ನೀರಿನ ಅಧಿದೇವತೆಯಾದ ವರುಣನ ಕುರಿತಾದ ರಸಪ್ರಶ್ನೆ

ಮಳೆಗಾಲದ ಆಗಮನವಾಗಿದೆ. ವೇದಗಳಲ್ಲಿ, ದೇವೇಂದ್ರನು ಮಳೆಯನ್ನು ದಯಪಾಲಿಸಿದರೆ, ಸಮಸ್ತ ಜಲರಾಶಿಗೆ ಒಡೆಯನು ವರುಣ ದೇವನು.ಶ್ವೇತ ಛತ್ತ್ರಿಯಿಂದ ಅಲಂಕೃತನಾಗಿ, ತನ್ನ ಪಾಶದಿಂದ ತಪ್ಪು ಮಾಡಿದವರ ಪಾಲಿಗೆ ಭಯಕಾರಕನಾಗಿ, ಜಲಧಿ ಎಂಬ ಮಕರ ವಾಹನವಾದ ವರುಣ ದೇವನ ಬಗ್ಗೆ ತಿಳಿದುಕೊಳ್ಳೋಣ. ಈ ರಸಪ್ರಶ್ನೆಗೆ ಮೂಲ ಆಕರ ಡಾ. ಉಷಾ ಚೌಹಾಣ್ ಅವರ “ ಭಾರತೀಯ ಕಥಾಪ್ರಕಾರದಲ್ಲಿ ಇಂದ್ರ ಮತ್ತು ವರುಣ” ಎಂಬ ಕೃತಿ.
ಆಸನಗಳ ರಸಪ್ರಶ್ನೆ

ಯೋಗವು ಕೇವಲ ಒಂದು ವ್ಯಾಯಾಮವಲ್ಲ. ಅದೊಂದು ದರ್ಶನ. ನಮ್ಮ ಭಾರತೀಯ ಸಾಂಪ್ರದಾಯಿಕ ಆರು ತತ್ತ್ವಶಾಸ್ತ್ರಗಳಲ್ಲಿ ಯೋಗಶಾಸ್ತ್ರವೂ ಒಂದು. ಯೋಗವು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವ ಒಂದು ಆಧ್ಯಾತ್ಮಿಕ ಪ್ರಕಾರ ಆದರೂ, ಇಂದು ಯೋಗ ಎಂದರೆ ಜನರಲ್ಲಿ ‘ಆಸನಗಳು’ ಅಥವಾ ಕೇವಲ ಭಂಗಿಗಳು ಎಂಬಂತೆ ಆಗಿಬಿಟ್ಟಿದೆ. ಆಸನಾದಿ ವ್ಯಾಯಾಮಗಳು ಯೋಗದ ಪ್ರಮುಖ ಭಾಗ ಹೌದು, ಆದರೆ ಇದೇ ಯೋಗವಲ್ಲ. ಈ ಯೋಗ ದಿನದಂದು, ನಾವು ಆಸನಗಳ ಜಗತ್ತನ್ನು ಇನ್ನಷ್ಟು ಹತ್ತಿರದಿಂದ ಅನ್ವೇಷಿಸೋಣ.
ಸಾಂಪ್ರದಾಯಿಕ ಹವಾ ನಿಯಂತ್ರಣ

ಭಾರತದ ಸಾಂಪ್ರದಾಯಿಕ ವಾಸ್ತು ಶಿಲ್ಪ ನೈಸರ್ಗಿಕವಾಗಿ ಬೇಸಿಗೆ ತಾಪಮಾನವನ್ನು ಎದುರಿಸುತ್ತಿತ್ತು. ಈ ರಸಪ್ರಶ್ನೆಯ ಮೂಲಕ ಸಾಂಪ್ರದಾಯಿಕ ವಾಸ್ತು ಶಿಲ್ಪದ ಸಾತ್ವಿಕ ಮತ್ತು ಶಕ್ತಿರಹಿತ ಕಾವಿಳಿಕೆ ವ್ಯವಸ್ಥೆಗಳನ್ನು ನೆನಪಿಸಿಕೊಳ್ಳೋಣ.
ಭಾರತದ ಕವಿಗಳು

