8. ಸಾ. ಶ.11ನೆಯ ಶತಮಾನದಲ್ಲಿ, ಮಾಳ್ವ ದೇಶದ ಪ್ರಸಿದ್ಧನೂ, ಪ್ರಬುದ್ಧನೂ ಆಗಿದ್ದ ಯಾವ ಮಹಾರಾಜನು ರಾಮಾಯಣ-ಚಂಪುವನ್ನು ರಚಿಸಿದನು?
ಸಾಮಾನ್ಯವಾಗಿ ಭಾರತದ ಅರಸರು ಯೋಧರಲ್ಲದೆ ತತ್ತ್ವಜ್ಞಾನಿಗಳೂ ಆಗಿರುತ್ತಿದ್ದರು. ಸಾತವಾಹನರ ಹಾಲ ಮಹಾರಾಜ, ವಾಕಾಟಕರ ದೊರೆ ಪ್ರವರಸೇನ, ಕನೌಜದ ಶ್ರೀ ಹರ್ಷವರ್ಧನ ಚಕ್ರವರ್ತಿ, ರಾಷ್ಟ್ರಕೂಟರ ದೊರೆ ಅಮೋಘವರ್ಷ, ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ, ಗುರು ಗೋವಿಂದ ಸಿಂಗ್ ಮುಂತಾದವರು ಅನೇಕ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಕೃತಿಗಳ ಕರ್ತೃವಾದ ಭೋಜರಾಜನ ‘ರಾಮಾಯಣ ಚಂಪು’ವು ನಿಜಕ್ಕೂ ವಾಲ್ಮೀಕಿ ಕೃತಿಯ ಪುನಾರಚನೆಯೆನ್ನುವಂತಿದೆ. ಉದಾಹರಣೆಗೆ ಅಹಲ್ಯಾ ಘಟನೆಯನ್ನು ಮೂಲದಲ್ಲಿ ಗಮನಿಸಿದರೆ, ಗೌತಮರು ತಮ್ಮ ಹೆಂಡತಿಯು ಅದೃಶ್ಯಳಾಗುವಂತೆ ಶಾಪವಿತ್ತರು. ಭೋಜನ ರಾಮಾಯಣ ಚಂಪುವಿನಲ್ಲಿಯೂ ಹಾಗೇ ಇದೆ. ನಂತರದಲ್ಲಿ ಬಂದ ರಚನೆಗಳು ಅಹಲ್ಯೆಯು ಕಲ್ಲಾಗಿ ಪರಿವರ್ತನೆಯಾದಂತೆ ತೋರಿಸಿವೆ. ಪರಮಾರದೇವ ಭೋಜ ಮಹಾರಾಜನು ಸುಂದರಕಾಂಡದವರೆಗೆ ಮಾತ್ರ ರಚನೆ ಮಾಡಿದನು. ಉಳಿದ ಕಾಂಡಗಳನ್ನು ನಂತರದ ಕವಿಗಳು ಅವನದೇ ಶೈಲಿಯಲ್ಲಿ ರಚಿಸಿದರು.
Picture – Young Sita effortlessly lifts Shiv Danush, Mithila Wall Art, Janakpur