ಕಬೀರ ಜಯಂತಿ

ಇಂದು ಪ್ರಸಿದ್ಧ ಭಕ್ತಿಕವಿ, ಲೋಕಪ್ರಿಯ ಸಂತ ಕಬೀರ್ ಅವರ ಜಯಂತಿ. ಮಾನವನಲ್ಲಿ ಭಕ್ತಿಯ ಭಾವವು ಅತ್ಯಂತ ಪ್ರಾಚೀನವಾದುದು. ಈಶೋಪನಿಷತ್ ಮತ್ತು ಭಗವದ್ಗೀತೆಯು ಭಕ್ತಿಯನ್ನು ಸ್ತುತಿಸುತ್ತವೆ. ಭಕ್ತಿಕಾವ್ಯವು ಬಹುಶಃ ಸಾ.ಶ 6ನೇ ಶತಮಾನದಲ್ಲಿ ತಮಿಳು ಪ್ರದೇಶದಲ್ಲಿ ಆರಂಭವಾಗಿ, ಭಾರತದಾದ್ಯಂತ ಹರಡಿತು. ಈ 12 ಪ್ರಶ್ನೆಗಳ ರಸಪ್ರಶ್ನೆಯಲ್ಲಿ, ನಮ್ಮ ಭಕ್ತಿ ಸಂಪ್ರದಾಯದ ವಿವಿಧ ಸಂತರು ಮತ್ತು ಅವರ ಕೊಡುಗೆಗಳ ವಿಚಾರವಾಗಿ ನಾವು ತಿಳಿದುಕೊಳ್ಳೋಣ. ಆಂಡ್ರೂ ಶೆಲಿಂಗ್ ರವರು ಸಂಪಾದಿಸಿದ ಉತ್ತಮ ಭಕ್ತಿಕಾವ್ಯಗಳ ಸಂಕಲನವು ಈ ರಸಪ್ರಶ್ನೆಯ ಆಧಾರವಾಗಿದೆ.

ಅಹಿಲ್ಯಾ ಬಾಯಿ ರಸಪ್ರಶ್ನೆ

ಅಹಿಲ್ಯಾ ಬಾಯಿಯವರ ಧೀರ ಧರ್ಮ ಪಥ:
ಅಹಿಲ್ಯಾ ಬಾಯಿ ಹೋಳ್ಕರ್ ಅವರು 300 ವರ್ಷಗಳ ಹಿಂದೆ, ಮೇ 31ರಂದು ಜನಿಸಿದರು. ಅವರು ಸುಮಾರು 50 ವರ್ಷಗಳ ಕಾಲ ಹೋಳ್ಕರ್ ವಂಶದ ರಾಜಮಾತೆಯಾಗಿದ್ದರು. ಈ 12 ಪ್ರಶ್ನೆಗಳ ಕ್ವಿಜ್‌ನಲ್ಲಿ, ಅಹಿಲ್ಯಾ ಬಾಯಿಯವರ ಜೀವನ, ವಿಜಯಗಳು ಮತ್ತು ಅವರನ್ನು ಕಂಗೆಡಿಸಿದ ದುರಂತಗಳ ಬಗ್ಗೆ ತಿಳಿದುಕೊಳ್ಳೋಣ.
ಭಾಗವಹಿಸಿದವರಲ್ಲಿ ಆಯ್ಕೆಯಾದ ಐವರಿಗೆ ಡಾ. ಉದಯ್ ಕುಲಕರ್ಣಿಯವರ “ದಿ ಮರಾಠಾ ಸೆಂಚುರಿ” ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು.

ಬೌದ್ಧ ಧರ್ಮದ ಸಂಕೇತಗಳು ರಸಪ್ರಶ್ನೆ

ಮೇ ೧೨ ರಂದು ವೈಶಾಖ ಶುಕ್ಲ ಪೂರ್ಣಿಮೆ. ಇದು ಬುದ್ಧ ಪೂರ್ಣಿಮೆ. ಬೌದ್ಧ ಧರ್ಮವು ಮುಖ್ಯವಾಗಿ ಹಲವು ಪವಿತ್ರ ಸಂಕೇತಗಳನ್ನು ಒಳಗೊಂಡಿದೆ. ಬೌದ್ಧ ಧರ್ಮವು ಅಸ್ತಿತ್ವಕ್ಕೆ ಬಂದಾಗ ಅದಾಗಲೇ ಶ್ರೇಷ್ಠವೆನಿಸಿದ್ದ ಹಲವು ಚಿಹ್ನೆಗಳನ್ನು, ಸಂಕೇತಗಳನ್ನು ತನ್ನ ಪ್ರಸರಣಕ್ಕೂ ಅನುವಾಗುವಂತೆ ಬಳಸಿಕೊಂಡಿತು. ತನ್ನದೇ ಆದ ಹೊಸ ಸಂಕೇತಗಳನ್ನೂ ಸೃಜಿಸಿಕೊಂಡಿತು ಕೂಡ. ಈ ರಸಪ್ರಶ್ನೆಯಲ್ಲಿ ನಾವು ೧೨ ಬೌದ್ಧ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ. ಈ ಪ್ರಶ್ನೆಗಳು ಬೌದ್ಧ ಧರ್ಮದ ದರ್ಶನ, ಸಂಕೇತ ಪ್ರಪಂಚ ಹಾಗೂ ವಾಸ್ತುಶಿಲ್ಪಗಳಿಗೆ ಸಂಬಂಧಿಸಿದೆ. ಈ ರಸಪ್ರಶ್ನೆಯ ಮೊದಲ ೫ ವಿಜೇತರಿಗೆ ಬಿಬೇಕ್ ದೇಬ್ರಾಯ್ ಅವರ “Bhagavad Gita for Millennials” ಎಂಬ ಪುಸ್ತಕವನ್ನು ಬಹುಮಾನವನ್ನಾಗಿ ಕೊಡಲಾಗುವುದು.