ಇಂದು ಮೇ 9 ಟ್ಯಾಗೋರ್ ಜಯಂತಿ. ಭಾರತದ ಕವಿಗಳು ನಮ್ಮ ಧರ್ಮ ನಿಷ್ಠೆ, ಭಕ್ತಿ ,ಸಮಾಜ ಸುಧಾರಣೆ , ಸ್ವಾತಂತ್ರ್ಯ ಚಳುವಳಿಯ ಸ್ವರೂಪವನ್ನು ತಮ್ಮ ಕೃತಿಗಳ ಮೂಲಕ ಸಂಯೋಜಿಸಿದರು. ಈ ರಸಪ್ರಶ್ನೆ ನಿಮ್ಮನ್ನು 10ನೇ ಶತಮಾನದ ನಂತರದ 12 ಕವಿಗಳ ಬಳಿ ಕೊಂಡೊಯ್ಯುತ್ತವೆ.
ನರಸಿಂಹ ಜಯಂತಿ ಪ್ರಶ್ನಾವಳಿ

ಇಂದು ನರಸಿಂಹ ಜಯಂತಿ, ಏಪ್ರಿಲ್ ೩೦ ನೆಯ ದಿನಾಂಕ. ಮಹಾವಿಷ್ಣುವು ನರನೂ ಸಿಂಹನೂ ಆಗಿ ಪ್ರಕಟಗೊಂಡದ್ದೇ ನರಸಿಂಹಾವತಾರ. ದಶಾವತಾರಗಳಲ್ಲಿ ವಿಷ್ಣುವು ಪ್ರಾಣಿಯಾಗಿ ಅವತಾರವೆತ್ತಿದ ನಾಲ್ಕು ಅವತಾರಗಳಲ್ಲಿ ಕಡೆಯದು ಇದು. ನಮ್ಮ ಸಂಪ್ರದಾಯದಲ್ಲಿ ಕೆಲವು ಪ್ರಾಣಿಗಳು ದೈವಗಳಾಗಿ, ದೇವತಾ ವಾಹನಗಳಾಗಿ ಪೂಜ್ಯವೆನಿಸಿವೆ. ನಮ್ಮ ದೇವತೆಗಳಾದ ಹನುಮಂತ ಹಾಗೂ ಗಣೇಶರು ಪ್ರಾಣಿಗಳ ರೂಪದಲ್ಲಿರುವುದು ಇದಕ್ಕೆ ಸಾಕ್ಷಿ. ಈ ಪ್ರಶ್ನೋತ್ತರದಲ್ಲಿ ಹಿಂದೂ ಧರ್ಮದಲ್ಲಿನ ೧೨ ಪೂಜ್ಯ ಪ್ರಾಣಿಗಳು ಒಳಗೊಂಡಿವೆ. ಈ ಪ್ರಶ್ನೋತ್ತರಕ್ಕೆ ಮೂಲ ನಂದಿತಾ ಕೃಷ್ಣ ಅವರ “Sacred Animals of India” ಎಂಬ ಪುಸ್ತಕ.
ವಿಶಾಲ ಹಿಂದೂ ಗ್ರಂಥಾಲಯ
ಇಂದು, ಏಪ್ರಿಲ್ ೨೧,೨೦೩೬, ಆದಿ ಶಂಕರಾಚಾರ್ಯರ ಜಯಂತಿ. ಅವರು ನಮಗೆ ಹಲವಾರು ಭಾಷ್ಯ, ಸ್ತೋತ್ರ, ತತ್ವಶಾಸ್ತ್ರಗಳ ಗ್ರಂಥಭಂಡಾರವನ್ನೇ ಬಿಟ್ಟು ಹೋಗಿದ್ದಾರೆ.ಇವರ ಕೃತಿಗಳು ಭಾರತೀಯ ಪುರಾತನ ಗ್ರಂಥಗಳ ಬೃಹತ್ ಗ್ರಂಥಾಲಯದ ಒಳಗಿರುವ ಮತ್ತೊಂದು ಗ್ರಂಥಾಲಯದಷ್ಟಿವೆ.
ಸ್ವಾಮಿ ಚಿನ್ಮಯಾನಂದರು ಒಮ್ಮೆ ‘ಪ್ರತಿ ಧರ್ಮದಲ್ಲಿ ಒಂದು ಪವಿತ್ರ ಗ್ರಂಥವಿರುತ್ತದೆ, ಆದರೆ ಹಿಂದೂ ಧರ್ಮದಲ್ಲಿ ಹೇಳುವುದಾದರೆ ಇದೋ ಬನ್ನಿ ನನ್ನ ಗ್ರಂಥಾಲಯಕ್ಕೆ ಸ್ವಾಗತ’ ಎಂದು ಹೇಳಿದ್ದರು. ಆದ್ದರಿಂದ ನಿಮಗೆ ಈ ಗ್ರಂಥಗಳ ಪರಿಚಯನೀಡಲು ನಾವು ಈ ರಸಪ್ರಶ್ನೆಯಲ್ಲಿ ೧೨ ಮುಖ್ಯ ಗ್ರಂಥಗಳ ಬಗ್ಗೆ ಕಿರು ಮಾಹಿತಿ ನೀಡಿದ್ದೇವೆ. ಇದು ಹಿಂದೂ ಜ್ಞಾನ ಭಂಡಾರದ ಬೃಹತ್ ಸಾಗರದಲ್ಲಿ ಒಂದು ಹನಿ ಮಾತ್ರ.
ರಸಪ್ರಶ್ನೆಗೆ ಮೂಲ ಆಧಾರ ಎರಡು ಸುಂದರ ಪುಸ್ತಕಗಳು ಶತಾವಧಾನಿ ಆರ್. ಗಣೇಶ್ ಅವರ “ದಿ ಎಸೆನ್ಷಿಯಲ್ ಸನಾತನ ಧರ್ಮ”, ಹರಿ ರವಿಕುಮಾರ್ ಅವರ ಅನುವಾದ ಮತ್ತು ಏಮಿ ಗಣಾತ್ರ ಅವರ “ವೈ ಆರ್ ವೀ ಲೈಕ್ ದಿಸ್ ಓನ್ಲಿ”, “ಎ ಗೈಡ್ ಟು ಹಿಂದೂ ಶಾಸ್ಟ್ರಾಸ್” .
ರಾಮಾಯಣದ ಮೋಡಿ

