ರಾಮನು ಯುದ್ಧಕ್ಕೆ ಮುನ್ನ ರಾಮೇಶ್ವರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಪಿಸಿ ಪೂಜಿಸಿದನೆಂದೂ, ಮತ್ತೂ ಕೆಲವು ಜನಪ್ರಿಯ ಅವೃತ್ತಿಗಳಲ್ಲಿ, ಯದ್ಧವನ್ನು ಗೆದ್ದು ಮರಳುವಾಗ ಶಿವಲಿಂಗವನ್ನು ಪ್ರತಿಷ್ಠಾಪಪಿಸಿ ಸೀತೆಯೊಡನೆ ಅರ್ಚಿಸಿದನೆಂದೂ ಕೇಳಿರುವೆವು. ರಾಮನು ಸ್ವಲ್ಪ ಕಾಲ ರಾಮೇಶ್ವರದಲ್ಲಿ ಕಥೆಗಳಲ್ಲಿ ಇದೆ. ಇವು ವಾಲ್ಮೀಕಿ ರಾಮಾಯಣದ ಭಾಗಗಳಲ್ಲ. ಶ್ರೀ ರಾಮನ ಸೇನೆಯು ಸಮುದ್ರ ತೀರದಲ್ಲಿ ಬೀಡುಬಿಟ್ಟಿದ್ದಾಗ, ಅವನಲ್ಲಿ ಆಶ್ರಯವನ್ನು ಪಡೆದ ವಿಭೀಷಣನು, ರಾಮನಿಗೆ ಸಮುದ್ರ ರಾಜನ ಸಹಾಯವನ್ನು ಕೋರಲು ಸಲಹೆಯನ್ನಿತ್ತನು. ರಾಮನ ಪೂರ್ವಜನಾದ ಸಗರ ಮಹಾರಾಜನು ಸಾಗರ ನಿರ್ಮಾಣಕ್ಕೆ ಕಾರಣವಾದ್ದರಿಂದ, ಸಮುದ್ರನು ರಾಮಕಾರ್ಯದಲ್ಲಿ ನೆರವಾಗುವನು ಎಂದು ಇಂಗಿತವಾಗಿದ್ದಿತು. ಅನಂತವಾಗಿ ಹರಡಿಕೊಂಡಿರುವುದೇ ಧರ್ಮವಾದ ಸಮುದ್ರರಾಜನಿಗೆ, ರಾಮನ ಕಾರ್ಯಕ್ಕೆ ಒದಗಲಾಗಲಿಲ್ಲ. ಅದು ತನ್ನ ಧರ್ಮವನ್ನು ಮೀರಿದ್ದು ಎಂದು ತನ್ನ ಅಸಹಾಯಕತೆಯನ್ನು ನಿವೇದಿಸಿಕೊಂಡನು. ಬದಲಾಗಿ, ವಿಶ್ವಕರ್ಮನ ಅಂಶದಿಂದ ಉದಿಸಿದ ನಳನು ಸೇತುವೆಯನ್ನು ಕಟ್ಟುವಲ್ಲಿ ಸಫಲನಾಗುವನೆಂದೂ, ಆತನ ಸಹಾಯವನ್ನು ಪಡೆದುಕೊಳ್ಳಬೇಕೆಂದೂ ರಾಮನಿಗೆ ತಿಳಿಸಿದನು. ನಂತರ, ನಳನು ಸೇತು ಬಂಧನ ಕಾರ್ಯವನ್ನು ನಿರ್ವಹಿಸುವಲ್ಲಿ ಯಶಸ್ವಿಯಾದನು. ಈ ಸಂಗತಿಗಳು ವಾಲ್ಮೀಕಿ ರಾಮಾಯಣದಲ್ಲಿವೆ. ನಮಗೆಲ್ಲರಿಗೂ ಪ್ರಿಯವಾದ, ಅಳಿಲು ಸೇವೆಯೆಂದೇ ನುಡಿಗಟ್ಟಾಗಿರುವ, ಅಳಿಲಿನ ಅಪ್ರತಿಮ ಸೇವೆಯ ವೃತ್ತಾಂತ ಹಾಗೂ ತೇಲುವ ರಾಮನಾಮ ಬಂಡೆಗಳು ವಾಲ್ಮೀಕಿ ರಾಮಾಯಣದಲ್ಲಿ ಪ್ರಕ್ಷಿಪ್ತ. ಶ್ರೀ ರಾಮನ ಶಿವಭಕ್ತಿ ಕುರಿತಾದ ಕಥೆಗಳು, ಸ್ಥಳಪುರಾಣಗಳು ಹಾಗೂ ಮೌಖಿಕ ಕಥಾನಕಗಳೆಲ್ಲವೂ ನಂತರದ ಬೆಳವಣಿಗೆಗಳು. ಇವು ನಮ್ಮ ಪರಂಪರೆಯ ಮೇಲೆ ಸತ್ಪರಿಣಾಮವನ್ನು ಬೀರಿವೆ. ಅವತಾರ ಪುರುಷರಾದರೂ ಸರ್ವ ದೇವತೆಗಳ ಪಾರಮ್ಯವನ್ನು ಒಪ್ಪಿ,ಆರಾಧನೆಯನ್ನು ಕೈಗೊಳ್ಳಬೇಕೆಂಬ ಅಂಶವನ್ನು ಸಾರುತ್ತವೆ.