728

ವಿಜಯನಗರ… ಗತವೈಭವದ ನೆನಪು

ಸಾಮಾನ್ಯ ಶಕೆ 14 ನೇ ಶತಮಾನದ ವೇಳೆಗೆ ದೆಹಲಿ ಸುಲ್ತಾನ ಶಾಹಿಯಿಂದಾಗಿ ನಶಿಸಿಹೋದ ದಕ್ಷಿಣ ಸಾಮ್ರಾಜ್ಯಗಳ ಅವಶೇಷಗಳ ಮೇಲೆ ವಿಜಯನಗರವು ತಲೆಯೆತ್ತಿತು. ಆರಂಭದಲ್ಲಿ ಕಾಕತೀಯ ಹಾಗೂ ಕಂಪಿಲಿ ಸಂಸ್ಥಾನಗಳಲ್ಲಿ ಸೇವೆಯಲ್ಲಿದ್ದ ಸಂಗಮ ವಂಶದ ಹರಿಹರ ಮತ್ತು ಬುಕ್ಕರಾಯರು, ತಮ್ಮ ಸಹೋದರರೊಡನೆ ವಿಜಯನಗರದ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣದಲ್ಲಿ ಪ್ರಾಬಲ್ಯವನ್ನು ಸಾಧಿಸಿ, ಭಾರತೀಯ ಸಂಸ್ಕೃತಿಯನ್ನು ರೂಪಿಸಿ, ಅರಳಿಸಿತು.
ಸಾ.ಶ. 16 ನೆಯ ಶತಮಾನದ ಅವಧಿಯಲ್ಲಿ ಭಾರತಕ್ಕೆ ಮುತ್ತಿಗೆ ಹಾಕಿದ ಬಾಬರ್, ಇಲ್ಲಿನ ಮೂಲದ ಇಬ್ಬರು ಅರಸರಾದ ಮಹಾರಾಣಾ ಸಂಗ ಹಾಗೂ ವಿಜಯನಗರದ ಅರಸರ ಬಗ್ಗೆ ಉಲ್ಲೇಖಿಸುತ್ತಾ, ‘ ಸೈನ್ಯ ಬಲ ಹಾಗೂ ವಿಸ್ತೀರ್ಣದಲ್ಲಿ ಹೆಚ್ಚಿನವರು’ ಎನ್ನುತ್ತಾನೆ. ಈ ಹೊಗಳಿಕೆಗೆ ಕರ್ನಾಟಕವು ಸಂಪೂರ್ಣವಾಗಿ ಪಾತ್ರವಲ್ಲದಿದ್ದರೂ ವಿಜಯನಗರದ ರಾಜಧಾನಿ ಹಂಪೆಯು ಇರುವುದು ಇಲ್ಲಿಯೇ.
ಬನ್ನಿ, ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ, ನಾವೆಲ್ಲರೂ ವಿಜಯನಗರದ ಗತವೈಭವದ ನೆನಪಿನ ಲೋಕಕ್ಕೆ ತೆರಳೋಣ. ಇತಿಹಾಸಕಾರ ರಾಬರ್ಟ್ ಸ್ವೆಲ್ ,’ ವಿಸ್ಮೃತ ಸಾಮ್ರಾಜ್ಯ’ ವೆಂದು ವರ್ಣಿಸಿರುವ ಭವ್ಯ ವಿಜಯನಗರದ ರಹಸ್ಯಗಳನ್ನು ತಿಳಿದುಕೊಳ್ಳೋಣ.
ವಿಜಯನಗರ ವಿಷಯೋತ್ಸಾಹಿಗಳು ಮತ್ತಷ್ಟು ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಬಹುದು.

ಈ ಪ್ರಶ್ನಾವಲಿಯನ್ನು, ಐಐಟಿ ಕಾನ್ಪುರದಲ್ಲಿ ಭಾರತೀಯ ವಿದ್ಯಾಪರಂಪರೆ ಹಾಗೂ ಕಂಪ್ಯೂಟರ್ ವಿಜ್ಞಾನ ವ್ಯಾಸಂಗದಲ್ಲಿ ತೊಡಗಿಸಿಕೊಂಡಿರುವ, ಇತಿಹಾಸದಲ್ಲಿ ಆಸಕ್ತಿಯನ್ನು ಹೊಂದಿರುವ ಯುವ ವಿಜ್ಞಾನಿ ಶ್ರೀ ಶ್ರೀನಿಧಿಯವರು ರಚಿಸಿದ್ದಾರೆ.

ಆದಿ ಶಂಕರಾಚಾರ್ಯರು ಸ್ಥಾಪಿಸಿದ ಈ ಮಠದ ಮಠಾಧೀಶರು, ವಿಜಯನಗರ ಸಾಮ್ರಾಜ್ಯದ ಆಧಾರ ಸ್ತಂಭವಾದರು. ಈ ಮಠ ಯಾವುದು?

