ದೀಪಾವಳಿ ರಸಪ್ರಶ್ನೆ

ವಿವಿಧ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸುವ ಹಬ್ಬ ದೀಪಾವಳಿ. ಶ್ರೀ ರಾಮ, ಶ್ರೀ
ಲಕ್ಷ್ಮೀ, ಕಾಳಿಕಾ ದೇವಿ ಹಾಗೂ ಶ್ರೀ ಕೃಷ್ಣರೆಲ್ಲರೂ ಈ ಆಚರಣೆಗಳ ಪಾಲುದಾರರು. ಈ
ರಸಪ್ರಶ್ನೆಯಲ್ಲಿ ನಾವು ದೀಪಾವಳಿಗೆ ಸಂಬಂಧಿಸಿದ ಹಲವಾರು ಕಥೆಗಳಲ್ಲಿ ಒಂದಾದ ಶ್ರೀ ಕೃಷ್ಣನ
ನರಕಾಸುರ ವಿಜಯದ ಹಲವು ಮಗ್ಗುಲುಗಳನ್ನು ತಿಳಿದುಕೊಳ್ಳೋಣ. ಈ ರಸಪ್ರಶ್ನೆಯಲ್ಲಿ ಭಾಗವಹಿಸುವ
ಐದು ಭಾಗ್ಯಶಾಲಿಗಳು ಅಮಿ ಗಣತ್ರ ಅವರ Ramayana Unravelled ಪುಸ್ತಕದ ವಿಜೇತರಾಗುವರು.
ನವದುರ್ಗಾ ರಸಪ್ರಶ್ನೆ

ದೇವಿಯನ್ನು ಲೆಕ್ಕವಿಲ್ಲದಷ್ಟು ರೂಪಗಳಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ
ಒಂಬತ್ತು ದಿನಗಳಲ್ಲಿ ಪೂಜಿಸಲ್ಪಡುವ ದುರ್ಗೆಯ ಒಂಬತ್ತು ರೂಪಗಳಾದ ನವದುರ್ಗೆಯರನ್ನು ನಾವು
ಒಳಗೊಳ್ಳುತ್ತೇವೆ. ದೇವಿ ಮಹಾತ್ಮ್ಯ ಸ್ತೋತ್ರ ಮತ್ತು ಆರ್ಟ್ ಆಫ್ ಲಿವಿಂಗ್‌ನ ವ್ಯಾಖ್ಯಾನವು
ನಮ್ಮ ಮುಖ್ಯ ಮೂಲಗಳಾಗಿವೆ.
ವಿಶ್ವಕರ್ಮ ಮತ್ತು ಅಭಿಯಂತರರ ದಿನದ ರಸಪ್ರಶ್ನೆ

ಭಾರತೀಯ ತಂತ್ರಜ್ಞಾನವನ್ನು ವಿಶ್ವಕರ್ಮ ದಿನದಂದು(
ಸೆಪ್ಟೆಂಬರ್ ೧೭) ಮತ್ತು ಅಭಿಯಂತರರ ದಿನಾಚರಣೆ ( ಸೆಪ್ಟೆಂಬರ್ ೧೫) ರಂದು ಸ್ಮರಿಸಿ
ಸಂಭ್ರಮಿಸೋಣ.ಈ ರಸಪ್ರಶ್ನೆ , ತಂತ್ರಜ್ಞಾನದ ಅಧಿದೇವತೆ ವಿಶ್ವಕರ್ಮನನ್ನು ಮತ್ತು ಭಾರತ ರತ್ನ
ಸರ್. ಎಂ. ವಿಶ್ವೇಶ್ವರಯ್ಯನವರನ್ನು ಸ್ಮರಿಸುತ್ತದೆ. ಐದು ಅದೃಷ್ಟಶಾಲಿ ವಿಜೇತರಿಗೆ ಬಿಬೇಕ್
ದೇಬ್ರಾಯ್ ಅವರ ಭಗವದ್ಗೀತೆ ಹೊತ್ತಿಗೆಯನ್ನು ಬಹುಮಾನವಾಗಿ ಕೊಡಲಾಗುವುದು.
ಓಣಂ ರಸಪ್ರಶ್ನೆ

