0

ರಥ ಯಾತ್ರೆ ಕುರಿತಾದ ರಸಪ್ರಶ್ನೆ

ಜಗನ್ನಾಥ ಪುರಿಯ ರಥ ಯಾತ್ರೆ ಎಷ್ಟು ಅದ್ದೂರಿಯಾಗಿ ನಡೆಯುತ್ತದೆಯೋ ಅಷ್ಟೇ ಅತ್ಯದ್ಭುತವಾಗಿವೆ ಒರಿಸ್ಸಾದ ದೇವಾಲಯಗಳು. ಇಲ್ಲಿನ ದೇವಾಲಯಗಳ ರಚನೆ ನವಿರಾದ ಉತ್ತರದ ನಾಗರಿ ಮತ್ತು ದಕ್ಷಿಣದ ದ್ರಾವಿಡ ವಾಸ್ತುಶಿಲ್ಪಶೈಲಿಗಳ ಸೊಗಸಾದ ಸಮ್ಮಿಲನ. ಈ ಜಾಗ ಸಾಮಾನ್ಯ ಶಕೆಯ ಪೂರ್ವ 3ರಿಂದ 15ನೇ ಶತಮಾನದ ನಡುವೆ, ಸ್ಥಳೀಯ ಪಂಗಡಗಳನ್ನು ಹಾಗೂ ಸಂಪ್ರದಾಯಗಳನ್ನು ಹಲವು ಅತ್ಯದ್ಭುತ ದೇವಾಲಯಗಳ ಮೂಲಕ ಪ್ರತಿನಿಧಿಸುವ ತವರೂರಾಯಿತು. ಅನ್ಯಪ್ರಾಂತಗಳ ರೀತಿ ಇಲ್ಲಿನ ವಾಸ್ತುಶೈಲಿಯು, ಬದಲಾದ ರಾಜ ಮಹಾರಾಜರ ಮನೆತನದ ಜೊತೆಗೆ ಏರುಪೇರಾಗದೇ ತನ್ನ ವಾಸ್ತುಕಲೆಯನ್ನು ಉಳಿಸಿ ಕೊಂಡುಬಂತು. ಬದಲಾಗಿ, ಶಿಲ್ಪ ಪ್ರಕಾಶದಂತಹ ಪಠ್ಯಗಳ ಕಠಿಣ ಅನ್ವಯದ ಮೂಲಕ ಪ್ರಮಾಣೀಕರಿಸಲ್ಪಟ್ಟಿತು. ಹಳೆಯ ಭುವನೇಶ್ವರದ “ಏಕಾಮ್ರ ಕ್ಷೇತ್ರ” ಒಡಿಶಾ ದೇವಾಲಯಗಳ ವಿಕಸನವನ್ನು ಪತ್ತೆಹಚ್ಚುವ 200 ಕ್ಕೂ ಹೆಚ್ಚು ಸ್ಮಾರಕಗಳನ್ನು ಹೊಂದಿದ್ದು ಒಂದು ಬಯಲು ವಸ್ತುಸಂಗ್ರಹಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾ ದೆಹೆಜಿಯಾ ಅವರ “ಒರಿಸ್ಸಾದ ಆರಂಭಿಕ ಶಿಲಾ ದೇವಾಲಯಗಳು” ಇದನ್ನು ಪ್ರಮುಖ ಆಧಾರ ಗ್ರಂಥವಾಗಿಟ್ಟುಕೊಂಡು ರಥಯಾತ್ರೆಯ ಗೌರವಾರ್ಥವಾಗಿ, ಒಡಿಶಾದ ದೇವಾಲಯಗಳ ಸಂಭ್ರಮಾಚರಣೆ ಮಾಡೋಣ.