ಅಕ್ಷಯ ತೃತೀಯ ರಸಪ್ರಶ್ನೆ

ಅಕ್ಷಯ ತೃತೀಯ (ಅಕ್ಷಯ ತದಿಗೆ) ಪರ್ವ ದಿನವು ಹೆಚ್ಚು ಜನಪ್ರಿಯವಲ್ಲದಿದ್ದರೂ, ಬಹಳ ಮಹತ್ತರವಾದುದು ಹಾಗೂ ಶ್ರೇಷ್ಠವಾದುದು. ನಂಬಿಕೆಯ ದೃಷ್ಟಿಯಿಂದ ಅತಿ ಪುರಾತನವಾದುದೂ ಸಹ. ಈ ಹಬ್ಬವು ನಮ್ಮ ನಿತ್ಯ ಜೀವನದಲ್ಲಿ ದವಸ-ಧಾನ್ಯ, ಹೊನ್ನು, ಸಂಪತ್ತು, ದಾನ, ಉಪವಾಸಾದಿಗಳ ಮೂಲಕ ಬೆಸೆದುಕೊಂಡಿದೆ. ಈ ರಸಪ್ರಶ್ನೆಯಲ್ಲಿ ನಾವು ಆ ಸಂಬಂಧದ ಎಳೆಗಳನ್ನು ಅರಿತುಕೊಳ್ಳೋಣ. ನಿತ್ಯವೂ ಲಕ್ಷಾಂತರ ಮಕ್ಕಳಿಗೆ ಯಾರು ಭೋಜನ ವ್ಯವಸ್ಥೆಯನ್ನು ಮಾಡುತ್ತಾರೆ? ಕುಬೇರ, ಗಂಗೆ, ಶ್ರೀಗಂಧ ಹಾಗೂ ಕಬ್ಬಿನಹಾಲು – ಈ ಹಬ್ಬದಿಂದ ಜೊತೆ ಇವರ ನಂಟೇನು? ಬನ್ನಿ, ತಿಳಿದುಕೊಳ್ಳೋಣ.

ಹನುಮಂತನ ಕಥೆಗಳ ರಸಪ್ರಶ್ನೆ

ನಮಗೆಲ್ಲಾ ಅತಿ ಪ್ರೀತಿ ಪಾತ್ರನಾದ ದೇವರುಗಳಲ್ಲಿ ಒಬ್ಬ, ಹನುಮಂತ.
ಆಂಜನೇಯನ ಕಥೆಗಳೂ ಸಾವಿರಾರು. ಹನುಮಾನ್ ಜಯಂತಿಯಾದ ಇಂದು, ಅವನ ೧೨ ಜನಪ್ರಿಯ ಕಥೆಗಳನ್ನು ನೆನಪಿಸಿಕೊಳ್ಳೋಣ. ನೈಷ್ಠಿಕ ಬ್ರಹ್ಮಚಾರಿಯಾದ ಇವನಿಗೆ ಮಗನಿರುವನೇ? ಮಹಾಭಾರತದಲ್ಲಿ ಅತಿ ಪರಾಕ್ರಮಿಯಾದ ದೈವಾಂಶ ಸಂಭೂತನಾದ ಇವನ ತಮ್ಮನಾರು?… ಜೈ ಬಜರಂಗ ಬಲಿ!