ಓಣಂ ಕೇರಳದ ಅತ್ಯಂತ ಜನಪ್ರಿಯ ಹಬ್ಬ. ಇದರ ಮೂಲವು ವಾಮನ
ಅವತಾರದಲ್ಲಿ ಬೇರೂರಿದೆ. ಈ ರಸಪ್ರಶ್ನೆಯು ವಾಮನ ಅವತಾರದ 12 ಆಸಕ್ತಿದಾಯಕ ವಿವರಗಳನ್ನು
ಪ್ರಸ್ತುತಪಡಿಸುತ್ತದೆ. ಬಲಿಯ ಪೂರ್ವಜ ಯಾರು? ಕೃಷ್ಣನು ಬಲಿಯೊಂದಿಗೆ ಹೇಗೆ ಸಂಪರ್ಕ
ಹೊಂದಿದ್ದಾನೆ? 5 ಅದೃಷ್ಟಶಾಲಿ ರಸಪ್ರಶ್ನೆದಾರರು ಬಿಬೇಕ್ ಡೆಬ್ರಾಯ್ ಅವರ ಭಗವದ್ಗೀತೆಯನ್ನು
ಉಡುಗೊರೆಯಾಗಿ ಸ್ವೀಕರಿಸುತ್ತಾರೆ.
ಗಣಪತಿ ರಸಪ್ರಶ್ನೆ

ತಿರುವನಂತಪುರದಿಂದ ಹಿಡಿದು , ಸಿಕ್ಕಿಂ, ಮುಂಬೈ, ತ್ರಿಪುರ ಅಥವಾ ಮೌಂಟ್ ಅಬುವಿನಲ್ಲಿ- ಭಾರತದ ಎಲ್ಲಾ ಮೂಲೆಗಳಲ್ಲಿ ನೀವು, ಗಣೇಶನನ್ನು ನೋಡಬಹುದು. ಇದು ‘ಭಾರತ್ ಚ ರಾಜ’ ಕುರಿತು 12 ಪ್ರಶ್ನೆಗಳ ರಸಪ್ರಶ್ನೆ. ಇದರಲ್ಲಿ ನಾವು ನಿಮಗೆ ಶ್ಲೋಕಗಳು, ಪೆಂಡಾಲ್‌ಗಳು ಹಾಗೂ ಇತರೇ ಹಬ್ಬಗಳಲ್ಲಿ ಗಣಪತಿ ಪೂಜೆಯನ್ನು ತೋರಿಸುತ್ತೇವೆ . ರಸಪ್ರಶ್ನೆ ಕೈಗೊಂಡ 5 ಅದೃಷ್ಟಶಾಲಿಗಳಿಗೆ ಗಣೇಶನ ಕುರಿತು ಅದ್ಭುತವಾದ ಸಚಿತ್ರ ಪುಸ್ತಕ ದೊರೆಯುತ್ತದೆ
ಜನ್ಮಾಷ್ಟಮಿ’ – ರಸಪ್ರಶ್ನೆ

2025ರಲ್ಲಿ ಸ್ವಾತಂತ್ರ್ಯ ದಿನ ಮತ್ತು ಜನ್ಮಾಷ್ಟಮಿ ಒಂದರ
ಹಿಂದೊಂದರಂತೆ ಬರುತ್ತವೆ. ಇದು ಬಹಳ ಅರ್ಥಪೂರ್ಣವಾಗಿದೆ, ಏಕೆಂದರೆ ಈ ಎರಡೂ ಪರ್ವಕಾಲಗಳ
ಸಮ್ಮಿಲನವು ನಾಗರೀಕತೆ ಮತ್ತು ಧರ್ಮದ ಪುನರುತ್ಥಾನವನ್ನು ಸಂಕೇತಿಸುತ್ತದೆ. ಭಗವಾನ್ ಕೃಷ್ಣನ
ಸಂದೇಶವು ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾಪುರುಷರನ್ನು ಹೇಗೆ ಪ್ರಚೋದಿಸಿತು ಎಂಬುದನ್ನು
ಒಮ್ಮೆ ಗಮನಿಸೋಣ.
ರಕ್ಷಾಬಂಧನ ರಸಪ್ರಶ್ನೆ

ಪುರಾಣಗಳಲ್ಲಿ ಹಲವಾರು ಅಭೂತಪೂರ್ವ ಮಹಿಳೆಯರ ಕಥೆಗಳಿವೆ. ರಕ್ಷಾಬಂಧನದಂದು ಇಂತಹ ಕೆಲವು ಸ್ಪೂರ್ತಿದಾಯಕ ಕಥೆಗಳನ್ನು ತಿಳಿದುಕೊಳ್ಳೋಣ. ಇಂತಹ ಕಥೆಗಳು ನಮಗೆ ಉತ್ತಮ ನೀತಿಯನ್ನು ಹಾಗೂ ಜೀವನ ದರ್ಶನವನ್ನು ಮಾಡಿಸುತ್ತವೆ. ಎಲ್ಲರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.
ತುಳಸಿದಾಸ ಜಯಂತಿ ರಸಪ್ರಶ್ನೆ

