ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಸಾಧನೆಗಳು ಯುಗಾನುಸಾರ ಬದಲಾಗುತ್ತವೆ ಎಂಬ ಮಹತ್ವದ ತತ್ತ್ವವನ್ನು ಪ್ರತಿಪಾದಿಸಿದ್ದಾರೆ. ಒಂದು ಯುಗದಲ್ಲಿ ತಪಸ್ಸು ,ಇನ್ನೊಂದು ಯುಗದಲ್ಲಿ ಭಕ್ತಿ , ಮತ್ತೊಂದು ಯುಗದಲ್ಲಿ ತತ್ತ್ವಜ್ಞಾನ ಮತ್ತು ಸಂನ್ಯಾಸಗಳು ಸಾಧನವಾಗಿದ್ದುವು. ಆಧುನಿಕ ಯುಗಕ್ಕೆ ಕರ್ಮಯೋಗ ಅಥವಾ ನಿಸ್ವಾರ್ಥ ಸೇವೆಯೇ ಅತ್ಯಂತ ಸೂಕ್ತವಾದ ಆಧ್ಯಾತ್ಮಿಕ ಮಾರ್ಗವೆಂದು ಅವರು ಸೂಚಿಸಿದರು. ಭಾರತೀಯ ಸಮಾಜವು ತಮಸ್ಸು ಮತ್ತು ಜಡತೆಯ ಆಧೀನದಲ್ಲಿದ್ದು ನಿಷ್ಕ್ರಿಯವಾಗಿದ್ದುದನ್ನು ಮನಗಂಡಿದ್ದ ಅವರು, ಕ್ರಿಯಾಶೀಲತೆಯನ್ನು ಜಾಗೃತಗೊಳಿಸಲು ಕರ್ಮಯೋಗವನ್ನು ಭಾರತೀಯರಿಗೆ ವಿಶೇಷವಾಗಿ ಉಪದೇಶಿಸಿದರು. ಅವರ ಪ್ರಸಿದ್ಧ ಕರೆ “ಏಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!” (ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ) ಎಂಬುದು ಕ್ರಿಯಾಶೀಲ ಜೀವನದ ಸಾರವಾಗಿದೆ.
ವೈಯಕ್ತಿಕವಾಗಿ ಮಹಾತಪಸ್ವಿ, ತಾಯಿ ಕಾಳಿಯ ಉತ್ಕಟ ಭಕ್ತ, ವೇದಾಂತಿ, ಕರ್ಮಯೋಗಿ ಎಲ್ಲವೂ ಆಗಿದ್ದರು ಸ್ವಾಮಿ ವಿವೇಕಾನಂದರು.
ಚಿತ್ರ ಸಹಕಾರ: ವಿಕಿಮೀಡಿಯಾ; ಚಿಕಾಗೋ 1893 ರಲ್ಲಿ ಸ್ವಾಮೀಜಿಗಳು ಮರೆದ ಸಾಲುಗಳು “ಅನಂತ, ಶುದ್ಧ, ಪವಿತ್ರ, ನಿರ್ವಿಕಲ್ಪ, ಗುಣಾತೀತನಾದ ಭಗವಂತನಿಗೆ ತಲೆಬಾಗುತ್ತೇನೆ.