ಮೂಲತಃ ಅಮೀರ್ ಖುಸ್ರು ವಿರಚಿತ ಎಂದು ಪರಿಗಣಿಸಲಾಗಿರುವ ದಮಾ ದಮ್ ಮಸ್ತ್ ಕಲಂದರ್ ಹಾಡನ್ನು ಬುಲೆ ಷಾ ರವರು ಸ್ವಲ್ಪ ಬದಲಾವಣೆ ಮಾಡಿ ಜನಪ್ರಿಯಗೊಳಿಸಿದರೆಂದು ನಂಬಲಾಗಿದೆ
ಬುಲೆ ಷಾ ರವರು 17ನೇ ಶತಮಾನದ ಕೊನೆಯಲ್ಲಿ ಜನ್ಮ ತಾಳಿದರು. ಅವರ ಕುಟುಂಬ ಪ್ರಾಫೆಟ್ ಮೊಹಮ್ಮದ್ ರವರ ನೇರ ಸಂತಾನ ಎಂದು ಪರಿಗಣಿಸಲ್ಪಟ್ಟಿದೆ. ಬುಲೆ ಷಾ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಕಲಿತಿದ್ದರು. ಅವರು ಕೃಷಿಕಾರ/ತೋಟಗಾರ ಸೂಫಿ ಸಂತರಾದ ಇನಾಯತ್ ಖದೀರಿ ಅವರ ಶಿಷ್ಯರಾಗಿದ್ದರು. ಮೇಲ್ವರ್ಗದ ಕುಟುಂಬದಲ್ಲಿ ಜನಿಸಿದ ಬುಲೆ ಷಾರವರು ಸಾಮಾನ್ಯ ತೋಟಗಾರನನ್ನು ಗುರುವಾಗಿ ಸ್ವೀಕರಿಸಿದ್ದಾರೆಂದು ಜನರು ಅವಹೇಳನ ಮಾಡಿದರೂ ಬುಲೇ ಷಾರವರು ತಮ್ಮ ಗುರುಗಳ ಬಗ್ಗೆ ದೃಢವಾದ ಭಕ್ತಿ ಭಾವವನ್ನು ಹೊಂದಿದ್ದರು.
ಇವರು ಪಂಜಾಬಿ ಭಾಷೆಯಲ್ಲಿ, ಪರ್ಷಿಯನ್ ಲಿಪಿಯಲ್ಲಿ, ಕಾಫಿ ಎನ್ನುವ ಶೈಲಿಯಲ್ಲಿ ಕೃತಿಗಳನ್ನು ರಚಿಸಿದರು. ಈ ಶೈಲಿ ಸಿಂದೀ ಕಾವ್ಯದಲ್ಲೂ ಜನಪ್ರಿಯವಾಗಿದೆ. ಇವರ ಕವನಗಳು ತುಂಬಾ ಉತ್ಕಟವಾಗಿದ್ದು ಇವುಗಳಲ್ಲಿ ಇವರು ಸಂಪ್ರದಾಯವಾದಿ ಧರ್ಮದ ಬಗ್ಗೆ ತಮಗಿರುವ ಅಸಮ್ಮತಿಯನ್ನು ತೋರಿಸಿದ್ದಾರೆ. ದೇವನೊಬ್ಬನೆ ಎನ್ನುವ ಭಾವ, ದೈವ ಭಕ್ತಿ ಮತ್ತು ಸಾಮಾಜಿಕ ಸಮಾನತೆಯ ವಿಷಯಗಳನ್ನು ಸರಳ ಭಾಷೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಇವರು ಪಂಜಾಬದ ಅತ್ಯಂತ ಶ್ರೇಷ್ಠ ಸೂಫಿ ಸಂತ ಎಂದು ಪರಿಗಣಿಸಲ್ಪಟ್ಟಿದ್ದಾರೆ
ಇವರ ಅಭಿಪ್ರಾಯಗಳಿಂದಾಗಿ ಇವರನ್ನು ಕಾಫಿರ್ ಎಂದು ಪರಿಗಣಿಸಿ ತಮ್ಮ ಸ್ಮಶಾನದಲ್ಲಿ ಸಮಾಧಿ ಮಾಡಲು ಇವರ ಸಮುದಾಯದವರು ನಿರಾಕರಿಸಿದ್ದರು.
ಈ ಚಿತ್ರ ಅವರ ಒಂದು ಪ್ರಸಿದ್ಧ ಕಾವ್ಯದ ಲಿಪ್ಯನ್ತರಣ.
ಮೂಲ: ಬುಲೆ ಷಾ . ರಾಧಾಸ್ವಾಮಿ ಸತ್ಸಂಗ್ . ಬೀಯಸ್