ಹೆಸರೇ ಸೂಚಿಸುವಂತೆ (‘ವೈತಾಲ್’ – ಪ್ರೇತ ಅಥವಾ ಭೂತ), ವೈತಾಲ್ ದೇವುಲ್ – ತಾಂತ್ರಿಕ ಆರಾಧನಾ ಕೇಂದ್ರವಾಗಿದೆ. ಇದರ ಮೇಲ್ಛಾವಣಿಯ ಮೇಲಿರುವ ಮೂರು ವಿಶಿಷ್ಟ ಶಿಖರಗಳು ಜಗತ್ಪ್ರಸಿದ್ಧ ತ್ರಿವಳಿದೇವಿಯರ ಹೆಸರನ್ನು ಹೊಂದಿರುವುದರಿಂದ, ಇದನ್ನು ಸ್ಥಳೀಯರು ಪ್ರೀತಿಯಿಂದ ‘ತೀನ್ ಮುಂಡಿಯಾ’ (ಮೂರು ತಲೆಗಳ ಗುಡಿ) ಎಂದೇ ಕರೆಯುತ್ತಾರೆ. ಈ ದೇವಸ್ಥಾನದ ವೈಶಿಷ್ಟ್ಯ- ಇದು ದಕ್ಷಿಣ ಭಾರತದ ದ್ರಾವಿಡ ಶೈಲಿಯ ಗೋಪುರಗಳನ್ನು ನೆನಪಿಸುವ, ಒಡಿಶಾದಲ್ಲಿ ಅತ್ಯಂತ ವಿರಳವಾಗಿರುವ ‘ಖಾಖರಾ’ (ಅರ್ಧ ಉರುಳೆಯಾಕಾರದ ಅಥವಾ ನೀರು ಹಿಡಿದಿಡುವ ಬ್ಯಾರೆಲ್ ಶೈಲಿಯ ಮೇಲ್ಛಾವಣಿ) ವಾಸ್ತುವನ್ನು ಹೊಂದಿದೆ. ಅಷ್ಟೇ ಅಲ್ಲ, “ದೇವಾಲಯದ ಒಳ ಗೋಡೆಗಳ ಮೇಲೆ ಯಾವುದೇ ಕೆತ್ತನೆಗಳನ್ನು ಮಾಡಬಾರದು” ಎಂಬ ಸಾಂಪ್ರದಾಯಿಕ ನಿಯಮವನ್ನು ಮುರಿದು, ಗರ್ಭಗುಡಿಯ ಒಳಗೂ ಸುಂದರ ಕಲಾಕೃತಿಗಳನ್ನು ಕೆತ್ತಿರುವ ಅಪರೂಪದ ಸಾಹಸ ಇಲ್ಲಾಗಿದೆ. ಇದನ್ನು ಪೂ.ಸಾ.ಶಕ ೭ನೇ ಶತಮಾನದಲ್ಲಿ ಭೌಮಕರ ರಾಜವಂಶದ ಪ್ರಸಿದ್ಧ ರಾಣಿ ತ್ರಿಭುವನ ಮಹಾದೇವಿ ಕಟ್ಟಿಸಿದಳು. ಈ ರಾಜವಂಶವು ಭಾರತೀಯ ಇತಿಹಾಸದಲ್ಲೇ ಹೊಸ ಹಾದಿ ನಿರ್ಮಿಸಿದ ಹೆಗ್ಗಳಿಕೆ ಹೊಂದಿದೆ; ಇದರಲ್ಲಿ ಅನೇಕ ಮಹಿಳೆಯರು ಸ್ವತಂತ್ರ ರಾಣಿಯರಾಗಿ ಸಾಮ್ರಾಜ್ಯವನ್ನು ಆಳಿದ್ದರು. ಇಲ್ಲಿ ನೆಲೆಸಿರುವ ದೇವತೆಗಳ ರೂಪಗಳು ಭಯಾನಕ ಮತ್ತು ಉಗ್ರ, ಸಪ್ತಮಾತೃಕೆಯರು, ಮನುಷ್ಯನ ತಲೆಯನ್ನು ಕತ್ತಿಯಿಂದ ಕತ್ತರಿಸುತ್ತಿರುವ ಭೈರವರ ಮೂರ್ತಿಗಳು ಹಾಗೂ ನರಮುಂಡಗಳ ಮಾಲೆಯನ್ನು ಧರಿಸಿ, ಸಾಕ್ಷಾತ್ ಅಸ್ಥಿಪಂಜರದಂತೆ ಕಾಣುವ ಪ್ರಧಾನ ದೇವತೆ ಚಾಮುಂಡಾ ಇದ್ದಾಳೆ. ಇದೇ ಶೈಲಿಗೆ ಹೋಲುವ ಮತ್ತೊಂದು ತಾಂತ್ರಿಕ ಮಂದಿರ ಚೌರಾಸಿಯಲ್ಲಿರುವ ೧೦ನೇ ಶತಮಾನದ ‘ವರಾಹಿ ದೇವ್’. ಇದೂ ಖಾಖರಾ ಶೈಲಿಯಲ್ಲೇ ಇದ್ದು, ದೊಡ್ಡ ಹೊಟ್ಟೆಯ, ಹಂದಿಯ ಮುಖವನ್ನು ಹೊಂದಿರುವ ಭೀಕರ ವರಾಹಿ ದೇವಿಯ ಮೂರ್ತಿಯನ್ನು ಹೊಂದಿದೆ. ಒಟ್ಟಾರೆಯಾಗಿ ಒಡಿಶಾದಲ್ಲಿ ೧೨ ಪ್ರಮುಖ ಶಕ್ತಿಪೀಠಗಳಿವೆ ಎನ್ನಲಾಗಿದೆ. ಅವುಗಳಲ್ಲಿ ಪುರಿಯ ‘ವಿಮಲಾ ದೇವಿ’, ಬೆಹ್ರಾಂಪುರದ ‘ಮಾ ತಾರಾ ತಾರಿಣಿ’ ಮತ್ತು ಜಾಜ್ಪುರದ ‘ಮಾ ಬಿರಜಾ’ ದೇವಾಲಯಗಳು ಪ್ರಸಿದ್ಧ ಮತ್ತು ಜಾಗೃತ ಶಕ್ತಿ ಕೇಂದ್ರಗಳಾಗಿವೆ. ಚಿತ್ರ ಕೃಪೆ: ಫ್ರಮ್ ಟ್ರಾವೆಲ್ ಡೈರೀಸ್, ಟಂಬ್ಲರ್ (ಅಂತರ್ಜಾಲ ತಾಣ )