ಆದಿಕವಿಯ ನಂತರ ಆದಿಕಾವ್ಯ

ಪರಿಚಯ: ನಾವೆಲ್ಲರೂ ರಾಮಾಯಣವನ್ನು ಸ್ವತಃ ಓದುವ ಮೊದಲು ಕೇಳಿದೆವು. ಹಾಗಾಗಿ ಹಲವಾರು ಪ್ರಕಾರಗಳ ರಾಮಾಯಣಗಳನ್ನೂ, ನುಡಿಗಟ್ಟುಗಳನ್ನೂ ಕೇಳಿರುವುದು ನಮ್ಮೆಲ್ಲರ ಅನುಭವ. ಹೀಗೆ ಕೇಳಿರುವ ಕಥೆಯ ಕೆಲವು ಭಾಗಗಳು ಮೂಲದ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುವುದಿಲ್ಲ. ಆದಿಕವಿಗಳ ನಂತರದ ಕವಿಗಳು ಅವುಗಳನ್ನು ಸೇರಿಸಿದ್ದಾರೆ. ಮೂಲ ಕಥಾನಕದ ಭಾವಕ್ಕೆ ಇಂಬು ಕೊಡುವ ಈ ಭಾಗಗಳು ಆ ಮೂಲದ ಕಥೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿವೆ. ಹಾಗಾಗಿ ಜನಮಾನಸದ ನೆನಪಿನಂಗಳದಲ್ಲಿಯೂ ಅಚ್ಚಳಿಯದೇ ನಿಂತಿವೆ. ಇಂತಹ ರೋಚಕವಾದರೂ ಪ್ರಕ್ಷಿಪ್ತವಾದ ಘಟನಾವಳಿಗಳನ್ನು ಶ್ರೀ ಅರ್ಜುನ್ ಭಾರದ್ವಾಜ್ ಅವರು ಬರೆದಿರುವ ‘The essential ramayana’ ಪುಸ್ತಕವು ನಮಗೆ ಸಂಗ್ರಹ ಮಾಡಿ ಕೊಡುತ್ತದೆ. ಈ ರಸಪ್ರಶ್ನೆಯಲ್ಲಿ ಅಂತಹ ೧೨ ಲೋಕಪ್ರಚುರವಾದ ಘಟನೆಗಳನ್ನು ಆಯ್ದು ಪ್ರಶ್ನೆಗಳಾಗಿ ತಂದಿದ್ದೇವೆ. ವಿಜಯಿಗಳಲ್ಲಿ ಐವರು ಶ್ರೀ ಅರ್ಜುನ್ ಭಾರದ್ವಾಜ್ ಅವರ ಪುಸ್ತಕವನ್ನು ಗೆಲ್ಲುವರು. ನಿಮ್ಮನ್ನು ಹಲವು ಕ್ಷಣಗಳು ರಾಮಾಯಣ ಲೋಕದಲ್ಲಿ ವಿಹರಿಸುವಂತೆ ಮಾಡುತ್ತೇವೆ. ಬನ್ನಿ ಹೋಗೋಣ!

ಉಗಾದಿ ಗುಡಿ ಪಾಡ್ಯ ರಸಪ್ರಶ್ನೆ

ಯುಗಾದಿ ಹಾಗೂ ಗುಡಿಪಡ್ವಾ ಪರ್ವಗಳು ದಾಕ್ಷಿಣಾತ್ಯರಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೊಸ ವರ್ಷವನ್ನು ಹೀಗೆ ಆಚರಿಸಲಾಗುತ್ತದೆ. ಈ ರಸಪ್ರಶ್ನೆಯಲ್ಲಿ, ಭಾರತದ ದಕ್ಷಿಣ ಭಾಗಗಳನ್ನು ಆಳಿದ, ಗತಿಸಿದ ಕಾಲದಲ್ಲಿ ನಾವುಗಳು ಮರೆತ ಅತಿ ಪ್ರಭಾವಶಾಲಿ ಅರಸೊತ್ತಿಗೆಗಳ ಬಗ್ಗೆ ತಿಳಿದುಕೊಳ್ಳೋಣ. ದಕ್ಷಿಣವನ್ನು ಆಳಿದ ಅತ್ಯಂತ ಪ್ರಾಚೀನ ರಾಜವಂಶ ಯಾವುದು? ಎಲ್ಲೋರ ಗುಹ್ಯ ದೇವಾಲಯಗಳ ನಿರ್ಮಾತ್ರರು ಯಾರು? ಹಿಂದೂ ದೇವಾಲಯದ ತೂಗುತೊಟ್ಟಿಲು ಎಂದು ಯಾವ ಜಾಗವು ವಿಖ್ಯಾತವಾಗಿದೆ? ಅದರ ಕೀರ್ತಿ ಯಾರಿಗೆ ಸಲ್ಲುತ್ತದೆ? ಈ ವಿಚಾರಗಳನ್ನು ತಿಳಿಯಲು ಉತ್ಸುಕರೇ ? ಬನ್ನಿ….

5 ಅದೃಷ್ಟಶಾಲಿ ರಸಪ್ರಶ್ನೆ ಸ್ಪರ್ಧಿಗಳು ಪುಸ್ತಕವನ್ನು ಗೆಲ್ಲುತ್ತಾರೆ.