ವಿಜಯನಗರದ ಸಾಮ್ರಾಜ್ಯವು ಕರ್ನಾಟಕ ಸಂಗೀತದ ಯಾವ ಮಹಾನ್ ಹರಿದಾಸ ಹಾಗೂ ಕೀರ್ತನಕಾರನಿಗೆ ಆಶ್ರಯ ನೀಡಿತು?

ವಿಜಯನಗರ ಸಂಸ್ಥಾನದಲ್ಲಿದ್ದ ವಿದ್ವದ್ವರೇಣ್ಯರೊಬ್ಬರು ತಮ್ಮ ಭಾಷ್ಯಗಳಿಂದ ವೇದಗಳನ್ನು ಉಜ್ಜೀವಿಸಿದರು. ಯಾರು ಈ ಮಹಾನುಭಾವರು?

ಗಂಗಾದೇವಿಯ ಮಹಾಕಾವ್ಯಕ್ಕೆ ವಿಷಯವಾದ ಈ ದೇವಿಯ ಸುಪ್ರಸಿದ್ಧ ದೇವಾಲಯವನ್ನು ವಿಜಯನಗರದ ಅರಸರು ಮುಕ್ತಿಗೊಳಿಸಿದರು. ಈ ದೇವಾಲಯವಾವುದು?

ದಕ್ಷಿಣ ಭಾರತದ ಬಹುಭಾಗಗಳ ವಿಸ್ತೀರ್ಣವನ್ನು ಹೊಂದಿದ್ದ ವಿಜಯನಗರ ಸಾಮ್ರಾಜ್ಯದ ಸುಪ್ರಸಿದ್ಧ ಅರಸ ಶ್ರೀ ಕೃಷ್ಣದೇವರಾಯ. ಬಹುಭಾಷಾ ಕೋವಿದನಾದ ಇವನು ತನ್ನ ಮಹಾಕಾವ್ಯವನ್ನು ಯಾವ ಭಾಷೆಯಲ್ಲಿ ರಚಿಸಿದನು?

ವಿಜಯನಗರದಂತೆ ದಕ್ಷಿಣದ ಯಾವ ರಾಜವಂಶದ ಲಾಂಛನವು ವರಾಹವಾಗಿದ್ದಿತು?

ವಿಜಯನಗರದ ಅರಸರು ಯಾವ ದೇವನ ಪ್ರತಿನಿಧಿಗಳಾಗಿ ಶಾಸನ ನಡೆಸುತ್ತಿದ್ದರು?

ಭಗ್ನವಾದ ವಿಜಯವಿಠ್ಠಲ ಸ್ವಾಮಿಯ ದೇವಾಲಯದ ಪ್ರಾಂಗಣದಲ್ಲಿರುವ ಪ್ರಸಿದ್ಧ ಕಲ್ಲಿನ ರಥದ ಚಿತ್ರವನ್ನು ದೈನಂದಿನ ಬದುಕಿನಲ್ಲಿ ಎಲ್ಲಿ ಕಾಣುತ್ತೇವೆ?

ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿ ಎನಿಸಿರುವ ಮೈಸೂರಿನಲ್ಲಿ ಯಾವ ಭವ್ಯ ಉತ್ಸವದ ಆಚರಣೆ ಇಂದಿಗೂ ಅಲ್ಲಿ ನಡೆಯುತ್ತಿದ್ದಂತೆಯೇ ಮುಂದುವರಿದಿದೆ?

ಸಾ.ಶ. 1537 ರಲ್ಲಿ ವಿಜಯನಗರದ ಸಮ್ರಾಟ್ ಅಚ್ಯುತರಾಯರು ಕೊಟ್ಟ12 ಗ್ರಾಮಗಳ ಉಂಬಳಿಯು ಭವಿಷ್ಯದಲ್ಲಿ ಬೆಂಗಳೂರು ಎನಿಸಿತು. ಈ ಉಂಬಳಿಯನ್ನು ಪಡೆದವರು ಯಾರು?

ಯೂರೋಪಿನ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ವಹಿವಾಟಿಗೆಂದು ಮೊಟ್ಟಮೊದಲು ಭೂಮಿಯನ್ನು ದತ್ತಿಯಾಗಿ ಕೊಟ್ಟವರು ವಿಜಯನಗರದ ಅರಸರು. ಮುಂದೆ ಈ ಜಾಗದಲ್ಲಿ ಒಂದು ಪ್ರಖ್ಯಾತ ನಗರ ಬೆಳೆಯಿತು. ಈ ನಗರ ಯಾವುದು?

ವಿಜಯನಗರ ಸಾಮ್ರಾಜ್ಯಕ್ಕೆ ಯಾರ ಆಕ್ರಮಣವು ಮಾರಣಾಂತಿಕವಾಯಿತು?

ನಿರ್ಗಮನ

How did you like this quiz?

Get quiz links

We will send you quiz links at 6 AM on festival days. Nothing else 

Opt In