92

ಜನ್ಮಾಷ್ಟಮಿಯ ಕುರಿತೊಂದು ಪ್ರಶ್ನಾವಳಿ

ದ್ವಾರಕೆ, ಮಥುರೆ, ಮತ್ತು ವೃಂದಾವನಗಳನ್ನು ನಾವು ಕೃಷ್ಣಕ್ಷೇತ್ರಗಳೆಂದು ಆದರಿಸುತ್ತೇವೆ. ಆದರೆ ಇವಲ್ಲದೆ ನಮ್ಮ ಭಾರತದೇಶದಲ್ಲಿ ಕೃಷ್ಣಸಂಬಂಧಿಯಾದ ಮತ್ತೆಷ್ಟೋ ಸ್ಥಳಗಳುಂಟು. ಈ ಪ್ರಶ್ನಾವಲಿಯಲ್ಲಿ ಶ್ರೀಕೃಷ್ಣನು ಬಾಳಿ, ಬಾಳಿಸಿ, ನಲಿದು, ಕಾದಿ, ಕಲಿಸಿ, ವಂಚಿಸಿ ಬೆಳಗಿದ ಹಲವಾರು ಎಡೆಗಳಿಗೆ ತಮ್ಮನ್ನು ನಾವು ಕರೆದೊಯ್ಯುವೆವು. ಬನ್ನಿ, ಕೊಳಲುಲಿಯ ಹಾದಿಯನ್ನು ಹಿಡಿಯೋಣ.
ಈ ಪ್ರಶ್ನಾವಲಿಯಲ್ಲಿ ಪ್ರಸ್ತುತವಾಗಿರುವ ಚಿತ್ರಗಳೆಲ್ಲ ಶ್ರೀಕೃಷ್ಣನ ಬಗೆಗೆ ‘ಟೈನಿ ಟಾಟ್ಸ್’ ಪ್ರಕಾಶನ ಮತ್ತು ‘ಶಾಂತಿ’ ಪ್ರಕಾಶನದವರು ಹೊರತಂದಿರುವ ಪುಸ್ತಕಗಳಿಂದ ಆಯ್ದುಕೊಳ್ಳಲಾಗಿವೆ.
ಅರ್ಜುನ್ ಭಾರದ್ವಾಜ್ ಅವರು ರಚಿಸಿರುವ ಉತ್ತಮಕೃತಿ ‘The Essential Ramayana’ ಎಂಬ ಗ್ರಂಥವನ್ನು ಈ ಪ್ರಶ್ನಾವಲಿಯಲ್ಲಿ ಭಾಗವಹಿಸಿದ ಐವರು ಅದೃಷ್ಟಶಾಲಿಗಳು ಪಡೆಯುವರು. ಇಂಡೀಯಾತ್ರಾ ಪ್ರಶ್ನಾವಲಿಗಳ ಐದನೆಯ ವರ್ಷವು ಇಂತು ಪ್ರಾರಂಭವಾಗುತ್ತದೆ.

೧. ನವಜಾತ ಶಿಶುವಾಗಿದ್ದ ಕೃಷ್ಣನನ್ನೆತ್ತಿಕೊಂಡು ವಸುದೇವನು, ನಡುರಾತ್ರಿಯಲ್ಲಿ ನದಿಯನ್ನು ದಾಟಿ ಯಶೋದೆ-ನಂದಗೋಪರ ಕೈಗೊಪ್ಪಿಸಿದನು. ವಸುದೇವನು ಅರಸಿಹೋದ ಆ ತಾಣವಾವುದು?

೨. ಇಂದ್ರನು ಕೋಪಗೊಂಡು ಸುರಿಸಿದ ಏಳು ದಿನಗಳ ಮಹಾವೃಷ್ಟಿಯಿಂದ ತತ್ತರಿಸಿದ ಗೋವುಗಳು ಹಾಗೂ ಗೋಪಾಲಕರನ್ನುಕೃಷ್ಣನು ಗೋವರ್ಧನ ಬೆಟ್ಟವನ್ನೆತ್ತಿ ರಕ್ಷಿಸಿದನು. ಈ ಘಟನೆಯಿಂದಾಗಿ ಪ್ರಸಿದ್ಧಿಗೆ ಬಂದ ಆಹಾರವಾವುದು?

೩. ಗುರು ಸಾಂದೀಪನಿಯವರ ಬಳಿ ಜ್ಞಾನಾಜ೯ನೆಗಾಗಿ ಕೃಷ್ಣ, ಬಲರಾಮ ಹಾಗೂ ಉದ್ಧವರು ಯಾವ ನಗರಕ್ಕೆ ತೆರಳಿದರು?