ಆದಿಕವಿ ವಾಲ್ಮೀಕಿಗಳ ಶ್ರೀ ರಾಮಕಥೆಯು ನೃತ್ಯ, ನಾಟಕ, ಶಿಕ್ಷಣ ಮುಂತಾದ ಅನೇಕ ಕಾರಣಗಳಿಗಾಗಿ ಪುನಃ ಪುನಃ ಹೇಳಲ್ಪಟ್ಟಿರುವ ಹಾಗೂ ವಿನೂತನವಾಗಿ ರಚನೆಯಾಗಿರುವ, ಎಲ್ಲರಿಗೂ ಪ್ರೀತಿ ಪಾತ್ರವಾದ ಕಥಾನಕ. ಈ ದಿನ ರಾಮನವಮಿಯಂದು ಸಂಸ್ಕೃತ ಮತ್ತು ಪ್ರಾಕೃತ ಸಾಹಿತ್ಯ ಕೃತಿಗಳಲ್ಲಿರುವ ರಾಮಕಥೆಗಳ ಬಗ್ಗೆ ತಿಳಿದುಕೊಳ್ಳೋಣ. ನಾವಿಲ್ಲಿ ಉಪಯೋಗಿಸಿರುವ ಮೂಲಗಳು, ಶ್ರೇಷ್ಠ ವಿದ್ವಾಂಸರಾದ ಡಾ. ವಿ. ರಾಘವನ್ ಹಾಗೂ ಡಾ. ಕ್ಯಾಮೆಲ್ ಬಲ್ಕ ಅವರದ್ದು.
ಪುರಾಣಗಳಲ್ಲಿ ಖಗೋಲಶಾಸ್ತ್ರ – ಒಂದು ರಸಪ್ರಶ್ನೆ

ನಮ್ಮ ಪುರಾಣಗಳು ಕಥಾನಕಗಳ ರೂಪದಲ್ಲಿ ಖಗೋಳಶಾಸ್ತ್ರಕ್ಕೆ ಸಂಬಂಧಿತವಾದ ಅಪಾರ ಜ್ಞಾನ ಸಂಪತ್ತನ್ನು ಹೊಂದಿವೆ. ನವವರ್ಷವಾದ ಯುಗಾದಿ, ಗುಡಿಪಡ್ವಾ, ಬೈಸಾಖಿ ಹಾಗೂ ಹಲವಾರು ವೈವಿಧ್ಯಗಳ ಆಚರಣೆಯ ಶುಭಾವಸರದಲ್ಲಿ ನಾವು, ಖಗೋಲ ಶಾಸ್ತ್ರಕ್ಕೆ ಸಂಬಂಧಿಸಿದ 12 ಕಥೆಗಳನ್ನು ಈ ಪ್ರಶ್ನಾವಳಿಗಾಗಿ ಆಯ್ದುಕೊಂಡಿದ್ದೇವೆ. ಇದಕ್ಕೆ ಶ್ರೀ ರಾಜ್ ವೇದಮ್ ಅವರ ಉಪನ್ಯಾಸಗಳನ್ನು ಮೂಲ ಸ್ರೋತವಾಗಿ ಬಳಸಲಾಗಿದೆ.
ಚಿರಂತನ ಹೋಲಿ: ಒಂದು ಪ್ರಶ್ನಾವಳಿ

