142

ಮಾನಸ’ ರಸಪ್ರಶ್ನೆಯ ತತ್ತ್ವಶಾಸ್ತ್ರ

ಜುಲೈ 31 ತುಳಸಿದಾಸರ ಜಯಂತಿ , ಇಂದಿಗೆ ಅವರು ಹುಟ್ಟಿ 528 ವರ್ಷಗಳು ಸಂದಿವೆ. ಗಾಂಧೀಜಿ
ತುಳಸಿದಾಸರ ರಾಮಚರಿತಮಾನಸವನ್ನು ‘ಎಲ್ಲಾ ಭಕ್ತಿ ಸಾಹಿತ್ಯಗಳಲ್ಲಿ ಶ್ರೇಷ್ಠ ಗ್ರಂಥ’ ಎಂದು ವರ್ಣಿಸಿದ್ದರು. ಭಾಷಾಶಾಸ್ತ್ರಜ್ಞ ಸರ್ ಜಾರ್ಜ್ ಗ್ರಿಫಿತ್ ತುಳಸಿದಾಸರನ್ನು ‘ಬುದ್ಧನ ನಂತರದ ಶ್ರೇಷ್ಠ ಜನನಾಯಕ’ ಎಂದು ಶ್ಲಾಘಿಸಿದ್ದರು.
ರಾಮಚರಿತಮಾನಸ ಎಂದರೆ ‘ರಾಮನ ಕಥಾಸಾಗರ’. ಪ್ರೀತಿಯಿಂದ ಮಾನಸ
ಎಂದು ಕರೆಯಲ್ಪಡುವ ಈ ಹೊತ್ತಿಗೆ ಉತ್ತರದ ಅನೇಕರಿಗೆ ಪವಿತ್ರ ಗ್ರಂಥ. ಭಾವಪೂರ್ಣ ವಾದ ಈ ಭಕ್ತಿಗೀತೆಯ ಪ್ರಸಿದ್ಧಿ ಅನುಪಮವಾಗಿದ್ದಲ್ಲದೇ ಇದು ಹಿಂದೂ ತತ್ತ್ವಶಾಸ್ತ್ರದ ಜಟಿಲತೆಗಳನ್ನು ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ಪ್ರತಿಬಿಂಬಿಸಿದೆ.
ಅವರ ಜಯಂತಿಯಂದು, ‘ತತ್ತ್ವಶಾಸ್ತ್ರಜ್ಞನಾಗಿ ತುಳಸಿ ದಾಸ’ ಮಾನಸದಲ್ಲಿ
ಏನು ಹೇಳುತ್ತಾರೆಂದು ನೋಡೋಣ. ನಾವು ಪವನ್ ವರ್ಮಾ ಅವರ ಆಹ್ಲಾದಕರ ಪುಸ್ತಕವನ್ನು ಮತ್ತು ಜಾಲಪುಟ: https://ramcharitmanas.info/
ಅನ್ನು ಆಧಾರವಾಗಿರಿಸಿಕೊಂಡಿದ್ದೇವೆ.
ಐದು ಅದೃಷ್ಟಶಾಲಿ ರಸಪ್ರಶ್ನೆ ವಿಜೇತರಿಗೆ ಈ ಪುಸ್ತಕವನ್ನು ಗೆಲ್ಲುವ ಅವಕಾಶವಿದೆ.

ಸಾಧು ಸಜ್ಜನರ ಗುಣಗಳಾದ ನಿರ್ಲಿಪ್ತತೆ, ನಿಸ್ವಾರ್ಥತೆ ಮತ್ತು ಸಹಿಷ್ಣುತೆಯನ್ನು ವಿವರಿಸಲು ತುಳಸಿದಾಸರು ಯಾವ ದೈನಂದಿನ ವಸ್ತುವನ್ನು ಬಳಸುತ್ತಾರೆ?

ಕಬೀರರಂತೆ ತುಳಸಿದಾಸರೂ, ನಾವು ಕೆಲವರನ್ನು ನಮ್ಮ ನ್ಯೂನತೆಗಳನ್ನು ತೋರಿಸಲಿಕ್ಕೆಂದೇ ನಮ್ಮೊಟ್ಟಿಗೆ ಇಟ್ಟುಕೊಳ್ಳಬೇಕೆನ್ನುತ್ತಾರೆ. ಯಾರಿವರು ?