೪. ಯಾದವ ಕಲಹದ ನಂತರ ಕೃಷ್ಣನು ಪ್ರಭಾಸ ಕ್ಷೇತ್ರದಲ್ಲಿ ಇಹ ಲೋಕವನ್ನು ತ್ಯಜಿಸಿದನು. ಪ್ರಭಾಸವು ಯಾವ ಕರಾವಳಿ ನಗರದ ಸಮೀಪದಲ್ಲಿದೆ?

೫. ಹಿಂದೂಗಳು ಮತ್ತು ಜೈನರ ಶ್ರದ್ಧಾಕೇಂದ್ರವೆನಿಸಿದ ಗಿರ್ನಾರ್ ಬೆಟ್ಟದಲ್ಲಿ ಕೃಷ್ಣನು ಜಾಂಬವಂತನೊಂದಿಗೆ ಯಾವ ರತ್ನಕ್ಕಾಗಿ ಇಪ್ಪತ್ತೆಂಟು ದಿನಗಳ ಕಾಲ ಹೋರಾಡಿ ಮರಳಿ ಪಡೆದನು?

೬. ಜರಾಸಂಧನ ಸತತ ದಾಳಿಗಳಿಂದಾಗಿ ಕೃಷ್ಣ ಮತ್ತು ಬಲರಾಮರು ಸಮುದ್ರದ ಬಳಿಯ ಬೆಟ್ಟವಾದ ಗೋಮಾಂತಕಕ್ಕೆ ಹಿಂತೆಗೆದುಕೊಂಡರು. ಇಂದು ಅದನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?

೭. ಪ್ರಸಕ್ತ ಮಹಾರಾಷ್ಟ್ರಾ ರಾಜ್ಯದ ಅಮರಾವತಿ ಜಿಲ್ಲೆಯಲ್ಲಿರುವ ಕುಂಡಿನಪುರದಿಂದ ಶ್ರೀಕೃಷ್ಣನು ಯಾರನ್ನು ಅಪಹರಿಸಿದನು?

೮. ಪಾಂಚಾಲ ದೇಶದ ರಾಜಧಾನಿಯಲ್ಲಿ ದ್ರೌಪದಿಯ ಸ್ವಯಂವರವೇಪ೯ಟ್ಟಿತು. ಅದರ ಹೆಸರೇನು?

೯. ಜರಾಸಂಧನನ್ನು ನಿಗ್ರಹಿಸಲು ಭೀಮಾಜು೯ನ ಹಾಗೂ ಕೃಷ್ಣರು ಮಗಧದ ರಾಜಧಾನಿಯಾಗಿದ್ದ ಈ ನಗರವನ್ನು ಮಾರುವೇಷದಲ್ಲಿ ಹೊಕ್ಕರು. ಈ ನಗರವಾವುದು?

೧೦. ಗೋಕುಲವನ್ನೂ, ವೃಂದಾವನವನ್ನೂ ತ್ಯಜಿಸಿದ ಗೊಲ್ಲರು ವ್ರಜಭೂಮಿಯಲ್ಲಿನ ಈ ಹಳ್ಳಿಯನ್ನು ಮನೆಯಾಗಿಸಿಕೊಂಡರು. ಶ್ರೀಕೃಷ್ಣನು ತನ್ನ ಬಾಲ್ಯ, ಕೌಮಾಯ೯ಗಳನ್ನು ಕಳೆದ ಈ ಹಳ್ಳಿ ಯಾವುದು?

೧೧. ಇಂದ್ರಪ್ರಸ್ಥವನ್ನು ಸ್ಥಾಪಿಸಲು ಕೃಷ್ಣಾಜು೯ನರು ಯಾವ ಕಾಡನ್ನು ಸುಟ್ಟರು?

೧೨. ಪ್ರಾಗ್ಜ್ಯೋತಿಷ ಪುರದಲ್ಲಿ ಕೃಷ್ಣನು ನರಕಾಸುರನನ್ನು ಸಂಹರಿಸಿದನು. ಇದರ ನೆನಪಿಗಾಗಿ ದೀಪಾವಳೀ ಅಥವಾ ನರಕಚತುದ೯ಶಿಯನ್ನು ಆಚರಿಸುತ್ತೇವೆ. ಪ್ರಾಗ್ಜ್ಯೋತಿಷ ಪುರವು ಎಲ್ಲಿರುವುದು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In