ನಮ್ಮ ಧರ್ಮಶಾಸ್ತ್ರ ಗ್ರಂಥಗಳನ್ನು ಸಂಪಾದಿಸಿಕೊಟ್ಟ, ಮಹಾಮಹೋಪಾಧ್ಯಾಯ ಡಾ|| ಪಿ. ವಿ. ಕಾಣೆಯವರು ಹೇಳುವಂತೆ, ವಸಂತ ಋತುವಿನ ಹೋಲಿ ಹಬ್ಬವು ಬಹಳ ಪುರಾತನವಾದುದು. ಬಣ್ಣದೋಕುಳಿಯ ಹೋಲಿಯ ಆಚರಣೆ ಹಾಗೂ ಹೋಲಿಕಾ ದಹನದ ಉಲ್ಲೇಖಗಳನ್ನು ನಮ್ಮ ಹಲವು ಪುರಾಣಗಳಲ್ಲಿ ಹಾಗೂ ಶಿಲ್ಪಗಳಲ್ಲಿ ಕಾಣಬಹುದು. ಹೋಲಿ ಆಚರಣೆಯು ಹೇಗೆ ಸಾಮುದಾಯಿಕ ಭಾವೈಕ್ಯತೆ ಹಾಗೂ ಸಾಮ್ರಸ್ಯಗಳ ಸಂಕೇತವೆಂದು ಈ ಪ್ರಶ್ನಾವಳಿಯು ಮನಗಾಣಿಸುತ್ತದೆ. ಈ ಪ್ರಶ್ನಾವಳಿಯ ಆಕರ ಸಾಮಗ್ರಿಗಳು ನಿತ್ಯಾನಂದ ಮಿಶ್ರರ ಫಸ್ಟ್ ಪೋಸ್ಟ್ ನಲ್ಲಿ ಮುದ್ರಿತವಾದ ಲೇಖನ ಹಾಗೂ ಲಿಯೋನಾ ಆಂಡರ್ಸನ್ ಅವರ ‘spring festivals’ ಪಸ್ತಕ.
ನಮ್ಮ ನಡುವೆ ಶಿವಾಜಿ

ಇಂದು (ಫೆಬ್ರವರಿ 19) ಶಿವಾಜಿ ಜಯಂತಿ. ಈ ರಸಪ್ರಶ್ನೆಯು ಸಂಸ್ಕೃತಿಯಲ್ಲಿ, ಸಂಕೇತಗಳಲ್ಲಿ, ಸ್ಥಳಗಳಲ್ಲಿ ಮತ್ತು ನಮ್ಮ ಸ್ವಂತ ಸ್ವಾತಂತ್ರ್ಯದಲ್ಲಿ ನಮ್ಮ ನಡುವೆ ಅನೇಕ ವಿಧಗಳಲ್ಲಿ ವಾಸಿಸುವ ಅವರ ಆದರ್ಶ ಮತ್ತು ಪರಂಪರೆಯದತ್ತ ನಮ್ಮನ್ನು ಕರೆದೊಯ್ಯುತ್ತದೆ. ಈ ರಸಪ್ರಶ್ನೆಯಲ್ಲಿ ಭಾಗವಹಿಸಿದ ಐದು ಅದೃಷ್ಟಶಾಲಿಗಳು ಡಾ. ಉದಯ್ ಕುಲಕರ್ಣಿ ಅವರ “ದಿ ಮರಾಠಾ ಸೆಂಚುರಿ” ಎಂಬ ಪುಸ್ತಕವನ್ನು ಉಡುಗೊರೆಯಾಗಿ ಪಡೆಯುವರು.