ಪ್ರಶ್ನೆ೧. ಲಿಂಗರಾಜ ದೇವಾಲಯವು “ಒರಿಯಾ ಪ್ರತಿಭೆಯ ಪರಿಪೂರ್ಣ ವಿಕಸನವನ್ನು ಪ್ರತಿನಿಧಿಸುತ್ತದೆ” ಎಂದು ವಿದ್ವಾಂಸರು ಹೇಳುತ್ತಾರೆ. ಈ ದೇವಾಲಯದಲ್ಲಿ ಶಿವ ಮತ್ತು ವಿಷ್ಣುವಿನ ಯಾವ ಸಂಯೋಜಿತ ಅವತಾರವನ್ನು ಪೂಜಿಸಲಾಗುತ್ತದೆ?

ಪ್ರಶ್ನೆ೨. ಕೋನಾರ್ಕ್ ಕೂಡ ಅಷ್ಟೇ ಭವ್ಯವಾಗಿದೆ. ಮೂಲ ಕೋನಾರ್ಕ್ ಸೂರ್ಯ ದೇವಾಲಯದ ಯಾವ ಸಣ್ಣ ಭಾಗವು ಇಂದು ಉಳಿದುಕೊಂಡಿದೆ?

ಪ್ರಶ್ನೆ ೩. ಜಗ್ಗಾ, ಕಾಲಿಯಾ, ಚಕಡೋಲಾ, ದಾರುಬ್ರಹ್ಮ ಮತ್ತು ನೀಲಮಾಧವ — ಇವು ಒಡಿಯಾ ಜನರು ಯಾವ ಮಹಾನ್ ದೇವಾಲಯದ ದೇವತೆಯನ್ನು ಪ್ರೀತಿಯಿಂದ ಕರೆಯುವ ಹೆಸರು?

ಪ್ರಶ್ನೆ೪. ಪಾರ್ಶ್ವದೇವತೆಗಳು ಎಂದರೆ ದೇವಾಲಯದ ಹೊರಗಿನ ಗೋಡೆಗಳ ಮೇಲೆ ಕೆತ್ತಲಾದ ಪರಿವಾರ ಅಥವಾ ಸಹಾಯಕ ದೇವತೆಗಳು. ಭುವನೇಶ್ವರದ ಪ್ರಸಿದ್ಧ ಪರಶುರಾಮೇಶ್ವರ ಶಿವಾಲಯದ ಗೋಡೆಗಳ ಮೇಲೆ ಯಾವ ಪಾರ್ಶ್ವದೇವತೆಯನ್ನು ಕೆತ್ತಲಾಗಿದೆ?

ಪ್ರಶ್ನೆ ೫. ಭೌಮ-ಕರ ರಾಜವಂಶದ ರಾಣಿಯಾದ ತ್ರಿಭುವನ ಮಹಾದೇವಿಯು ಭುವನೇಶ್ವರದಲ್ಲಿ ಪ್ರಸಿದ್ಧ ‘ವೈತಾಲ್ ದೇವುಲ್’ ಎಂಬ ಅದ್ಭುತ ದೇವಸ್ಥಾನವನ್ನು ಕಟ್ಟಿಸಿದಳು. ಈ ದೇವಸ್ಥಾನದ ಮೂರು ಶಿಖರಗಳು ಯಾವ ದೇವತೆಗಳನ್ನು ಪ್ರತಿನಿಧಿಸುತ್ತವೆ?

ಪ್ರಶ್ನೆ೬. “ನಾರಿಬಂಧವಿಲ್ಲದ ದೇವಾಲಯವು ಯಾವುದೇ ಫಲವನ್ನು ನೀಡುವುದಿಲ್ಲ” ಎಂದು ದೇವಾಲಯ ವಾಸ್ತುಶಿಲ್ಪದ ಮೂಲ ಪಠ್ಯವಾದ ‘ಶಿಲ್ಪ ಪ್ರಕಾಶ’ದಲ್ಲಿ ಹೇಳಲಾಗಿದೆ. ಹಾಗಾದರೆ ‘ನಾರಿಬಂಧ’ ಎಂದರೇನು?