ತುಳಸಿದಾಸರ ಪ್ರಕಾರ, ಯಾರ ಪ್ರಭಾವದಿಂದ ನಿರ್ಗುಣ (ಗುಣಗಳನ್ನು ಮೀರಿದ) ದೇವರು ಗುಣಲಕ್ಷಣಗಳುಳ್ಳ (ಸಗುಣ) ದೇವರಾಗಿ ಬದಲಾಗುತ್ತಾನೆ?

ವೇದಾಂತಿಗಳ ಸಮುದ್ರ-ತರಂಗ ನ್ಯಾಯ (ಸಾದೃಶ್ಯ) ವನ್ನು ತುಳಸಿದಾಸರು ದೇವರ ಏಕತೆಯನ್ನುಒತ್ತಿಹೇಳಲು ಬಳಸುತ್ತಾರೆ. ಈ ಹೋಲಿಕೆಯಲ್ಲಿ ಏನನ್ನು ಉಪಯೋಗಿಸಲಾಗಿದೆ?

ತುಳಸಿದಾಸರು ರಾಮಚರಿತ ಮಾನಸ ಬರೆಯಲು ಪ್ರೇರೇಪಿಸಿದ ದೇವರು ಯಾರು

ದುರಹಂಕಾರದ ಅಪಾಯಗಳನ್ನು ಪ್ರದರ್ಶಿಸಲು ತುಳಸಿದಾಸರು ಪ್ರಸಿದ್ಧ ಶಿವ-ಸತಿ ಕಥೆಯಲ್ಲಿ ಸತಿಯ ತಂದೆಯ ಉದಾಹರಣೆಯನ್ನು ಬಳಸುತ್ತಾರೆ. ಪಾತ್ರದ ಹೆಸರು

ತುಳಸಿ ದಾಸರ ಪ್ರಕಾರ ಯಾರು ಭಗವಂತನ ರೂಪವನ್ನು ವ್ಯಾಖ್ಯಾನಿಸಬಹುದು?

ನಾವು ಜೀವನದ ಮೇಲು ಕೆಳಗುಗಳಿಗೆ ವಿಚಲಿತರಾಗದೆ ಏಕೆ ಇರಬೇಕು ಎಂಬುದನ್ನು ವಿವರಿಸಲಿಕ್ಕೆ
ತುಳಸಿದಾಸರು ಜಗತ್ತನ್ನು ಯಾವುದಕ್ಕೆ ಹೋಲಿಸಿದ್ದಾರೆ?

ತುಳಸೀದಾಸರ ಪ್ರಕಾರ, ಜನನ – ಮರಣ, ಸುಖ – ದುಃಖ, ನಷ್ಟ – ಲಾಭ, ಎಲ್ಲವೂ ಯಾವ ನಿಯಮದ ಅನ್ವಯ ಸಂಭವಿಸುತ್ತದೆ?

ತುಳಸಸೀ ದಾಸರ ಅಭಿಪ್ರಾಯದಲ್ಲಿ, ‘ನಾನು’-‘ನನ್ನದು’ ಮತ್ತು ‘ನೀನು’ – ‘ನಿನ್ನದು’ ಎಂಬ ಭಾವನೆಯು ಯಾವ ಪರಿಕಲ್ಪನೆಯನ್ನು ವಿವರಿಸುತ್ತದೆ?

ರಾಮ ರಾಜ್ಯದಲ್ಲಿ ಯುದ್ಧ ಯಾವ ಉದ್ದೇಶಕ್ಕಾಗಿ ಮಾಡಲಾಗುತ್ತಿತ್ತು

ತುಳಸಿ ಭಾರತದ ರಾಷ್ಟ್ರೀಯ ಪಕ್ಷಿಯನ್ನು ಕಪಟ ಜನರಿಗೆ ಹೋಲಿಸುತ್ತಾರೆ. ಈ ಪಕ್ಷಿ ಯಾವುದು.

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In