಲರು ಆಳುತ್ತಿದ್ದ ಈ ಪ್ರದೇಶದಿಂದ ಬಂದವಳಾಗಿದ್ದಾಳೆ. ಈ ಪ್ರದೇಶದ ಹೆಸರೇನು?

8. ಸಾ. ಶ.11ನೆಯ ಶತಮಾನದಲ್ಲಿ, ಮಾಳ್ವ ದೇಶದ ಪ್ರಸಿದ್ಧನೂ, ಪ್ರಬುದ್ಧನೂ ಆಗಿದ್ದ ಯಾವ ಮಹಾರಾಜನು ರಾಮಾಯಣ-ಚಂಪುವನ್ನು ರಚಿಸಿದನು?

9. ಮಹಾಮಾಹೇಶ್ವರ ಅಭಿನವಗುಪ್ತನ ಶಿಷ್ಯನಾಗಿದ್ದ ಕ್ಷೇಮೇಂದ್ರನು(ಸಾ.ಶ. 11ನೆಯ ಶತಮಾನ) ರಾಮಕಥೆಯನ್ನು ನಾಲ್ಕು ಬಾರಿ ಅನುಕಥನ ಮಾಡಿದನು. ಇವನು ಯಾವ ಪ್ರದೇಶದವನು?

10. ಮಹಾಕವಿ ಭವಭೂತಿಯು ತನ್ನ ‘ಉತ್ತರ ರಾಮಚರಿತ’ದಲ್ಲಿ ಮತ್ತು ಸೋಮದೇವನು ತನ್ನ ‘ಕಥಾಸರಿತ್ಸಾಗರ’ದಲ್ಲಿ ರಾಮಕಥೆಗೆ ಬೇರೆಯದೇ ಆದ ಅಂತ್ಯವನ್ನು ಕೊಟ್ಟಿದ್ದಾರೆ. ಅದು ಯಾವುದು?

11 ‘ಅಧ್ಯಾತ್ಮ ರಾಮಾಯಣ’ವು, ಸಾ.ಶ.13 -15 ಶತಮಾನಾವಧಿಯಲ್ಲಿನ ಅತ್ಯಂತ ಪ್ರಭಾವಶಾಲಿಯಾಗಿದ್ದ ರಾಮಕಥೆಯ ಆವೃತ್ತಿ. ಇದು ರಾಮಭಕ್ತಿಯನ್ನು ಯಾವ ಮುಖ್ಯ ದರ್ಶನದೊಂದಿಗೆ ಬೆಸೆಯುತ್ತದೆ?

12. 15ನೆಯ ಶತಮಾನದ ನಂತರ ಬಂದ ‘ಅದ್ಭುತ ರಾಮಾಯಣ’, ‘ಆನಂದ ರಾಮಾಯಣ’ ದಂತಹ ಕೃತಿಗಳು ಕೃಷ್ಣನ ಕಥೆಯ ಯಾವ ಅಂಶಗಳನ್ನು ಒಳಗೊಂಡಿವೆ?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In