ಪ್ರಶ್ನೆ ೭. ಚೌಸತ್ ಯೋಗಿಣಿ ದೇವಾಲಯಗಳು ಅತ್ಯಂತ ವಿಶಿಷ್ಟವಾದ ವೃತ್ತಾಕಾರ ಮತ್ತು ಮೇಲ್ಛಾವಣಿ ಇಲ್ಲದ ವಿನ್ಯಾಸವನ್ನು ಹೊಂದಿದ್ದವು. ಈ ದೇವಾಲಯಗಳು ದೆಹಲಿಯಲ್ಲಿರುವ ಭಾರತದ ಯಾವ ಮಹತ್ತರ ಆಧುನಿಕ ವಾಸ್ತುಶಿಲ್ಪದ ಮೈಲಿಗಲ್ಲಿಗೆ ಸ್ಪೂರ್ತಿಯಾಗಿದ್ದವು ಎಂದು ಹೇಳಲಾಗುತ್ತದೆ?

ಪ್ರಶ್ನೆ ೮. ಸಮಲೇಶ್ವರಿ ಮಾತೆಯು ಪಶ್ಚಿಮ ಒಡಿಶಾದ ರಕ್ಷಣಾ ದೇವತೆಯಾಗಿದ್ದಾಳೆ. ಆಕೆಯ ಸನ್ನಿಧಿ ಎಲ್ಲಿದೆ?

ಪ್ರಶ್ನೆ೯. ಧೇನ್‌ಕನಾಲ್‌ನಲ್ಲಿರುವ, ೯ ನೇ ಶತಮಾನಕ್ಕೆ ಸೇರಿದ ಮುಕ್ತ ಆಕಾಶದ ಕೆಳಗಿರುವ ಭವ್ಯ ‘ಅನಂತಶಯನ ವಿಷ್ಣು’ ಶಿಲ್ಪ ಯಾವುದು?

ಪ್ರಶ್ನೆ೧೦. ಪುರಿಯ ‘ಶಾಂತ ನರಸಿಂಹ’ ಮೂರ್ತಿಯು, ಪುರಿಯ ದೇವಾಲಯಗಳನ್ನು ಲೂಟಿ ಮಾಡಿದ ಮಧ್ಯಕಾಲೀನ ಆಕ್ರಮಣಕಾರನ ಕೋಪವನ್ನು ಶಾಂತಗೊಳಿಸಿತು ಎಂಬ ಐತಿಹ್ಯವಿದೆ. ಹಾಗಾದರೆ ಆ ಆಕ್ರಮಣಕಾರ ಯಾರು?

ಪ್ರಶ್ನೆ೧೧. ಲಲಿತಗಿರಿ, ರತ್ನಗಿರಿ ಮತ್ತು ಉದಯಗಿರಿ ಅತ್ಯಂತ ಭವ್ಯವಾದ ಮೂರು ಐತಿಹಾಸಿಕ ತಾಣಗಳಾಗಿವೆ. ಇವು ಯಾವ ಧರ್ಮ ಅಥವಾ ಪಂಥಕ್ಕೆ ಸೇರಿದುವುಗಳಾಗಿವೆ?

ಪ್ರಶ್ನೆ ೧೨. ಭುವನೇಶ್ವರದ ಹತ್ತಿರವಿರುವ ಉದಯಗಿರಿಯಲ್ಲಿ ಜೈನ ರಾಜ ಖಾರವೇಲನು ಕೆತ್ತಿಸಿದ ಹಾಥಿಗುಂಫಾ ಶಾಸನದಲ್ಲಿ ಭಾರತದ ಹೆಸರು ಉಲ್ಲೇಖವಾಗಿದೆ. ಈ ನಿರ್ದಿಷ್ಟ ಹೆಸರಿನ ಮೊದಲ ಅತ್ಯಂತ ಹಳೆಯ ಶಾಸನ ಆಧಾರ ಇದಾಗಿದೆ. ಹಾಗಾದರೆ ಶಾಸನದಲ್ಲಿ ಕೆತ್ತಲಾಗಿರುವ ಆ ಹೆಸರು ಯಾವುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In