18 ನೇ ಶತಮಾನದ ಅಂತ್ಯದಲ್ಲಿ ಮುಂಬೈ ಬಗೆಗೆ ಬ್ರಿಟಿಷರ ಆಸಕ್ತಿ ಹೆಚ್ಚಿತು. 1768 ರಲ್ಲಿ ಬ್ರಿಟಿಷರು ಬಾಂಬೆ ಸಿಪಾಯಿಗಳ ಎರಡನೇ ತುಕಡಿಯನ್ನು ರಚಿಸಿದರು. ಮರಾಠಾ ಸೈನ್ಯದ ಚುರುಕುತನದಿಂದ ಪ್ರೇರಿತರಾಗಿದ್ದ ಬ್ರಿಟಿಷರು ಶೀಘ್ರದಲ್ಲೇ ಮತ್ತೊಂದು ತುಕಡಿಯನ್ನು ಸೇರಿಸಿದರು.ಜಂಗಿ ಪಲ್ಟನ್ ಮತ್ತು ಕಾಳಿ ಪಂಚ್ವಿನ್ ಎಂದೂ ಕರೆಯಲ್ಪಡುತ್ತಿದ್ದ ಈ ತುಕಡಿಗಳು, ಶ್ರೀರಂಗಪಟ್ಟಣ, ಕಣ್ಣೂರು, ಸೂರತ್ ಮತ್ತು ಬಲೂಚಿಸ್ತಾನದ ಪ್ರಸಿದ್ಧ ಯುದ್ಧಗಳಲ್ಲಿ ಪಾಲ್ಗೊಂಡವು. ಇವು ಮರಾಠಾ ಲೈಟ್ ಇನ್ಫ್ಯಾಂಟ್ರಿ( ಲಘು ಪದಾತಿ)ದಳದ ರಚನೆಗೆ ನಾಂದಿ ಹಾಡಿದವು.
ತಮ್ಮ ಸೈನ್ಯದ ಫಿರಂಗಿದಳದ ಕೊರತೆಯನ್ನು ಶಿವಾಜಿ ಮಹಾರಾಜರು ಒಂದು ಅವಕಾಶವಾಗಿ ಪರಿವರ್ತಿಸಿದರು. ಹಗುರವಾದ ಅಶ್ವಸೈನ್ಯವನ್ನು ಬಳಸಿ, ಬಲವಾದ ಆದರೆ ನಿಧಾನ ಗತಿಯಲ್ಲಿ ಚಲಿಸುತ್ತಿದ್ದ ಮೊಘಲ್ ಸೈನ್ಯದ ಮೇಲೆ ಮೇಲ್ಗೈ ಸಾಧಿಸಿದರು. ಹಗುರವಾಗಿ ಶಸ್ತ್ರಸಜ್ಜಿತವಾಗಿದ್ದ ಮರಾಠಾ ಸೈನ್ಯವನ್ನು ಅತ್ಯಲ್ಪ ಅಹಾರದಿಂದಲೂ ನಿಭಾಯಿಸಬಲ್ಲುದಾಗಿತ್ತು.ಆದ್ದರಿಂದ ಅದು ಹೆಚ್ಚು ಚಲನಶೀಲವಾಗಿತ್ತು .
1664 ರಲ್ಲಿನ ಇಂಗ್ಲಿಷರ ಪತ್ರವೊಂದು ” ಶಿವಾಜಿಯು ಒಂದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿದ್ದು, ಗಾಳಿಯ ದೇಹದೊಂದಿಗೆ ರೆಕ್ಕೆಗಳನ್ನೂ ಹೊಂದಿರುವಂತೆ ಭಾಸವಾಗುತ್ತದೆ” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಎರಡನೇ ಮಹಾಯುದ್ಧದ ನಂತರ, ಮರಾಠಾ ಲೈಟ್ ಇನ್ಫಾಂಟ್ರಿ ಸೈನ್ಯದಳವು, “ಬೋಲಾ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ” ಎಂಬ ಯುದ್ಧ ಘೋಷಣೆಯನ್ನು ಬಳಸುತ್ತದೆ.
ಈ ಚಿತ್ರವು ಆಲ್ಫ್ರೆಡ್ ಕ್ರೌಡಿ ಲೊವೆಟ್ ಅವರ ಮರಾಠಾ ಲೈಟ್ ಇನ್ಫಾಂಟ್ರಿಯ ವರ್ಣಚಿತ್ರವಾಗಿದೆ.
ಮೂಲಗಳು: Valour Enshrined, ಎಂ.ಜಿ. ಅಭಯಂಕರ್ ಮತ್ತು Shivaji, His life and times, ಗಜಾನನ್ ಭಾಸ್ಕರ್ ಮೆಹೆಂದಳೆ