ಭಗೀರಥನ ಅಪ್ರತಿಮ ತಪಸ್ಸಿಗೆ ಮಣಿದು ಶಿವನು ಗಂಗಾಧರನಾದನು. ಭಗೀರಥನ ಪೂರ್ವಿಕರು, ದೇವೇಂದ್ರನು ಕದ್ದೊಯ್ದ ತಮ್ಮ ಯಾಗದ ಕುದುರೆಯನ್ನು ಕಪಿಲ ಮಹರ್ಷಿಯು ಕದ್ದನೆಂದು ತಿಳಿದು ಅವನ ಕೋಪಕ್ಕೆ ತುತ್ತಾಗಿದ್ದರು. ಕಪಿಲ ಮಹರ್ಷಿಯ ಕ್ರೋಧಕ್ಕೆ ಸಿಲುಕಿ ಭಸ್ಮೀಭೂತರಾದ ಅವರಿಗೆ ಮುಕ್ತಿಯನ್ನು ದೊರಕಿಸಲು ಭಗೀರಥನು ತನ್ನ ಉಗ್ರ ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡು ದೇವಗಂಗೆಯನ್ನು ಇಳೆಗೆ ತಂದನು. ದೇವಗಂಗೆಯ ಅವತರಣದ ರಭಸಕ್ಕೆ ಭೂಮಿಯು ತತ್ತರಿಸುವುದೆಂದು ಅರಿತ ಅವನು ಶಿವನನ್ನೂ ಒಲಿಸಿಕೊಂಡನು. ಭೀಮಾಕಾರನಾಗಿ ದೃಢವಾಗಿ ನಿಂತ ಶಿವನು, ಗಂಗೆಯನ್ನು ತನ್ನ ಜಟಾಜೂಟದಲ್ಲಿ ಧರಿಸಿ, ಬಂಧಿಸಿದನು. ಭೋರ್ಗರೆಯುತ್ತಿದ್ದ ಗಂಗೆಯು ವೇಗವನ್ನು ತಗ್ಗಿಸಿಕೊಂಡು ಭೂಮಿಯಲ್ಲಿ ಹರಿದಳು. ಭಗೀರಥನ ಕಷ್ಟಗಳು ಇಷ್ಟಕ್ಕೇ ನಿಲ್ಲದೇ, ಗಂಗೆಯು ಹರಿಯುವಾಗ ಮಹರ್ಷಿ ಜಹ್ನುವಿನ ಆಶ್ರಮವು ಪ್ರವಾಹಕ್ಕೆ ಸಿಲುಕಿ ನಾಶವಾಯಿತು. ಸಿಟ್ಟುಗೊಂಡ ಮಹರ್ಷಿಯು ಗಂಗೆಯನ್ನೇ ಆಪೋಶನ ತೆಗೆದುಕೊಂಡು ಬಿಟ್ಟನು. ಪುನಃ ಭಗೀರಥನು ಅವಿರತವಾಗಿ ಪ್ರಾರ್ಥಿಸಿದ ನಂತರ ಸುಪ್ರೀತನಾದ ಜಹ್ನು ಮಹರ್ಷಿಯು ಗಂಗೆಯನ್ನು ತನ್ನ ಕಿವಿಯಿಂದ ಬಿಡುಗಡೆ ಮಾಡಿದನು. ಕಡೆಗೂ ಗಂಗೆಯು ಭಗೀರಥನ ಪೂರ್ವಜರ ಭಸ್ಮದ ಮೇಲೆ ಹರಿದು, ಅವರು ಮುಕ್ತಿಯನ್ನು ಹೊಂದಿದರು . ಭಗೀರಥನು ಮಾನವ ಪ್ರಯತ್ನ, ದಾರ್ಢ್ಯ, ಆತ್ಮಸ್ಥೈರ್ಯ, ಸಹನಶೀಲತೆ, ಉದ್ದೇಶ, ದೂರದರ್ಶಿತ್ವಕ್ಕೆ ಸ್ಫೂರ್ತಿಯಾಗಿ, ಆದರ್ಶವಾಗಿ ನಿಲ್ಲುತ್ತಾನೆ. ಶುದ್ಧಚಾರಿತ್ರ್ಯದ ನಾಯಕನಾಗಿ ಎಲ್ಲರ ಮನದಲ್ಲಿ ಅಚ್ಚೊತ್ತಿದ್ದಾನೆ.
ಇಲ್ಲಿ ಕಾಣುವ ಚಿತ್ರವು ಮುಂಬೈ ಹತ್ತಿರದ ಎಲಿಫೆಂಟಾ ಗುಹೆಗಳದ್ದು.
ಛಾಯಾಚಿತ್ರ ಕೃಪೆ: ರಂಗನ್ ದತ್ತ