ಜುಲೈ 31 ತುಳಸಿದಾಸರ ಜಯಂತಿ.
ರಾಮಚರಿತಮಾನಸ ಅಥವಾ ಪ್ರೀತಿಯಿಂದ ಮಾನಸ ಎಂದೂ ಕರೆಯಲ್ಪಡುವ ಈ ಹೊತ್ತಿಗೆ ಉತ್ತರದ ಅನೇಕರಿಗೆ ಪವಿತ್ರ ಗ್ರಂಥ.
ಮಾನಸ ಅತ್ಯಂತಭಾವ ಪೂರ್ಣ ಭಕ್ತಿಕಾವ್ಯ ಹಾಗೂ ಜಟಿಲವಾದ ಹಿಂದೂತತ್ತ್ವಶಾಸ್ತ್ರದ – ಸಾಮಾನ್ಯ ಜನರಿಗೂ ಅರ್ಥವಾಗುವಂಥ ಭಾಷೆಯಲ್ಲಿನ ಅತಿ ಸರಳ ಪ್ರಸ್ತುತಿ.
‘ತತ್ತ್ವಜ್ಞಾನಿಯಾಗಿ ತುಳಸಿ ದಾಸ’ ಮಾನಸದಲ್ಲಿ ಏನು ಹೇಳುತ್ತಾರೆಂದು ಈ ರಸಪ್ರಶ್ನೆಯಿಂದ ತಿಳಿಯಬಹುದು.
ಐದು ಅದೃಷ್ಟಶಾಲಿ ರಸಪ್ರಶ್ನೆ ವಿಜೇತರು ಈ ಪುಸ್ತಕವನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ.
કારગિલ દિવસ ક્વિઝ

યુદ્ધો બહાદુર લડવૈયાઓ દ્વારા જીતવામાં આવે છે. કારગિલ એ મુશ્કેલીઓ સામેની આ બહાદુરીનું એક ઉત્તમ ઉદાહરણ હતું. આજે, કારગિલ દિવસ પર, અમે તમને આ ૧૨ પ્રશ્નોના ક્વિઝમાં ભારતના પરમવીર ચક્ર પુરસ્કાર વિજેતાઓની વાર્તાઓ લાવીએ છીએ.પ્રથમ પુરસ્કાર વિજેતા કોણ હતા, સૌથી નાના કોણ હતા, જે હવામાં મૃત્યુ પામ્યા? કોણ કોઈ માટે મૃત્યુ પામ્યા નહીં અને કોણ બીજા ભૂમિ માટે મૃત્યુ પામ્યા?
ಗುರು ಪೂರ್ಣಿಮಾ ರಸಪ್ರಶ್ನೆ

ಉಪನಿಷತ್ತುಗಳು ವೇದಾಂತ – ಭಾರತೀಯ ತತ್ವಶಾಸ್ತ್ರದ ಚಿಲುಮೆ. ಪ್ರಧಾನ ಉಪನಿಷತ್ತುಗಳು 10 (ಅಥವಾ 13).
ಈ ರಸಪ್ರಶ್ನೆಯಲ್ಲಿ ನಾವು ಪ್ರಧಾನ ಉಪನಿಷತ್ತುಗಳು ವಾಸ್ತವದ ಸ್ವರೂಪವನ್ನು ಹೇಗೆ ವಿವರಿಸುತ್ತವೆ ಎಂಬುದನ್ನು ನೋಡುತ್ತೇವೆ. (‘ಬ್ರಹ್ಮ ಸತ್ಯ ಜಗತ್ ಮಿಥ್ಯ’).
ನಮ್ಮ ರಸಪ್ರಶ್ನೆಯು ಉಪನಿಷತ್ ವಿದ್ವಾಂಸರಾದ ಶ್ರೀಮತಿ ಗೀತಾ ಕುಲಕರ್ಣಿ ಅವರ ಎಂಫಿಲ್ ಪ್ರಬಂಧ ಮತ್ತು ಇತರ ಮೂಲಗಳಿಂದ ಪ್ರೇರಿತವಾಗಿದೆ. ಅವರಿಗೆ ನಮ್ಮ ಕೃತಜ್ಞತೆಗಳು.
